ಮುಂಬೈ ಲೋಕಲ್ ಟ್ರೇನ್‌ನಲ್ಲಿ ಸೀಟಿನ ವಿಚಾರವಾಗಿ ಮಹಿಳೆಯರ ನಡುವೆ ದೊಡ್ಡ ಗಲಾಟೆ ನಡೆದಿದೆ. ಗಲಾಟೆ ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ, ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ.
ಮುಂಬೈ (ಅ.7): ಮುಂಬೈನ ನರನಾಡಿಯಾಗಿರುವ ಲೋಕಲ್ ಟ್ರೇನ್‌ನಲ್ಲಿ ಜಗಳ, ಗಲಾಟೆಗಳು ಆಗೋದು ಸಾಮಾನ್ಯ. ಯಾಕೆಂದರೆ, ಲೋಕಲ್ ಟ್ರೇನ್‌ನಲ್ಲಿ ದಿನನಿತ್ಯ ಪ್ರಯಾಣ ಮಾಡುವವರಿಗೆ ಇದೆಲ್ಲಾ ಒಂದು ವಿಚಾರವೇ ಅಲ್ಲ. ಆದರೆ, ಶುಕ್ರವಾರ ಮುಂಬೈ ಲೋಕಲ್ ಟ್ರೇನ್‌ನ ವಿಡಿಯೋವೊಂದು ದೊಡ್ಡ ಮಟ್ಟದಲ್ಲಿ ವೈರಲ್ ಅಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆಇನ ಜಗಳ ತಾರಕಕ್ಕೇರಿದ್ದು, ಇಬ್ಬರೂ ಜುಟ್ಟು ಹಿಡಿದುಕೊಂಡು ಜಗಳವಾಡಿಕೊಂಡಿದ್ದಾರೆ. ಈ ಮಾರಾಮಾರಿಯನ್ನು ತಡೆಯಲು ಯತ್ನಿಸಿದ ಮಹಿಳಾ ಪೇದೆಯೊಬ್ಬರಿಗೂ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಥಾಣೆ ಹಾಗೂ ಪನ್ವೇಲ್ ನಡುವಿನ ಲೋಕಲ್ ಟ್ರೇನ್‌ನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಪರಸ್ಪರ ಕೂದಲು ಎಳೆದುಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಗಲಾಟೆಯನ್ನು ಬಿಡಿಸಲು ಹೋದ ಶಾರದಾ ಉಗ್ಲೆ ಎನ್ನುವ ಮಹಿಳಾ ಪೇದೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸೀಟ್‌ನ ವಿಚಾರವಾಗಿ ಕೆಲವು ಮಹಿಳೆಯರು ತಮ್ಮ ತಮ್ಮ ನಡುವೆ ಹೊಡೆದಾಡಿಕೊಳ್ಳಲು ಆರಂಭಿಸಿದರು. ವೇಳೆ ನಮ್ಮ ಮಹಿಳಾ ಪೇದೆಯೊಬ್ಬರಿಗೆ ಗಾಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್.ಕಟಾರೆ (S.Katare)ಹೇಳಿದ್ದಾರೆ. ಆರಂಭದಲ್ಲಿ ಇಬ್ಬರೂ ಮಾತಿನಲ್ಲಿಯೇ ಗಲಾಟೆ ಮಾಡಿಕೊಳ್ಳುತ್ತಿದ್ದರು. ವಾಗ್ವಾದ ಜೋರಾದ ಬಳಿಕ ಹಲ್ಲೆಯನ್ನೂ ಮಾಡಿಕೊಂಡಿದ್ದಾರೆ. ಇದರಲ್ಲಿ ಮಹಿಳಾ ಪೇದೆ ಹಾಗೂ ಇನ್ನೊಬ್ಬ ಪ್ರಯಾಣಿಕರಿಗೆ ಗಾಯವಾಗಿದೆ.
ಅನನ್ಯಾ ಜೊತೆ ಮುಂಬೈ ಲೋಕಲ್ ಟ್ರೈನ್‌ನಲ್ಲಿ ವಿಜಯ್ ದೇವರಕೊಂಡ ಸುತ್ತಾಟ; ವಿಡಿಯೋ ವೈರಲ್
'ಮಹಿಳೆ ಹಾಗೂ ಆಕೆಯ ಮೊಮ್ಮಗಳು ಥಾಣೆಯಲ್ಲಿ(Thane) ಲೋಕಲ್ ಟ್ರೇನ್ (Local Train) ಏರಿದ್ದರು. ಈ ವೇಳೆ ಕೋಪರ್ಖೈರಾನೆಯಲ್ಲಿ ಇನ್ನೊಬ್ಬ ಮಹಿಳೆಯೊಬ್ಬಳು ರೈಲು ಏರಿದ್ದರು. ಇಬ್ಬರೂ ಕೂಡ ಸೀಟು ಖಾಲಿಯಾಗುವುದನ್ನೇ ಕಾಯುತ್ತಿದ್ದರು. ಟರ್ಭೆ ನಿಲ್ದಾಣದಲ್ಲಿ ಒಂದು ಸೀಟು ಖಾಲಿಯಾಯಿತು, ಅದರ ನಂತರ ಮಹಿಳೆ ತನ್ನ ಮೊಮ್ಮಗಳಿಗೆ ಸೀಟು ಪಡೆಯಲು ಪ್ರಯತ್ನಿಸಿದಳು. ಆದರೆ ಅದೇ ಸಮಯದಲ್ಲಿ ಇನ್ನೊಬ್ಬ ಮಹಿಳೆ ಕೂಡ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಆದರೆ, ಇದಾದ ಬಳಿಕ ಇಬ್ಬರು ನಡುವೆ ತೀವ್ರ ವಾಗ್ವಾದ ನಡೆದಿದೆ. ಕೆಲ ಹೊತ್ತಿನಲ್ಲಿ ಮಾತಿನ ಮೂಲಕ ನಡೆಯುತ್ತಿದ್ದ ಗಲಾಟೆ, ಮಾರಾಮಾರಿ ಹಂತಕ್ಕೆ ಏರಿತು. ಇವರನ್ನು ನಿಯಂತ್ರಿಸಲು (Mumbai Local Train) ಮಹಿಳಾ ಪೇದೆಯೊಬ್ಬರು ಪ್ರಯತ್ನಿಸಿದರಾದರೂ, ಅವರು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಇಬ್ಬರು ಮಹಿಳೆಯರು ಮಾತ್ರವೇ ಈ ಗಲಾಟೆಯಲ್ಲಿದ್ದರೆ, ನಂತರ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಇತರ ಮಹಿಳೆಯರು ಕೂಡ ಇದರಲ್ಲಿ ಸೇರಿಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರೀತಿಗೆ ಬಡತನವಿಲ್ಲ... ಮುಂಬೈ ಲೋಕಲ್ ರೈಲೊಳಗಿನ ಸುಂದರ ದೃಶ್ಯ ವೈರಲ್
ಬುಧವಾರ ರಾತ್ರಿ ಅಂದಾಜು 8 ಗಂಟೆಯ ಸುಮಾರಿಗೆ ಪನ್ವೆಲ್‌ಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ವಾಶಿ ಜಿಆರ್‌ಪಿ ಈ ಘಟನೆಯ ತನಿಖೆ ಮಾಡುತ್ತಿದ್ದು ಪ್ರಕರಣವನ್ನೂ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.