ಶಾಲೆಯ ಬಾತ್‌ರೂಮ್‌ನಲ್ಲಿ ಮಗುವಿಗೆ ಜನ್ಮ ನೀಡಿದ 16 ವರ್ಷದ ಬಾಲಕಿ, ಸ್ಥಳದಲ್ಲೇ ಸಾವು ಕಂಡ ಶಿಶು!

By Santosh NaikFirst Published Aug 2, 2024, 6:16 PM IST
Highlights

ಆಂಧ್ರಪ್ರದೇಶದಲ್ಲಿ 16 ವರ್ಷದ ಬಾಲಕಿಯೊಬ್ಬಳು ಶಾಲೆಯ ಸ್ನಾನಗೃಹದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
 

ಬೆಂಗಳೂರು (ಆ.2): ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋತಪಟ್ಟಣಂನಲ್ಲಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಸ್ನಾನಗೃಹದಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಜನ್ಮ ನೀಡಿದ ಬೆನ್ನಲ್ಲಿಯೇ ಗಂಡು ಮಗು ದಾರುಣ ಸಾವು ಕಂಡ ಘಟನೆ ನಡೆದಿದೆ. ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಪ್ರಥಮ ವರ್ಷದ ಇಂಟರ್ ಮೀಡಿಯೇಟ್ ಓದುತ್ತಿರುವ ವಿದ್ಯಾರ್ಥಿನಿ ಕಳೆದ ಎರಡು ತಿಂಗಳಿನಿಂದ ಹಾಸ್ಟೆಲ್‌ನಲ್ಲಿ ವಾಸ ಮಾಡುತ್ತಿದ್ದಳು. ಶಾಲೆಯ ಅಧಿಕಾರಿಗಳ ಪ್ರಕಾರ, ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸ್ನಾನಗೃಹಕ್ಕೆ ಹೋಗುವುದಾಗಿ ತಿಳಿಸಿದ್ದಳು ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಗಂಡು ಮಗು ಭೂಮಿಗೆ ಬರುವ ಮುನ್ನವೇ ಸಾವು ಕಂಡಿದೆ. ಬುಧವಾರ ಈ ಘಟನೆ ಸಂಭವಿಸಿದೆ. ಎಷ್ಟು ಹೊತ್ತಾದರೂ ಆಕೆ ಸ್ನಾನಗೃಹದಿಂದ ವಾಪಾಸ್‌ ಬರದ ಕಾರಣ, ಆಕೆಯ ಸಹಪಾಠಿಗಳು ಶಿಕ್ಷಕರಿಗೆ ಈ ಬಗ್ಗೆ ತಿಳಿಸಿದ್ದರು.

ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ. ಆಕೆ ತರಗತಿಗೆ ವಾಪಾಸ್‌ ಬರದೇ ಇದ್ದಾಗ ಮಾತ್ರವೇ ಆಕೆಗೆ ಏನಾಗಿರಬಹುದು ಎನ್ನುವ ಬಗ್ಗೆ ಕುತೂಹಲ ಉಂಟಾಗಿತ್ತು.  ವಿದ್ಯಾರ್ಥಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಒಂಗೋಲ್‌ನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.

Latest Videos

ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಕಾಲೇಜು ವಾಶ್ ರೂಂನಲ್ಲಿ ಹದಿನಾರರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಕೋತಪಟ್ಟಣಂ ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್ ಹೇಳಿದ್ದಾರೆ. ಎಷ್ಟೋ ಹೊತ್ತಾದರೂ ಆಕೆ ವಾಶ್‌ರೂಮ್‌ನಿಂದ ಹೊರಗೆ ಬರದಿರುವುದನ್ನು ಕಾಲೇಜು ಸಿಬ್ಬಂದಿ ಗಮನಿಸಿದ್ದಾರೆ. ಒಬ್ಬ ಮಹಿಳಾ ಉಪನ್ಯಾಸಕಿ ಒಳಗೆ ಹೋಗಿ ನೋಡಿದಾಗ ಅವಳ ಪಕ್ಕದಲ್ಲಿ ಒಂದು ಗಂಡು ಮಗು ಸತ್ತು ಬಿದ್ದಿರುವುದನ್ನು ಕಂಡಿದ್ದಾಳೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಒಂಗೋಲ್‌ನ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ನಾವು ಕೃಷ್ಣನನ್ನ, ಅವರು ಶಕುನಿಯನ್ನ ನೆನಪಿಸಿಕೊಳ್ತಾರೆ: ರಾಹುಲ್‌ ಗಾಂಧಿ ವಿರುದ್ಧ ಶಿವರಾಜ್‌ ಚೌಹಾಣ್‌ ವಾಗ್ದಾಳಿ!

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯಲ್ಲಿ ಚಿಮಕುರ್ತಿ ಮೂಲದ ವ್ಯಕ್ತಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 28 ವಾರಗಳ ಗರ್ಭಾವಸ್ಥೆಯ ನಂತರ ಸಾಯುವ ಮಗುವನ್ನು, ಆದರೆ ಜನನದ ಮೊದಲು ಅಥವಾ ಸಮಯದಲ್ಲಿ, ಅದನ್ನು ಸ್ಟಿಲ್‌ಬರ್ತ್‌ ಎಂದು ವರ್ಗೀಕರಣ ಮಾಡಲಾಗುತ್ತದೆ.

Wayanad Landslides: ಭೂಕುಸಿತ ಪ್ರದೇಶದಲ್ಲಿ ನಾಲ್ವರನ್ನ ರಕ್ಷಣೆ ಮಾಡಿದ ಭಾರತೀಯ ಸೇನೆ!

click me!