'ಪಾಕಿಸ್ತಾನದಿಂದ ಬರುತ್ತಿದ್ದ ಆಲಿಯಾ, ಮಾಲಿಯಾಗಳಿಗೆ ಬ್ರೇಕ್‌'

By Suvarna News  |  First Published Dec 28, 2019, 1:38 PM IST

ಪಾಕಿಸ್ತಾನದಿಂದ ಬರುತ್ತಿದ್ದ ಆಲಿಯಾ, ಮಾಲಿಯಾಗಳಿಗೆ ಬ್ರೇಕ್‌ ಹಾಕಿದ್ದೇವೆ| ಯೋಧರ ಶಿರಚ್ಛೇದ ಮಾಡಿದರೂ ಡಾ ಸಿಂಗ್‌ ಮಾತಾಡುತ್ತಿರಲಿಲ್ಲ| ಅಂಥ ಪರಿಸ್ಥಿತಿ ಈಗಿಲ್ಲ, 56 ಇಂಚಿನ ಮೋದಿ ಇದ್ದಾರೆ: ಅಮಿತ್‌ ಶಾ| ಮುಸ್ಲಿಮರ ಪೌರತ್ವ ಹೋಗುತ್ತೆ ಎಂಬುದನ್ನು ರಾಹುಲ್‌ ಸಾಬೀತುಪಡಿಸಲಿ


ಶಿಮ್ಲಾ[ಡಿ.28]: ಈ ಹಿಂದೆಲ್ಲಾ ಪಾಕಿಸ್ತಾನದಿಂದ ‘ಆಲಿಯಾ- ಮಾಲಿಯಾ- ಜಮಾಲಿಯಾ’ಗಳು ದೇಶಕ್ಕೆ ಬಂದು ಯೋಧರನ್ನು ಕೊಂದು ವಾಪಸ್‌ ಹೋಗುತ್ತಿದ್ದರು. ಅದಕ್ಕೆಲ್ಲಾ ಬಿಜೆಪಿ ಈಗ ಬ್ರೇಕ್‌ ಹಾಕಿದೆ ಎಂದು ಹೇಳುವ ಮೂಲಕ ಹಿಂದಿನ ಕಾಂಗ್ರೆಸ್‌ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಆಡಳಿತದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಟಿ ಬೀಸಿದ್ದಾರೆ.

ಇದೇ ವೇಳೆ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದ ಮುಸ್ಲಿಮರ ಪೌರತ್ವ ಹೋಗುತ್ತದೆ ಎಂಬ ಒಂದೇ ಒಂದು ಅಂಶವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಾಯ್ದೆಯಲ್ಲಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

Latest Videos

undefined

ಹಿಮಾಚಲಪ್ರದೇಶದ ಬಿಜೆಪಿ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಆಯೋಜಿಸಲಾಗಿದ್ದ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ದೇಶವನ್ನು ಕಾಂಗ್ರೆಸ್‌ 10 ವರ್ಷ ಆಳಿದೆ. ಸೋನಿಯಾ ಗಾಂಧಿ- ಮನಮೋಹನ ಸಿಂಗ್‌ ಸರ್ಕಾರ ಅಧಿಕಾರ ನಡೆಸಿದೆ. ಆಗೆಲ್ಲಾ ಪ್ರತಿನಿತ್ಯ ಆಲಿಯಾ- ಮಾಲಿಯಾ- ಜಮಾಲಿಯಾಗಳು ಪಾಕಿಸ್ತಾನದಿಂದ ಗಡಿ ದಾಟಿ ಬಂದು ಯೋಧರ ಶಿರಚ್ಛೇದ ಮಾಡುತ್ತಿದ್ದರು. ಅಂದಿನ ಪ್ರಧಾನಿಗಳು ಒಂದೇ ಒಂದು ಮಾತನ್ನೂ ಆಡುತ್ತಿರಲಿಲ್ಲ. ಅವರು ಗಡಿಯನ್ನೇ ತೆರೆದಿಟ್ಟಿದ್ದರು’ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ, ಅದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ, ಇದು ಕಾಂಗ್ರೆಸ್‌ ಸರ್ಕಾರವಲ್ಲ, ಮೌನಿ ಬಾಬಾ ಮನಮೋಹನ ಸಿಂಗ್‌ ಪ್ರಧಾನಿಯಾಗಿ ಉಳಿದಿಲ್ಲ. 56 ಇಂಚಿನ ಎದೆ ಹೊಂದಿರುವ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂಬುದು ಆ ದೇಶಕ್ಕೆ ಅರ್ಥವಾಗಲಿಲ್ಲ. ಹೀಗಾಗಿ ಉರಿ, ಪುಲ್ವಾಮಾದ ಮೇಲೆ ದಾಳಿ ಮಾಡುವ ಮೂಲಕ ತಪ್ಪು ಮಾಡಿತು. ಸರ್ಜಿಕಲ್‌ ಸ್ಟೆ್ರೖಕ್‌, ಏರ್‌ ಸ್ಟೆ್ರೖಕ್‌ ಮೂಲಕ ಅವರಿಗೆ ತಕ್ಕ ಪಾಠ ಕಲಿಸಲಾಯಿತು ಎಂದು ಅಬ್ಬರಿಸಿದರು.

ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!