ಕೊರೋನಾದಿಂದ ಗುಣವಾದ ತಕ್ಷಣ ಎವರೆಸ್ಟ್‌ಗೆ: ಐಐಟಿ ಪದವೀಧರ ಚೌಧರಿ ಸಾಧನೆ!

By Kannadaprabha NewsFirst Published Jul 12, 2021, 8:52 AM IST
Highlights

* ರಾಜಸ್ಥಾನ ಮೂಲದ ಐಐಟಿ ಪದವೀಧರನ ಸಾಹಸ

* ಕೋವಿಡ್‌ನಿಂದ ಗುಣವಾಗಿ ಕೆಲವೇ ದಿನದಲ್ಲಿ ಎವರೆಸ್ಟ್‌ ಏರಿದ

* ಎಲ್ಲರನ್ನೂ ಅಚ್ಚರಿಪಡಿಸಿದೆ ನೀರಜ್ ಚೌಧರಿ ಸಾಹಸ

ನವದೆಹಲಿ(ಜು,12): ಕೋವಿಡ್‌ನಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕು. ಅಂಥದ್ದರಲ್ಲಿ ರಾಜಸ್ಥಾನ ಮೂಲದ ಐಐಟಿ ಪದವೀಧರ ಮತ್ತು ಹಾಲಿ ರಾಜಸ್ಥಾನದ ಜಲಸಂಪನ್ಮೂಲ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ನೀರಜ್‌ ಚೌಧರಿ (37), ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವೇ ದಿನಗಳಲ್ಲೇ ವಿಶ್ವದ ಅತ್ಯುನ್ನತ ಹಿಮಶಿಖರವಾದ ಮೌಂಟ್‌ ಎವರೆಸ್ಟ್‌ (8848.86 ಮಿ. ಎತ್ತರ) ಏರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

2014ರಲ್ಲಿ ಪರ್ವತಾರೋಹಣದ ತರಬೇತಿ ಪಡೆದಿದ್ದ ನೀರಜ್‌, 2020ರಲ್ಲಿ ಎವರೆಸ್ಟ್‌ ಶಿಖರ ಏರಲು ಆಯ್ಕೆಯಾಗಿದ್ದರು. ಅದರಂತೆ ಮಾಚ್‌ರ್‍ನಲ್ಲಿ ನೇಪಾಳದಲ್ಲಿರುವ ಬೇಸ್‌ಕ್ಯಾಂಪ್‌ಗೆ ತೆರಳಿದ್ದ ವೇಳೆ ನೀರಜ್‌ಗೆ ಆಘಾತ ಎದುರಾಗಿತ್ತು. ಕಾರಣ ಅಲ್ಲಿ ಮಾ.27ರಂದು ಪರೀಕ್ಷೆ ವೇಳೆ ಅವರಲ್ಲಿ ಕೋವಿಡ್‌ ಪಾಸಿಟಿವ್‌ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರು ಜೈಪುರಕ್ಕೆ ಹಿಂದಿರುಗಿದ್ದರು. ಬಳಿಕ ಕೋವಿಡ್‌ನಿಂದ ಚೇತರಿಸಿಕೊಂಡ ನೀರಜ್‌, ಮತ್ತೆ ನೇಪಾಳಕ್ಕೆ ತೆರಳಿ ಮೇ 30ರಂದು ಶಿಖರ ಏರುವ ಯತ್ನ ಆರಂಭಿಸಿ ಮೇ 31ರಂದು ಯಶಸ್ವಿಯಾಗಿ ಎವರೆಸ್ಟ್‌ ಏರಿದ್ದಾರೆ.

‘ಈ ಯತ್ನ ಅಷ್ಟೇನು ಸುಲಭವಾಗಿರಲಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಅತ್ಯಂತ ಕಠಿಣ ಪ್ರಯತ್ನವಾಗಿತ್ತು. ಶಿಖರ ಏರಲು 36 ಗಂಟೆಗಳಲ್ಲಿ ಕನಿಷ್ಠ 3 ಬಾರಿ ಯತ್ನಿಸಿದ್ದೆ. ಏರುವ ವೇಳೆ ನಾನು ಕೋವಿಡ್‌ ಬಗ್ಗೆ ಒಂದಿನಿತೂ ಯೋಚಿಸುತ್ತಿರಲಿಲ್ಲ. ಬದಲಾಗಿ, ಈ ಶಿಖರ ಏರಲು ನಾನು ಎಷ್ಟುಶ್ರಮ ಪಟ್ಟಿದ್ದೇನೆ ಎಂದಷ್ಟೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಹೀಗೆ ನನಗೆ ನಾನೇ ಸ್ಫೂರ್ತಿ ತುಂಬಿಕೊಂಡಿದ್ದು, ನನ್ನ ಸಾಧನೆ ಕಾರಣವಾಯಿತು. ಹೀಗೆ ಸಾಕಷ್ಟುಶ್ರಮದ ನಂತರ ಶಿಖರ ಏರಿ ನಿಂತ ಮೇಲೆ ಸಾರ್ಥಕತೆಯ ಭಾವ ಮೂಡಿತ್ತು. ಅದು ಮರೆಯಲಾರದ ಅನುಭವ’ ಎಂದು ನೀರಜ್‌ ಹೇಳಿಕೊಂಡಿದ್ದಾರೆ.

click me!