Tomato ಬೆಲೆ ಇಳಿಕೆಗೆ ಯುಪಿ ಸಚಿವರು ಕೊಟ್ರು ಬೆಸ್ಟ್‌ ಐಡಿಯಾ!

Published : Jul 24, 2023, 11:26 AM ISTUpdated : Jul 24, 2023, 11:35 AM IST
Tomato ಬೆಲೆ ಇಳಿಕೆಗೆ ಯುಪಿ ಸಚಿವರು ಕೊಟ್ರು ಬೆಸ್ಟ್‌ ಐಡಿಯಾ!

ಸಾರಾಂಶ

ಈ ಹಣದುಬ್ಬರಕ್ಕೆ ಪರಿಹಾರವಿದೆ. ಮನೆಯಲ್ಲಿ ಟೊಮ್ಯಾಟೋ ಸಸಿಗಳನ್ನು ನೆಡಿ ಎಂದು ಹೇಳಿದರು. ನೀವು ಟೊಮ್ಯಾಟೋಗಳನ್ನು ತಿನ್ನದಿದ್ದರೆ ನಿಂಬೆಯನ್ನು ಬಳಸಿ. ಹೆಚ್ಚು ದುಬಾರಿಯಾಗಿರುವುದನ್ನು ತಿರಸ್ಕರಿಸಿ. ಅದು ತಾನೇ ತಾನಾಗಿ ಅಗ್ಗವಾಗುತ್ತದೆ ಎಂದು ಯುಪಿ ಸಚಿವರು ಹೇಳಿದ್ದಾರೆ.

ಹರ್ದೋಯಿ (ಜುಲೈ 24, 2023): ದೇಶಾದ್ಯಂತ ಟೊಮ್ಯಾಟೋ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಟೊಮ್ಯಾಟೋ ಮಾತ್ರವಲ್ಲದೆ, ಇತರೆ ತರಕಾರಿ ಸೇರಿ ಅನೇಕ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗ್ತಿದೆ. ಆದರೂ ಟೊಮ್ಯಾಟೋ ಬೆಲೆ ವಿಚಾರವಾಗಿ ಹೆಚ್ಚು ಚರ್ಚೆಯಾಗುತ್ತಿರುವ ನಡವೆ ಉತ್ತರ ಪ್ರದೇಶದ ಸಚಿವರು ಕೊಟ್ಟ ಸಲಹೆ ಹೀಗಿದೆ ನೋಡಿ.. 

ಟೊಮ್ಯಾಟೊ ದುಬಾರಿಯಾಗಿದ್ದರೆ, ಮನೆಯಲ್ಲಿ ಬೆಳೆಯಿರಿ ಅಥವಾ ತಿನ್ನುವುದನ್ನು ನಿಲ್ಲಿಸಿ ಎಂದು ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆ ರಾಜ್ಯ ಸಚಿವೆ ಪ್ರತಿಭಾ ಶುಕ್ಲಾ ಭಾನುವಾರ ಜನರಿಗೆ ಸಲಹೆ ನೀಡಿದ್ದಾರೆ. ಪ್ರತಿಭಾ ಶುಕ್ಲಾ ಅವರು ಯುಪಿ ಸರ್ಕಾರದ ಸಸಿಗಳನ್ನು ನೆಡುವ ಬೃಹತ್‌ ಕಾರ್ಯಕ್ರಮದ ಅಡಿಯಲ್ಲಿ ನೆಡುತೋಪು ಚಾಲನೆಯಲ್ಲಿ ಭಾಗವಹಿಸಿದರು ಮತ್ತು ಸಸಿಗಳನ್ನು ನೆಟ್ಟಿದ್ದು, ಈ ವೇಳೆ ಹೀಗೆ ಹೇಳಿದ್ದಾರೆ. 

ಇದನ್ನು ಓದಿ: ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್‌: ಅಡುಗೆ ಎಣ್ಣೆ, ಗೋಧಿ ಬೆಲೆಯೂ ಹೆಚ್ಚಳ!

"ಟೊಮ್ಯಾಟೊ ದುಬಾರಿಯಾಗಿದ್ದರೆ, ಜನರು ಅದನ್ನು ಮನೆಯಲ್ಲಿ ಬೆಳೆಯಬೇಕು. ಹಾಗೆ, ನೀವು ಟೊಮ್ಯಾಟೋ ತಿನ್ನುವುದನ್ನು ನಿಲ್ಲಿಸಿದರೆ, ಬೆಲೆಗಳು ಅನಿವಾರ್ಯವಾಗಿ ಇಳಿಯುತ್ತವೆ. ನೀವು ಟೊಮ್ಯಾಟೋ ಬದಲಿಗೆ ನಿಂಬೆಹಣ್ಣು ಬಳಸಬಹುದು. ಯಾರೂ ಟೊಮ್ಯಾಟೋಗಳನ್ನು ತಿನ್ನದಿದ್ದರೆ, ಬೆಲೆಗಳೂ ಕಡಿಮೆಯಾಗುತ್ತವೆ’’ ಎಂದು ಪ್ರತಿಭಾ ಶುಕ್ಲಾ ಹೇಳಿದರು.

ಅಸಾಹಿ ಗ್ರಾಮದ ಪೌಷ್ಟಿಕಾಂಶದ ಉದ್ಯಾನದ ಉದಾಹರಣೆಯನ್ನು ಉಲ್ಲೇಖಿಸಿದ ಯುಪಿ ಸಚಿವರು, ಈ ಹಣದುಬ್ಬರಕ್ಕೆ ಪರಿಹಾರವಿದೆ. ಮನೆಯಲ್ಲಿ ಟೊಮ್ಯಾಟೋ ಸಸಿಗಳನ್ನು ನೆಡಿ ಎಂದು ಹೇಳಿದರು. ನೀವು ಟೊಮ್ಯಾಟೋಗಳನ್ನು ತಿನ್ನದಿದ್ದರೆ ನಿಂಬೆಯನ್ನು ಬಳಸಿ. ಹೆಚ್ಚು ದುಬಾರಿಯಾಗಿರುವುದನ್ನು ತಿರಸ್ಕರಿಸಿ. ಅದು ತಾನೇ ತಾನಾಗಿ ಅಗ್ಗವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ

ಅಸಾಹಿ ಗ್ರಾಮದಲ್ಲಿ ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದೇವೆ. ಊರಿನ ಹೆಂಗಸರು ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದಾರೆ, ಅದರಲ್ಲಿ ಟೊಮ್ಯಾಟೋ ಕೂಡ ಹಾಕಬಹುದು. ಈ ಬೆಲೆ ಏರಿಕೆಗೆ ಪರಿಹಾರ ಇದೆ, ಇದೇನು ಹೊಸದಲ್ಲ, ಟೊಮ್ಯಾಟೋ ನಿತ್ಯವೂ ದುಬಾರಿಯಾಗಿರುತ್ತದೆ, ಟೊಮ್ಯಾಟೋ ತಿನ್ನದಿದ್ದರೆ ನಿಂಬೆಹಣ್ಣು ಬಳಸಿ, ಬೆಲೆ ಯಾವುದು ಹೆಚ್ಚಿದ್ದರೂ ಬಿಸಾಡಿ, ತಾನಾಗಿಯೇ ಅಗ್ಗವಾಗುತ್ತದೆ ಎಂದರು.

ಈ ಮಧ್ಯೆ, ಕೇಂದ್ರ ಸರ್ಕಾರದ ರಾಜ್ಯ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಅಶ್ವಿನಿ ಕುಮಾರ್ ಚೌಬೆ ಶುಕ್ರವಾರ ಅವರು ಟೊಮ್ಯಾಟೋ ಸೇರಿದಂತೆ 22 ಅಗತ್ಯ ಆಹಾರ ವಸ್ತುಗಳ ದೈನಂದಿನ ಬೆಲೆಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು. ಪ್ರಸ್ತುತ ಹೆಚ್ಚುತ್ತಿರುವ ಟೊಮ್ಯಾಟೋ ಬೆಲೆಯನ್ನು ಪರಿಶೀಲಿಸಿ ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಟೊಮ್ಯಾಟೋ ಖರೀದಿಯನ್ನು ಪ್ರಾರಂಭಿಸಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದೂ ಸಚಿವರು ಹೇಳಿದರು.

ಇದನ್ನೂ ಓದಿ: ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ನಿರಂತರವಾಗಿ ಟೊಮ್ಯಾಟೋಗಳನ್ನು ಖರೀದಿಸುತ್ತಿದೆ ಮತ್ತು ಗ್ರಾಹಕರಿಗೆ ಸಬ್ಸಿಡಿ ನೀಡಿದ ನಂತರ ದೆಹಲಿ-ಎನ್‌ಸಿಆರ್, ಬಿಹಾರ ಮತ್ತು ರಾಜಸ್ಥಾನದ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಚೌಬೆ ಹೇಳಿದರು.

ಟೊಮ್ಯಾಟೋವನ್ನು ಚಿಲ್ಲರೆ ದರದಲ್ಲಿ ₹ 90ರಂತೆ ವಿಲೇವಾರಿ ಮಾಡಲಾಗಿದ್ದು, ಜುಲೈ 16 ರಿಂದ ₹ 80 ಕ್ಕೆ ಇಳಿಸಲಾಗಿದೆ ಮತ್ತು ಜುಲೈ 20 ರಿಂದ ₹ 70 ಕ್ಕೆ ಇಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಟೊಮ್ಯಾಟೊ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಹೇಳಿದರು.

ಇದನ್ನೂ ಓದಿ: Good News: ಶೀಘ್ರದಲ್ಲೇ ಟೊಮ್ಯಾಟೋ ದರ ಇಳಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ