
ರಾಂಚಿ(ಮಾ.20) ನಾವು ಮೋದಿ ತಲೆಬುರುಡೆಗೆ ಶೂಟ್ ಮಾಡಿದರೆ..? ಇದು ಜಾರ್ಖಂಡ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟ ಸಭೆಯಲ್ಲಿ ಆರ್‌ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ ನೀಡಿದ್ದಾರೆ ಎನ್ನಲಾದ ಹೇಳಿಕೆ. ಜಾರ್ಖಂಡ್ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಚುನಾವಣಾ ಆಯೋಗ ಈ ಹೇಳಿಕೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗಿದೆ.
ಇಂಡಿಯಾ ಒಕ್ಕೂಟದ ಅಜೆಂಡಾ ಜಗಜ್ಜಾಹೀರಾಗಿದೆ. ನಾಲ್ಕು ದಿನಗಳ ಹಿಂದೆ ಇಂಡಿಯಾ ಒಕ್ಕೂಟ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಸಭೆ ನಡೆಸಿತ್ತು. ಈ ವೇಳೆ ಆರ್‌ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್, ಪ್ರಧಾನಿ ಮೋದಿ ತಲೆಬುರುಡೆಗೆ ಶೂಟ್ ಮಾಡಿದರೆ ಎಂಬ ವಿವಾದಾತ್ಮ ಹೇಳಿಕೆ ನೀಡಿದ್ದಾರೆ. ಇಂಡಿಯಾ ಒಕ್ಕೂಟದ ಸೋಲು ಸಮೀಪಿಸುತ್ತಿದ್ದಂತೆ ನಾಯಕರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇಂಡಿಯಾ ಒಕ್ಕೂಟ ನಾಯಕರು ಯಾವದೇ ಪಿತೂರಿ ನಡೆಸಿದರೂ ಈ ದೇಶದ 140 ಕೋಟಿ ಮಂದಿ ಪ್ರಧಾನಿ ಮೋದಿ ಜೊತೆಗಿದ್ದಾರೆ. ಚುನಾವಣಾ ಆಯೋಗ, ಜಾರ್ಖಂಡ್ ಪೊಲೀಸರು, ಈ ಪ್ರಮುಖ ಸಾಕ್ಷಿಯನ್ನು ಗಂಭೀರವಾಗಿ ಪರಿಗಣಿಸಿ ಗೌರವಾನ್ವಿತ ಪ್ರಧಾನಿಗೆ ಗುಂಡು ಹೊಡೆಯಲು ಮುಂದಾಗಿರುವ ಕ್ರಿಮಿನಲ್ ಆರೋಪಿಯನ್ನು ಬಂಧಿಸಬೇಕು ಎಂದು ಬಾಬುಲಾಲ್ ಮರಾಂಡಿ ಟ್ವೀಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ 20 ಕ್ಷೇತ್ರ ಗೆಲ್ಲದಿದ್ದರೆ ಸರ್ಕಾರ ನಡೆಸಲು ನೈತಿಕತೆ ಇರಲ್ಲ: ಸಚಿವ ರಾಜಣ್ಣ
ಇದು 5 ಸೆಕೆಂಡ್‌ಗಳ ವಿಡಿಯೋ ಆಗಿದೆ. ಈ ಸಭೆಯ ಹಿಂಭಾಗದಲ್ಲಿ ಇಂಡಿಯಾ ಒಕ್ಕೂಟದ ಹೆಸರಿನ ಬ್ಯಾನರ್ ಕಾಣಬಹುದು. ಇಂಡಿಯಾ ಮೈತ್ರಿ ಪಕ್ಷಗಳ ನಾಯಕರು ವೇದಿಕೆಯಲ್ಲಿ ಕುಳಿತಿದ್ದಾರೆ. ಇನ್ನು ಇತರ ಹಲವರು ನಾಯಕರು ಮುಂಭಾಗದಲ್ಲಿ ಕುಳಿತಿದ್ದಾರೆ. ಈ ವೇಳೆ ನಾವು ಮೋದಿ ತಲೆಬುರುಡೆಗೆ ಶೂಟ್ ಮಾಡಿದರೆ ತಪ್ಪು ಏನ್ನುತ್ತೀರಾ ಎಂದು ಹೇಳಿದ್ದಾರೆ.
ಈ ವಿಡಿಯೋ ಅಸಲಿಯೋ ನಕಲಿಯೋ ಅನ್ನೋದು ದೃಢಪಟ್ಟಿಲ್ಲ. ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಈ ವಿಡಿಯೋ ಹಂಚಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಇಂಡಿಯಾ ಒಕ್ಕೂಟದ ಸಭೆ ನಡೆದಿದೆ. ಆದರೆ ಈ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೋ ಅಥವಾ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆಯಾ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರ ಹೇಳಿಕೆ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ಆಯೋಗ ನೀಡಿದೆ. ಎಪ್ರಿಲ್ 19 ರಿಂದ ಜೂನ್ 1ರ ವರೆಗೆ 7 ಹಂತದಲ್ಲಿ ಚುನಾವಣೆ ನೆಡೆಯಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ.
ಬಿಜೆಪಿ ಜತೆ ಮೈತ್ರಿ ಬಳಿಕ ಜೆಡಿಎಸ್ ಮೊದಲ ಆತ್ಮಹತ್ಯೆಗೆ ಪ್ರಯತ್ನ: ಡಿ.ಕೆ.ಶಿವಕುಮಾರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ