ಹೋಟೆಲಲ್ಲಿ ಸೇವಾ ಶುಲ್ಕ ಕೇಳಿದರೆ ಸರ್ಕಾರಕ್ಕೆ ದೂರು ನೀಡಿ

Published : Jul 03, 2022, 01:30 AM IST
ಹೋಟೆಲಲ್ಲಿ ಸೇವಾ ಶುಲ್ಕ ಕೇಳಿದರೆ ಸರ್ಕಾರಕ್ಕೆ ದೂರು ನೀಡಿ

ಸಾರಾಂಶ

*   ಗ್ರಾಹಕ ಆಯೋಗಗಳಿಗೆ ದೂರು ನೀಡುವ ವ್ಯವಸ್ಥೆ ಶೀಘ್ರ ಜಾರಿ *   ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಕಾನೂನುಬಾಹಿರ *   ಶೀಘ್ರದಲ್ಲೇ ಈ ಸಂಬಂಧ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟ  

ನವದೆಹಲಿ(ಜು.03):  ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಕಾನೂನುಬಾಹಿರ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇದೀಗ ಆ ಕುರಿತು ಗ್ರಾಹಕರು ದೂರು ನೀಡಲು ವ್ಯವಸ್ಥೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಸಂಬಂಧ ಹೊಸ ಮಾರ್ಗದರ್ಶಿ ಸೂತ್ರಗಳು ಪ್ರಕಟವಾಗಲಿವೆ.

‘ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸಿದರೆ ಜನರು ಗ್ರಾಹಕ ಆಯೋಗಗಳಿಗೆ ಹಾಗೂ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಕ್ಕೆ ದೂರು ನೀಡುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಇನ್ಮುಂದೆ 24/7 ಹೋಟೆಲ್ ಓಪನ್‌, ರಾತ್ರಿ ಪಾಳಿ ಉದ್ಯೋಗಿಗಳಿಗೆ ನೋ ಟೆನ್ಶನ್

‘ಹೋಟೆಲ್‌ಗಳು ಆಹಾರದ ದರಕ್ಕಿಂತ ಹೆಚ್ಚಾಗಿ ಏನನ್ನೂ ಗ್ರಾಹಕರಿಂದ ಕೇಳುವಂತಿಲ್ಲ. ಗ್ರಾಹಕರೇ ಬೇಕಾದರೆ ಸ್ವಯಂಪ್ರೇರಿತರಾಗಿ ಸೇವಾ ಶುಲ್ಕ ಅಥವಾ ಟಿಫ್ಸ್‌ ನೀಡಬಹುದು. ಇಂತಹ ಚಾಜ್‌ರ್‍ಗಳನ್ನು ಕಡ್ಡಾಯವಾಗಿ ಗ್ರಾಹಕರಿಂದ ಪಡೆಯುವುದನ್ನು ತಪ್ಪಿಸುವ ನಿಯಮಗಳು ಹಿಂದೆ ಇರಲಿಲ್ಲ. ಈಗ ಸ್ಪಷ್ಟವಾಗಿ ಇದು ‘ಕಾನೂನುಬಾಹಿರ’ ಎಂದು ನಿಯಮಾವಳಿ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

2017ರಲ್ಲಿ ಪ್ರಕಟಿಸಿದ್ದ ನಿಯಮಾವಳಿಯಲ್ಲಿ ಹೋಟೆಲ್‌ಗಳು ಬಯಸಿದರೆ ಬಿಲ್‌ನಲ್ಲಿ ಆಹಾರಗಳ ದರಪಟ್ಟಿಯ ಕೆಳಗೆ ಸ್ವಲ್ಪ ಜಾಗ ಖಾಲಿ ಬಿಟ್ಟು ಪ್ರತ್ಯೇಕ ಹೆಡ್‌ನಲ್ಲಿ ಸೇವಾ ಶುಲ್ಕವನ್ನು ನಮೂದಿಸಲು ಅವಕಾಶವಿತ್ತು. ಗ್ರಾಹಕರು ಬಯಸಿದರೆ ಅದನ್ನು ಪಾವತಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದು ಹೋಟೆಲಿಗರಲ್ಲಿ ಹಾಗೂ ಜನರಲ್ಲಿ ಗೊಂದಲಕ್ಕೆ ಕಾರಣವಾಗಿ, ಹೋಟೆಲ್‌ಗಳು ಸೇವಾ ಶುಲ್ಕವನ್ನು ಕಡ್ಡಾಯವಾಗಿ ಗ್ರಾಹಕರಿಂದ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?