ದೇಶದಲ್ಲಿ ಕೊರೋನಾ ರೂಪ ಬದಲಿಸಿದೆಯೇ?

By Suvarna NewsFirst Published May 3, 2020, 10:45 AM IST
Highlights

ದೇಶದಲ್ಲಿ ಕೊರೋನಾ ರೂಪ ಬದಲಿಸಿದೆಯೇ?| ಶೀಘ್ರ ಅಧ್ಯಯನ ನಡೆಸಲು ಐಸಿಎಂಆರ್‌ ನಿರ್ಧಾರ| ವೈರಸ್‌ ಮೂಲ ರೂಪ ಬದಲಿಸಿರುವ ವರದಿ ಹಿನ್ನೆಲೆ

ನವದೆಹಲಿ(ಮೇ.03): ಕೊರೋನಾ ವೈರಸ್‌ ಕಳೆದ ಎರಡು ತಿಂಗಳಿನಲ್ಲಿ ಭಾರತದಲ್ಲಿ ತನ್ನ ರೂಪ ಬದಲಿಸಿದೆಯೇ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶೀಘ್ರದಲ್ಲೇ ಅಧ್ಯಯನ ಆರಂಭಿಸಲಿದೆ.

ಇತ್ತೀಚೆಗಷ್ಟೇ ಕೊಲ್ಕತ್ತಾ ಮೂಲದ ಖಾಸಗಿ ಪ್ರಯೋಗಾಲಯವೊಂದು ಕೊರೋನಾ ವೈರಸ್‌ ತನ್ನ ಮೂಲ ರೂಪವನ್ನು 10 ರೀತಿಯಲ್ಲಿ ಬದಲಿಸಿಕೊಂಡು ಜಗತ್ತಿನ ಬೇರೆ ಬೇರೆ ಕಡೆ ಹರಡುತ್ತಿದೆ, ಅದರಲ್ಲಿ ಎ2ಎ ಎಂಬ ವೈರಸ್‌ ಮೂಲ ವೈರಸ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಭಾರತದಲ್ಲಿ ಎ2ಎ ವೈರಸ್ಸೇ ಹರಡುತ್ತಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್‌ ಅಧಿಕೃತ ಅಧ್ಯಯನ ನಡೆಸಲು ನಿರ್ಧರಿಸಿದೆ.

ಸೋಂಕು ಗುಣ: ಕರ್ನಾಟಕ ದೇಶದಲ್ಲೇ ನಂ. 2ನೇ ಸ್ಥಾನ!

ಆದರೆ, ಈ ಅಧ್ಯಯನವು ಲಾಕ್‌ಡೌನ್‌ ಮುಗಿದ ನಂತರವಷ್ಟೇ ಆರಂಭವಾಗಲಿದೆ. ಏಕೆಂದರೆ ಅಧ್ಯಯನಕ್ಕೆ ಅಗತ್ಯವಿರುವ ಕೊರೋನಾ ಸೋಂಕಿತರ ಮಾದರಿಗಳನ್ನು ವಿವಿಧ ರಾಜ್ಯಗಳಿಂದ ತರಿಸಿಕೊಳ್ಳಲು ಸದ್ಯ ಸಮಸ್ಯೆಯಿದೆ.

ಹೀಗಾಗಿ ಲಾಕ್‌ಡೌನ್‌ ಮುಗಿದ ಮೇಲೆ ಅಧ್ಯಯನ ಆರಂಭಿಸಲಿರುವ ಐಸಿಎಂಆರ್‌, ಬೇರೆ ದೇಶಗಳಲ್ಲಿ ಹರಡುತ್ತಿರುವ ಕೊರೋನಾ ವೈರಸ್‌ಗೂ ಮತ್ತು ಭಾರತದಲ್ಲಿ ಹರಡಿರುವ ಕೊರೋನಾ ವೈರಸ್‌ಗೂ ವ್ಯತ್ಯಾಸವಿದೆಯೇ? ಭಾರತದಲ್ಲೇ ಬೇರೆ ಬೇರೆ ರೂಪದಲ್ಲಿ ಕೊರೋನಾ ವೈರಸ್‌ ಹರಡುತ್ತಿದೆಯೇ? ಇದು ಚೀನಾ ಹಾಗೂ ಇತರ ದೇಶಗಳಲ್ಲಿ ಹರಡಿರುವ ಕೊರೋನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿಯೋ ಅಥವಾ ಕಡಿಮೆ ಅಪಾಯಕಾರಿಯೋ ಎಂಬ ಅಂಶಗಳ ಕುರಿತು ವರದಿ ಸಿದ್ಧಪಡಿಸಲಿದೆ. ಇದು ಕೊರೋನಾಗೆ ಲಸಿಕೆ ಹಾಗೂ ಔಷಧಗಳನ್ನು ಕಂಡುಹಿಡಿಯಲು ಅನುಕೂಲ ಮಾಡಿಕೊಡಲಿದೆ.

click me!