ಈಗ ಗಾಯಗೊಂಡ ಪಾಕಿಗಳು ಪ್ರತಿ ದಾಳಿ ನಡೆಸುವುದು ಖಚಿತ. ಆದರೆ ಅವರು ಪ್ರತೀಕಾರಕ್ಕಾಗಿ ಸೇನೆ ಬಳಸುವುದಿಲ್ಲ. ಬದಲಾಗಿ ಉಗ್ರರನ್ನು ಬಳಸಿ ಗಡಿ ಹಾಗೂ ದೇಶದ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯೇ ಹೆಚ್ಚು ಎಂದು 1965ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಸೇನಾ ನೆಲೆಯ ಮೇಲೆ ಯಶಸ್ವಿಯಾಗಿ ಬಾಂಬ್ ಎಸೆದು ಬಂದಿದ್ದ ಫೈಟರ್ ಜೆಟ್ ಪೈಲಟ್ ಫಿಲಿಪ್ ರಾಜ್‌ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.