ಭಾರತದ ಮಿರಾಜ್ ನೋಡಿ ಪಾಕ್ ನ F-16 ಪರಾರಿ: ಸಿದ್ಧವಾಗಿದ್ದರೂ ಸುಮ್ಮನಾದ ಪಾಕ್‌ ಸೇನೆ!

Published : Feb 27, 2019, 10:58 AM IST
ಭಾರತದ ಮಿರಾಜ್ ನೋಡಿ ಪಾಕ್ ನ F-16 ಪರಾರಿ: ಸಿದ್ಧವಾಗಿದ್ದರೂ ಸುಮ್ಮನಾದ ಪಾಕ್‌ ಸೇನೆ!

ಸಾರಾಂಶ

ಭಾರತದ ಯುದ್ಧ ವಿಮಾನ ನೋಡಿ ಬೆಚ್ಚಿದ ಪಾಕ್‌| ಎಫ್‌-16 ಮೂಲಕ ಪ್ರತಿದಾಳಿಗೆ ಸಿದ್ಧವಾಗಿ ನಂತರ ಸುಮ್ಮನಾದ ಪಾಕ್‌ ವಾಯುಪಡೆ

ನವದೆಹಲಿ[ಪೆ.27]: ಭಾರತದ ಯುದ್ಧವಿಮಾನಗಳು ತನ್ನ ದೇಶದ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸುತ್ತಿದ್ದುದನ್ನು ತಡೆಯಲು ಆರಂಭದಲ್ಲಿ ಪಾಕಿಸ್ತಾನ ಮುಂದಾಗಿತ್ತು. ಅದಕ್ಕಾಗಿ ಎಫ್‌-16 ಯುದ್ಧವಿಮಾನಗಳನ್ನು ಸಿದ್ಧಪಡಿಸಿತ್ತು ಕೂಡ. ಆದರೆ, ಭಾರತದ 12 ಮಿರಾಜ್‌ ಯುದ್ಧವಿಮಾನಗಳು ಒಟ್ಟಾಗಿ ನಡೆಸುತ್ತಿದ್ದ ದಾಳಿಯ ತೀವ್ರತೆಯನ್ನು ನೋಡಿ ಹಿಂದೆ ಸರಿಯಿತು ಎಂದು ಮೂಲಗಳು ತಿಳಿಸಿವೆ.

ಬೆಳಗಿನ ಜಾವ 3.30ಕ್ಕೆ ಭಾರತದ ಯುದ್ಧವಿಮಾನಗಳು ದಾಳಿ ನಡೆಸಲು ಆಗಮಿಸಿದಾಗ ಪಾಕಿಸ್ತಾನ ತನ್ನ ಎಫ್‌-16 ಮೂಲಕ ಅದನ್ನು ತಡೆಯಲು ಯತ್ನಿಸಿತ್ತು. ಆದರೆ, ಭಾರತದ ದಾಳಿ ದೊಡ್ಡ ಪ್ರಮಾಣದಲ್ಲಿ ಇದ್ದುದರಿಂದ ಪಾಕ್‌ ತೆಪ್ಪಗಾಯಿತು ಎನ್ನಲಾಗಿದೆ.

ದಾಳಿಯ ನಂತರ ತರಾತುರಿಯಲ್ಲಿ ಸಭೆ ಕರೆದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ, ಪಾಕಿಸ್ತಾನದ ಮೇಲೆ ಅಪಾಯದ ಕಾರ್ಮೋಡ ಕವಿದಿದೆ. ಆದರೆ, ಭಾರತದ ದಾಳಿಗೆ ಪಾಕಿಸ್ತಾನ ಹೆದರಿಕೊಳ್ಳಬಾರದು. ನಾನು ಜನರನ್ನು ದಾರಿತಪ್ಪಿಸಲು ಬಯಸುವುದಿಲ್ಲ. ಅಪಾಯದ ಕಾರ್ಮೋಡಗಳು ಕವಿವಿದಿರುವುದರಿಂದ ನಾವು ಎಚ್ಚರಿಕೆಯಿಂದಿರಬೇಕಿದೆ ಎಂದು ಹೇಳಿದರು ಎಂದು ಸಮಾ ಟೀವಿ ವರದಿ ಮಾಡಿದೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!