ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಪುಲ್ವಾಮಾ ದಾಳಿ ಮರುದಿನವೇ ಪ್ಲ್ಯಾನ್ ರೆಡಿ!

By Web DeskFirst Published Feb 27, 2019, 10:04 AM IST
Highlights

ಪುಲ್ವಾಮಾ ದಾಳಿ ಮರುದಿನವೇ ಪ್ಲ್ಯಾನ್‌ ರೆಡಿ| ವಾಯುಪಡೆ ನೀಲನಕ್ಷೆಗೆ ನಿಶಾನೆ ತೋರಿದ್ದ ಮೋದಿ| ಬೆನ್ನಲ್ಲೇ ಶುರುವಾಗಿತ್ತು ಸಿದ್ಧತೆ| 11 ದಿನದಲ್ಲಿ ಇಡೀ ಯೋಜನೆ ಜಾರಿ

ನವದೆಹಲಿ[ಫೆ.27]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿ ಪಡೆದ ಪಾಕಿಸ್ತಾನ ಹಾಗೂ ಅದರ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು, ನೆರೆ ದೇಶದ ಮೇಲೆ ಯುದ್ಧ ಸಾರಬೇಕು ಎಂದು ಜನರು ಆಕ್ರೋಶದಿಂದ ಬೋರ್ಗರೆಯಲು ಆರಂಭಿಸುವಷ್ಟರಲ್ಲೇ ದಾಳಿಗೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿತ್ತು ಎಂಬ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ.

ಪುಲ್ವಾಮಾ ದಾಳಿ ನಡೆದಿದ್ದು ಫೆ.14ರ ಅಪರಾಹ್ನ 3.30ಕ್ಕೆ. ಅದರ ತೀವ್ರತೆ ಬೆಳಕಿಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು. ಆದರೆ ಅದರ ಮರುದಿನ ಬೆಳಗ್ಗೆ 9.30ಕ್ಕೆಲ್ಲಾ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೇಗೆ ಪಾಠ ಕಲಿಸಬೇಕು ಎಂಬ ತಯಾರಿ ಆರಂಭಿಸಿತ್ತು ಎನ್ನಲಾಗಿದೆ. ಅತ್ಯಂತ ಯೋಜಿತವಾಗಿ ನಡೆದ ಈ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಭಾರಿ ಪೆಟ್ಟು ಬಿದ್ದಿದೆ. ಪಾಕಿಸ್ತಾನದ ಮೇಲೆ ಮುಗಿಬೀಳುವ ಯೋಜನೆ ಹೇಗೆ ತಯಾರಾಯ್ತು ಎಂಬುದರ ಪೂರ್ಣ ಚಿತ್ರಣ ಇಲ್ಲಿದೆ.

ವಾಯುಪಡೆ ಪ್ಲ್ಯಾನ್‌, ಸರ್ಕಾರ ಒಪ್ಪಿಗೆ

ಫೆ.15, ಬೆಳಗ್ಗೆ 9.30: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯಾವ ರೀತಿ ವಾಯುದಾಳಿ ನಡೆಸಬಹುದು ಎಂಬ ಯೋಜನೆಯನ್ನು ವಾಯುಪಡೆ ಮುಖ್ಯಸ್ಥ ಬಿ.ಎಸ್‌. ಧನೋವಾ ಅವರು ಸರ್ಕಾರಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನಿಶಾನೆ ತೋರಿತು.

ಗಡಿಯಲ್ಲಿ ಡ್ರೋನ್‌ ಸರ್ವೇಕ್ಷಣೆ

ಫೆ.16ರಿಂದ 20: ಪಾಕಿಸ್ತಾನ ಮೇಲೆ ದಾಳಿಗೆ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ಭಾರತೀಯ ವಾಯುಪಡೆ ಹಾಗೂ ಸೇನಾಪಡೆಗಳು ಹೆರಾನ್‌ ಡ್ರೋನ್‌ಗಳ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಆಗಸದ ಮೂಲಕ ಸರ್ವೇಕ್ಷಣೆ ನಡೆಸಿದವು. ಪಾಕಿಸ್ತಾನಕ್ಕೆ ಸಂಬಂಧಿಸಿದ ಅಮೂಲ್ಯ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದವು.

ದಾಳಿ ನಡೆಸುವ ಸ್ಥಳದ ನಕ್ಷೆ ರೆಡಿ

ಫೆ.20ರಿಂದ 22: ಪಾಕಿಸ್ತಾನದ ಯಾವ ಪ್ರದೇಶಗಳಲ್ಲಿ ಉಗ್ರರು ಅಡಗಿದ್ದಾರೆ, ಎಲ್ಲಿ ದಾಳಿ ನಡೆಸಿದರೆ ಹೆಚ್ಚು ಫಲಿತಾಂಶ ಸಿಗುತ್ತದೆ ಎಂಬುದರ ಕುರಿತು ವಾಯುಪಡೆ ಹಾಗೂ ಗುಪ್ತಚರ ಸಂಸ್ಥೆಗಳು ಕೂತು ಸಂಭಾವ್ಯ ದಾಳಿ ಸ್ಥಳಗಳ ನಕ್ಷೆ ಸಿದ್ಧಪಡಿಸಿದವು.

ದೋವಲ್‌ಗೆ ದಾಳಿ ಸ್ಥಳಗಳ ಮಾಹಿತಿ

ಫೆ.21: ದಾಳಿ ನಡೆಸಲು ಉದ್ದೇಶಿಸಿರುವ ಸ್ಥಳಗಳ ಮಾಹಿತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ, ಪ್ರಧಾನಿ ಮೋದಿ ಅವರ ನಂಬಿಕಸ್ಥ ಬಂಟ ಅಜಿತ್‌ ದೋವಲ್‌ ಅವರಿಗೆ ಸೇನಾಪಡೆಗಳು ಸಲ್ಲಿಸಿದವು.

ಯುದ್ಧ ವಿಮಾನಗಳಿಗೆ ಬುಲಾವ್‌

ಫೆ.22: ಪಾಕಿಸ್ತಾನದ ಮೇಲೆ ದಾಳಿ ಮಾಡುವ ಸಲುವಾಗಿ ವಾಯುಪಡೆಯ 1 ಟೈಗರ್‌ ಸ್ಕಾ$್ವಡ್ರನ್‌ ಹಾಗೂ 7 ಬ್ಯಾಟಲ್‌ ಆ್ಯಕ್ಸಸ್‌ ಸ್ಕಾ$್ವಡ್ರನ್‌ಗಳಿಗೆ ಬುಲಾವ್‌ ಹೋಯಿತು. ಮಿರಾಜ್‌ ಯುದ್ಧ ವಿಮಾನಗಳ 2 ಸ್ಕಾ$್ವಡ್ರನ್‌ನಿಂದ 12 ವಿಮಾನಗಳನ್ನು ನಿಯೋಜಿಸಲಾಯಿತು.

ದೇಶದೊಳಗೆ ಟ್ರಯಲ್‌ ರನ್‌

ಫೆ.24: ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮುನ್ನ ಕೇಂದ್ರ ಭಾರತದಲ್ಲಿ ಪ್ರಾಯೋಗಿಕ ಹಾರಾಟವನ್ನು ಯುದ್ಧ ವಿಮಾನಗಳು ನಡೆಸಿದವು.

ಆಪರೇಷನ್‌ ಸಕ್ಸಸ್‌: ಪ್ರಧಾನಿಗೆ ಮಾಹಿತಿ

ಫೆ.26: ಮುಂಜಾನೆ 3.30ರ ವೇಳೆಗೆ ಪಾಕಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲಿನ ಕಾರ್ಯಾಚರಣೆ ಆರಂಭ. ದಾಳಿ ಮುಗಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜಿತ್‌ ದೋವಲ್‌ ಅವರಿಂದ ಮಾಹಿತಿ

click me!