Boss Scam: ಒಂದು ಮೆಸೇಜ್‌, ಒಂದು ಕಾಲ್‌... ಲಕ್ಷಾಂತರ ರೂ. ನಷ್ಟ! ನಿಮ್ಮ ಕಂಪನಿ ರಕ್ಷಿಸಿಕೊಳ್ಳುವುದು ಹೇಗೆ?

Kannadaprabha News   | Kannada Prabha
Published : Jun 23, 2026, 06:04 AM IST
I4C warns of malware driven Boss Scam targeting top corporate ceo rav

ಸಾರಾಂಶ

ಕಾರ್ಪೊರೆಟ್‌ ಕಂಪನಿಗಳ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿರುವ 'ಬಾಸ್‌ ಸ್ಕ್ಯಾಮ್‌' ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ. ವಂಚಕರು ಅಧಿಕಾರಿಗಳ ವಾಟ್ಸಾಪ್ ಹ್ಯಾಕ್ ಮಾಡಿ, ಹಣಕಾಸು ವಿಭಾಗಕ್ಕೆ ಹಣ ವರ್ಗಾಯಿಸಲು ಸಂದೇಶ ಕಳುಹಿ ವಂಚನೆ

ನವದೆಹಲಿ (ಜೂ.23):   ಕಾರ್ಪೊರೆಟ್‌ ಕಂಪನಿಗಳ ಸಿಇಒ, ಎಂಡಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ‘ಬಾಸ್‌ ಸ್ಕ್ಯಾಮ್‌’ ವಂಚನೆ ಜಾಲದ ಕುರಿತು ಎಚ್ಚರಿಕೆಯಿಂದಿರುವಂತೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ.

ಏನಿದು ಬಾಸ್‌ ಸ್ಕ್ಯಾಮ್‌?:

ಸೈಬರ್‌ ವಂಚಕರು ಕಂಪನಿಯ ಉನ್ನತ ಅಧಿಕಾರಿಗಳನ್ನು ಇಮೇಲ್ ಅಥವಾ ವಾಟ್ಸಾಪ್‌ನಲ್ಲಿ ಸಂಪರ್ಕಿಸುತ್ತಾರೆ. ಆರ್‌ಬಿಐ ಅಧಿಕಾರಿಗಳಂತೆ ನಟಿಸಿ, ಅಧಿಕಾರಿಗಳ ಫೋನ್/ಕಂಪ್ಯೂಟರ್‌ಗೆ ಮಾಲ್‌ವೇರ್ (ವಂಚನೆ ಸಾಫ್ಟ್‌ವೇರ್) ಕಳಿಸುತ್ತಾರೆ. ಅಧಿಕಾರಿ ಫೈಲ್ ತೆರೆದ ತಕ್ಷಣ ಮಾಲ್‌ವೇರ್ ಅವರ ವಾಟ್ಸಾಪ್ ಅನ್ನು ಹ್ಯಾಕ್ ಮಾಡುತ್ತದೆ.

ನಂತರ ಆ ಅಧಿಕಾರಿಯ ನಿಜವಾದ ವಾಟ್ಸಾಪ್‌ನಿಂದಲೇ ಆಕೌಂಟ್ಸ್ / ಫೈನಾನ್ಸ್ ವಿಭಾಗದವರಿಗೆ ಸಂದೇಶ ಕಳಿಸಿ, ನಿರ್ದಿಷ್ಟ ಖಾತೆಗೆ ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಆದೇಶಿಸುತ್ತಾರೆ. ಹೀಗೆ ಆ ಹಣ ವಂಚಕರ ಕೈಸೇರುತ್ತದೆ.

ಐ4ಸಿ ಎಚ್ಚರಿಕೆ:

ವಾಟ್ಸಾಪ್ ಅಥವಾ ಇಮೇಲ್‌ನಲ್ಲಿ ಬಂದ ತುರ್ತು ಹಣ ವರ್ಗಾವಣೆ ಆದೇಶಗಳನ್ನು ನಂಬಬೇಡಿ. ಫೋನ್ ಮಾಡಿ ಅಥವಾ ನೇರವಾಗಿ ಖಚಿತಪಡಿಸಿಕೊಳ್ಳಿ. ಅಪರಿಚಿತ ಫೈಲ್‌ಗಳನ್ನು ತೆರೆಯಬೇಡಿ. ಆರ್‌ಬಿಐ ಎಂದಿಗೂ ವಾಟ್ಸಾಪ್‌ನಲ್ಲಿ ಲಿಂಕ್ ಅಥವಾ ಫೈಲ್ ಕಳುಹಿಸುವುದಿಲ್ಲ. ಕಂಪನಿಗಳು ಈ ಬಗ್ಗೆ ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಕಂಪ್ಯೂಟರ್‌ನಲ್ಲಿ ಅಪರಿಚಿತ ಫೈಲ್‌ಗಳು (ವಿಶೇಷವಾಗಿ .exe ಮತ್ತು .dll) ತಾನಾಗಿಯೇ ತೆರೆಯದಂತೆ ಐಟಿ ತಂಡವು ಬಲವಾದ ನಿಯಮಗಳನ್ನು ತರಬೇಕು. ಇದು ಬಾಸ್ ಸ್ಕ್ಯಾಮ್‌ನಂತಹ ಮೋಸಗಳಿಂದ ರಕ್ಷಣೆ ನೀಡುತ್ತದೆ ಎಂದು ಮನವಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಥಾಪಿಸಿದ ಪಕ್ಷದಿಂದಲೇ ಮಮತಾ ಬ್ಯಾನರ್ಜಿ ಔಟ್, ಅರೂಪ್‌ಗೆ ಟಿಎಂಸಿ ನಾಯಕತ್ವ ನೀಡಿದ ಬಂಡಾಯ ಗುಂಪು
ಅಪ್ಪ ಹೇಗಾದರೂ ಕಾಪಾಡು, ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಿಲುಕಿದ ವಿದ್ಯಾರ್ಥಿಯ ಕೊನೆ ಕಾಲ್