ರೈತರ ಬಲಿಪಡೆದ ಕಾರಿನಲ್ಲಿ ನಾನಿರಲಿಲ್ಲ: ಕೇಂದ್ರ ಸಚಿ​ವರ ಪುತ್ರ!

By Suvarna NewsFirst Published Oct 5, 2021, 8:26 AM IST
Highlights

* ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಹರಿದ ಅಚಿವರ ಕಾರು

* ರೈತರ ಬಲಿಪಡೆದ ಕಾರಿನಲ್ಲಿ ನಾನಿರಲಿಲ್ಲ: ಕೇಂದ್ರ ಸಚಿ​ವರ ಪುತ್ರ

* ರೈತ ಮುಖಂಡರ ಆರೋಪವನ್ನು ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ

ಲಖಿಂಪುರ ಖೇರಿ(ಅ.05): ಉತ್ತರ ಪ್ರದೇಶದ(Uttar Pradesh) ಲಖಿಂಪುರ ಖೇರಿ(Lakhimpur Kheri) ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಹರಿದ ಕೇಂದ್ರ ಸಚಿವರ ಬೆಂಗಾವಲು ಕಾರಿನೊಳಗೆ ತಾನು ಇದ್ದೆ ಎಂಬ ವಿಪಕ್ಷಗಳು ಮತ್ತು ರೈತ ಮುಖಂಡರ ಆರೋಪವನ್ನು ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ(Ajay Kumar Mishra) ಅವರ ಪುತ್ರ ನಿರಾಕರಿಸಿದ್ದಾರೆ.

ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಸಚಿವ ಅಜಯ್‌ ಮಿಶ್ರಾ ಪುತ್ರ ಆಶಿಶ್‌ ಮಿಶ್ರಾ(Ashish Mishra), ಕಳೆದ 35 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಮನೆತನಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಭಾನುವಾರ ಆಚರಿಸಿದ್ದೆವು. ಈ ಕಾರ್ಯಕ್ರಮಕ್ಕೆ ಹಲವು ಅತಿಥಿಗಳು ಬರುವವರಿದ್ದರು. ಹೀಗಾಗಿ ಮಹಿಂದ್ರಾ ಥಾರ್‌, ಟೊಯೋಟಾ ಫಾಚ್ರ್ಯೂನರ್‌ ಮತ್ತು ಸಣ್ಣ ಕಾರನ್ನು ಕಳಿಹಿಸಿಕೊಡಲಾಗಿತ್ತು. ಆದರೆ ಈ ಯಾವುದೇ ಕಾರುಗಳಲ್ಲಿ ನಾನಿರಲಿಲ್ಲ ಎಂದ​ರು.

ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೆ ನಾನು ಕುಸ್ತಿ ಪಂದ್ಯ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿದ್ದೆ. ನನ್ನ ಫಾಚ್ರ್ಯೂನರ್‌ ಕಾರು ರೈತರ ಮೇಲೆ ಹರಿದಿದೆ ಎಂಬುದು ಸತ್ಯವಲ್ಲ. ಬದಲಿಗೆ ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ ಅವರನ್ನು ಕರೆತರಲು ಹೋಗಿದ್ದ ಫಾಚ್ರ್ಯೂನರ್‌ ಕಾರಿನ ಮೇಲೆ ಉದ್ರಿಕ್ತರು ಕಲ್ಲು ಮತ್ತು ಬಡಿಗೆಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ನನ್ನ ಕಾರಿನ ಚಾಲಕ ಸತ್ತಿರುವ ಸಾಧ್ಯತೆಯಿದೆ. ಆ ಬಳಿಕ ಕಾರಿನ ನಿಯಂತ್ರಣ ತಪ್ಪಿ ಪಲ್ಟಿಹೊಡೆದಿದೆ. ಅವರಾರ‍ಯರೂ ರೈತರಲ್ಲ ಎಂದು ದೂರಿದರು.

ಆಗಿದ್ದೇನು?

ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಭಾನುವಾರ ಲಖೀಂಪುರ ಖೇರಿ ಜಿಲ್ಲೆಯ ಬನ್‌ಬೀರ್‌ಪುರ ಗ್ರಾಮಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದರು. ಈ ಗ್ರಾಮವು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ಕುಮಾರ ಮಿಶ್ರಾ ಅವರ ಸ್ವಗ್ರಾಮ ಕೂಡಾ ಹೌದು. ಆದರೆ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತರ ಗುಂಪೊಂದು ಮೌರ್ಯ ಅವರ ಭೇಟಿ ವಿರೋಧಿ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆ ವೇಳೆಯೇ ಬಿಜೆಪಿ ನಾಯಕರಿಗೆ ಸೇರಿದ್ದು ಎನ್ನಲಾದ ಎರಡು ವಾಹನಗಳು ರೈತರ ಮೇಲೆ ಹಾದು ಹೋಗಿದ್ದು, ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ರೈತರು ಆರೋಪಿಸಿದ್ದಾರೆ. ಜೊತೆಗೆ ಈ ಪೈಕಿ ಒಂದು ವಾಹನದಲ್ಲಿ ಕೇಂದ್ರ ಸಚಿವ ಮಿಶ್ರಾ ಅವರ ಪುತ್ರ ಕೂಡಾ ಇದ್ದರು ಎಂದು ದೂರಿವೆ.

ಆದರೆ ರೈತರ ಆರೋಪವನ್ನು ಕೇಂದ್ರ ಸಚಿವ ಮಿಶ್ರಾ ತಳ್ಳಿಹಾಕಿದ್ದಾರೆ. ಘಟನೆ ನಡೆದಾಗ ನನ್ನ ಪುತ್ರ ವಾಹನದಲ್ಲಿ ಇರಲಿಲ್ಲ. ಎರಡು ವಾಹನಗಳು ಗ್ರಾಮಕ್ಕೆ ತೆರಳುವ ವೇಳೆ ಗುಂಪೊಂದು ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದೆ. ಈ ವೇಳೆ ಚಾಲಕನ ಆಯ ತಪ್ಪಿ ಕಾರು ಪಲ್ಟಿಹೊಡೆದು, ಅದರಡಿ ಸಿಕ್ಕಿ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಬಳಿಕ ರೈತರ ಗುಂಪಿನಲ್ಲಿದ್ದ ದುಷ್ರ್ಕರ್ಮಿಗಳು ಕಾರಿಗೆ ಬೆಂಕಿ ಅದರಲ್ಲಿದ್ದ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

click me!