ನನ್ನ ಬಳಿ ಕೆಟಿಎಂ ಬೈಕ್‌ ಇದೆ, ಆದರೆ ಓಡಿಸಲ್ಲ: ರಾಹುಲ್‌

By Kannadaprabha News  |  First Published Jul 10, 2023, 9:10 AM IST

ನನ್ನ ಬಳಿ ಕೆಟಿಎಂ390 ಬೈಕ್‌ ಇದೆ. ಆದರೆ ಅದನ್ನು ಓಡಿಸಲು ನನಗೆ ನನ್ನ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಅದು ಬಳಕೆಯಾಗದೇ ನಿಂತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.


ನವದೆಹಲಿ: ನನ್ನ ಬಳಿ ಕೆಟಿಎಂ390 ಬೈಕ್‌ ಇದೆ. ಆದರೆ ಅದನ್ನು ಓಡಿಸಲು ನನಗೆ ನನ್ನ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಅದು ಬಳಕೆಯಾಗದೇ ನಿಂತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇಲ್ಲಿ ಶನಿವಾರ ರಾತ್ರಿ ಮೆಕಾನಿಕ್‌ಗಳನ್ನು ಭೇಟಿ ಮಾಡಿ ಮಾತನಾಡಿರುವ ವೇಳೆ ರಾಹುಲ್‌ ಈ ಸಂಗತಿ ತಿಳಿಸಿದ್ದಾರೆ. ಇದೇ ವೇಳೆ ‘ಯಾವಾಗ ಮದುವೆಯಾಗುತ್ತೀರಾ’ ಎಂದು ಮೆಕಾನಿಕ್‌ ಓರ್ವ ಕೇಳಿದ ಪ್ರಶ್ನೆಗೆ ‘ನೋಡೋಣ’ ಎಂದು ಉತ್ತರಿಸಿದ ಅವರು ತಮ್ಮ ಮದುವೆ (Marriage) ಬಗ್ಗೆ ಯಾವುದೇ ಹೆಚ್ಚಿನ ಮಾತುಗಳನ್ನಾಡಿಲ್ಲ. ಇತ್ತೀಚೆಗೆ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಕೂಡ ‘ಇನ್ನೂ ಸಮಯವಿದೆ ಮದುವೆಯಾಗಿ’ ಎಂದು ರಾಹುಲ್‌ಗೆ ಸಲಹೆ ನೀಡಿದ್ದರು.

ರಾಹುಲ್‌ ಅನರ್ಹತೆ ವಿರೋಧಿಸಿ ಕಾಂಗ್ರೆಸ್‌ ಮೌನ ಪ್ರತಿಭಟನೆ

Tap to resize

Latest Videos

undefined

ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ವಿರೋಧಿಸಿ ಜು.12ರಂದು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿರುವ ಗಾಂಧಿ ಪ್ರತಿಮೆಯ ಎದುರು ಮೌನ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ (Congress) ನಿರ್ಧರಿಸಿದೆ.

ರಾಹುಲ್‌ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್‌: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ (KC Venugopal), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ರಾಹುಲ್‌ ಗಾಂಧಿ ಪ್ರಬಲ ಪ್ರತಿಸ್ಫರ್ಧಿಯಾಗಿದ್ದರು ಅಲ್ಲದೇ ಬಿಜೆಪಿ ವಿರುದ್ಧ ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಮಾತನಾಡಬಲ್ಲಂತಹ ನಾಯಕರಾಗಿದ್ದರು. ಭಾರತ್‌ ಜೋಡೋ ಯಾತ್ರೆಯ ಬಳಿಕ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಅದಾನಿ ಗ್ರೂಪ್‌ ಮತ್ತು ಪ್ರಧಾನಿ ಮೋದಿಗೆ ಇರುವ ಸಂಬಂಧದ ಕುರಿತಾಗಿ ಐತಿಹಾಸಿಕ ಭಾಷಣ ಮಾಡಿದ್ದರು. ಇದರಿಂದಾಗಿ ಬಿಜೆಪಿ ತನ್ನ ಕೆಟ್ಟರಾಜಕೀಯವನ್ನು ಬಳಕೆ ಮಾಡಿ ರಾಹುಲ್‌ ಗಾಂಧಿಯನ್ನು ಲೋಕಸಭಾ ಸ್ಥಾನದಿಂದ ವಜಾಗೊಳಿಸಿದೆ. ಈ ತಪ್ಪುನಿರ್ಧಾರ ಮತ್ತು ಪ್ರತೀಕಾರದ ಅನರ್ಹತೆಯನ್ನು ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.

ಮೋದಿ ಸರ್‌ನೇಮ್ ಹೇಳಿಕೆ ವಿವಾದ: ಶಿಕ್ಷೆ ವಿರುದ್ಧ ರಾಹುಲ್‌ ಮೇಲ್ಮನವಿ: ಇಂದು ಹೈಕೋರ್ಟ್ ತೀರ್ಪು

click me!