
ಹೈದರಾಬಾದ್ (ಮಾ.16): ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸೋದಿಲ್ಲ ಎಂದು ಗಂಡ ಹೇಳಿದ ಮಾತಿಗೆ ಸಿಟ್ಟಾಗಿದ್ದ ಮಹಿಳೆ, ತನ್ನ 14 ತಿಂಗಳ ಹೆಣ್ಣು ಮಗುವಿನ ಮುಖಕ್ಕೆ ತಲೆದಿಂಬು ಒತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ಲ್ಲಿ ನಡೆದಿದೆ. ಹೈದರಾಬಾದ್‌ನ ಗೋಲ್ಕಂಡದಲ್ಲಿ ಘಟನೆ ವರದಿಯಾಗಿದ್ದು, ಆರೋಪಿಯಾಗಿರುವ ಮಹಿಳೆ ಗೌಸಿಯಾ ಬೇಗಮ್ ತನ್ನ ಪತಿ, ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಆಮೀರ್ ಅಲಿಯೊಂದಿಗೆ ರಿಸಾಲಾ ಬಾಜಾರ್‌ನಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ಮಹಿಳೆ ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅಮೀರ್ ಅವರನ್ನು ಮದುವೆಯಾಗಿದ್ದರು ಮತ್ತು ದಂಪತಿಗೆ ಉಮ್ಮೆ ಐಮನ್ ಮಗಳು 14 ತಿಂಗಳ ಹಿಂದೆ ಜನಿಸಿದ್ದಳು. ರಿಸಾಲಾ ಬಜಾರ್‌ನಲ್ಲಿರುವ ಮನೆಯಲ್ಲಿ ತಮ್ಮ ಪತಿ ಮತ್ತು ಅತ್ತೆಯೊಂದಿಗೆ ವಾಸ ಮಾಡುತ್ತಿದ್ದರು ಎಂದಿದ್ದಾರೆ.
"ಭಾನುವಾರ, ಗೌಸಿಯಾ ತನ್ನ ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ. ನಂತರ ಮಗು ಕಾಣೆಯಾಗಿದೆ ಎಂದು ಕುಟುಂಬ ಸದಸ್ಯರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದಳು, ಆದರೆ ಅವರು ಅಂತಿಮವಾಗಿ ಶಿಶುವನ್ನು ಕೋಣೆಯಲ್ಲಿ ನೋಡಿದ ಬಳಿಕ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಶಿಶು ಸಾವು ಕಂಡಿದೆ ಎಂದು ತಿಳಿಸಿದ್ದರು " ಎಂದು ಗೋಲ್ಕೊಂಡ ಎಸಿಪಿ ಸೈಯದ್ ಫೈಜ್ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪತಿ ಮತ್ತು ಅತ್ತೆ ಮಾವಂದಿರ ಕಿರುಕುಳದಿಂದಾಗಿ ತಾನು ಅಸಮಾಧಾನಗೊಂಡಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ರಂಜಾನ್ ಹಬ್ಬಕ್ಕೆ ಬಟ್ಟೆಯ ವಿಚಾರದಲ್ಲಿ ಅಮೀರ್ ಮತ್ತು ಗೌಸಿಯಾ ನಡುವೆ ವಾಗ್ವಾದ ನಡೆದಿತ್ತು ಅನ್ನೋದು ಗೊತ್ತಾಗಿದೆ. ಅಮೀರ್ ಕೋಪದಿಂದ ಮನೆಯಿಂದ ಹೊರಬಂದ ನಂತರ, ಗೌಸಿಯಾ ಬೇಗಂ ತನ್ನ 14 ತಿಂಗಳ ಮಗಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಶಿಶುವನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ, ಗೌಸಿಯಾ ಬೇಗಂ ಗೋಲ್ಕೊಂಡ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೊಲೀಸರು ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ