
ಹೈದರಾಬಾದ್(ಏ.14): ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಮದ್ಯದಂಗಡಿಗಳು ಬಂದ್ ಆಗಿರುವುದರಿಂದ ಮದ್ಯವ್ಯಸನಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದನ್ನು ಮನಗಂಡ ಇಲ್ಲಿನ ಓಲ್ಡ್ ಸಿಟಿ ಪ್ರದೇಶದ ವ್ಯಕ್ತಿಯೊಬ್ಬ ಮದ್ಯ ಸಿಗದೆ ಪರದಾಡುತ್ತಿದ್ದ ಕೆಲವರಿಗೆ ತನ್ನಲ್ಲಿದ್ದ ಮದ್ಯವನ್ನು ಭಾನುವಾರ ಉಚಿತವಾಗಿ ಹಂಚಿದ್ದಾನೆ.
ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಏಪ್ರಿಲ್ 15ರಿಂದ ಸಿಗುತ್ತೆ ಎಣ್ಣೆ?
‘ನಿನ್ನೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಚಂಪಾಪೇಟ್ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮದ್ಯ ಸಿಗದೆ ಮೂರ್ಛೆ ಬಂದು ಬಿದ್ದಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮದ್ಯ ಸಿಗದೆ ಇನ್ನೂ ಅನೇಕ ವ್ಯಸನಿಗಳಿಗೆ ಹೀಗೇ ತೊಂದರೆಯಾಗಿದೆ. ನನ್ನ ಮನೆಯಲ್ಲಿ ಒಂದು ಬಾಟಲ್ ಮದ್ಯ ಇತ್ತು. ಅದನ್ನು ತಂದು ಇಂತಹ ಕೆಲವರಿಗೆ ಒಂದೊಂದು ಪೆಗ್ ಹಂಚಿದ್ದೇನೆ’ ಎಂದು ಕುಮಾರ್ ಎಂಬ ಈ ವ್ಯಕ್ತಿ ತಿಳಿಸಿದ್ದಾನೆ.
ಲಾಕ್‌ಡೌನ್ ನಿಯಮ ಉಲ್ಲಂಘಿಸುವುದಕ್ಕಾಗಿ ಹೀಗೆ ಮಾಡಿಲ್ಲ. ಜನರಿಗೆ ನೆರವಾಗುವ ಉದ್ದೇಶದಿಂದ ಮದ್ಯ ಹಂಚಿದ್ದೇನೆ ಎಂದೂ ಆತ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ