
ಹೈದರಾಬಾದ್ (ಜು.13): ತಮ್ಮ 6 ವರ್ಷದ ಮೊಮ್ಮಗಳನ್ನು ಚಾಲಕರ ಸೀಟಿನಲ್ಲಿ ಕೂರಿಸಿದ ಪೊಲೀಸ್ ಒಬ್ಬರು, ವಾಹನದಟ್ಟಣೆ ಇರುವ ನರಸಿಂಗಿಯಲ್ಲಿ ಗಂಧಮಗೂಡ–ಬೈರಗಿಗುಡ್ಡ ರಸ್ತೆಯಲ್ಲಿ ಡ್ರೈವ್ ಮಾಡಲು ಬಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ವಿಚಾರಿಸಿದಾಗ, ‘ವಿಶ್ವದ ಅತಿ ಕಿರಿಯ ಡ್ರೈವರ್’ ಎಂಬ ಗಿನ್ನೆಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಆಕೆಗೆ ತರಬೇತಿ ಕೊಡುತ್ತಿದ್ದುದಾಗಿ ಹೇಳಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದೆ.
ಅಪ್ರಾಪ್ತ ಮೊಮ್ಮಗಳ ಕೈಗೆ ಸ್ಟೇರಿಂಗ್ ಕೊಟ್ಟು, ಆಕೆಯ ಪಕ್ಕದಲ್ಲಿ ಹೈದರಾಬಾದ್‌ನ ಉಪ-ನಿರೀಕ್ಷಕ ಪೂಜಾರಿ ತಿರುಪತಿ ಕುಳಿತು ಸಾಗುತ್ತಿದ್ದ ವಿಡಿಯೋ ಬೆಳಕಿಗೆ ಬಂದಿತ್ತು. ಅವರ ಈ ಹುಚ್ಚಾಟದ ಪರಿಣಾಮ ಕಾರಿನ ಹಿಂದಿದ್ದ ವಾಹನಗಳು ಸಾಗಲಾರದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ‘ಇದು ಸ್ವಯಂಚಾಲಿತ ಕಾರು. ನನ್ನ ನಿಯಂತ್ರಣದಲ್ಲೇ ಇದೆ. ದಾಖಲೆ ನಿರ್ಮಿಸಲು ಆಕೆಗೆ ತರಬೇತಿ ನೀಡುತ್ತಿರುವೆ’ ಎಂದು ತಿರುಪತಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವುದು)ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಿರುಪತಿ ಅವರ ಹೆಸರಲ್ಲಿ ನೋಂದಣಿಯಾಗಿರುವ ಈ ಕಾರು 6 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಇದರ ಮೇಲೆ 3,800 ರು. ದಂಡ ಬಾಕಿ ಇದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ