ಹುಬ್ಬಳ್ಳಿ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ,ಪ್ರಯಾಣಿಕರೆ ಗಮನಿಸಿ!

Published : Jan 03, 2025, 04:52 PM IST
ಹುಬ್ಬಳ್ಳಿ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ,ಪ್ರಯಾಣಿಕರೆ ಗಮನಿಸಿ!

ಸಾರಾಂಶ

ಭಾರತೀಯ ರೈಲ್ವೇ ಹೊಸ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಪೈಕಿ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಸಮಯ, ನಿಲುಗಡೆ ಸೇರಿದಂತೆ ಹಲವು ಬದಲಾವಣೆಯಾಗಿದೆ. 

ನವದೆಹಲಿ(ಜ.03) ಭಾರತೀಯ ರೈಲ್ವೇ ಹೊಸ ವರ್ಷದ ಮೊದಲ ದಿನ ತನ್ನ ಟೈಂಟೇಬಲ್ ಪ್ರಕಟಿಸಿದೆ. ಹಲವು ರೈಲುಗಳ ಸಮಯ, ನಿಲುಗಡೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಪೈಕಿ ವಂದೇ ಭಾರತ್ ರೈಲು ಕೂಡ ಸೇರಿದೆ. 2024ರ ಸೆಪ್ಟೆಂಬರ್ 16ರಂದು ಪ್ರಧಾನಿ ಮೋದಿ ಉದ್ಘಾಟಿಸಿದ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ ರೈಲಿನ ಸಮಯ, ನಿಲುಗಡೆ ಸೇರಿದಂತೆ ಕೆಲ ಬದಲಾವಣೆ ಮಾಡಲಾಗಿದೆ. ಇದೀಗ ಪ್ರಯಾಣಿಕರು ಈ ರೈಲು ಬುಕ್ ಮಾಡುವಾಗ, ರೈಲು ಹತ್ತುವಾಗ ಪರಿಷ್ಕೃತ ವೇಳಾಪಟ್ಟಿ ಗಮಿನಿಸಲು ಭಾರತೀಯ ರೈಲ್ವೇ ಮನವಿ ಮಾಡಿದೆ.

ಹುಬ್ಬಳ್ಳಿ-ಪುಣೆ ರೈಲು ನಿಲುಗಡೆ
ಇದುವರೆಗೆ ಹುಬ್ಬಳ್ಳಿ-ಪುಣೆ ರೈಲು 5 ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿತ್ತು. ಆದರೆ ಹೊಸ ವರ್ಷದಿಂದ ಮತ್ತೊಂದು ನಿಲ್ದಾಣ ಸೇರಿಕೊಂಡು ಒಟ್ಟು 6 ನಿಲುಗಡೆಯಾಗಲಿದೆ. ಧಾರವಾಡ, ಬೆಳಗಾವಿ, ಮಿರಾಜ್ ಜಂಕ್ಷನ್, ಸಾಂಗ್ಲಿ ಹಾಗೂ ಸತಾರದಲ್ಲಿ ರೈಲು ನಿಲುಗಡೆಯಾಗುತ್ತಿತ್ತು. ಇದೀಗ ಘಟಪ್ರಬ ರೈಲು ನಿಲ್ದಾಣ ಕೂಡ ಸೇರಿಕೊಂಡಿದೆ. ಒಂದು ನಿಲುಗಡೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗಿದೆ. 

ಜನವರಿ 1 ರಿಂದ ನಾಲ್ಕು ವಂದೇ ಭಾರತ್ ರೈಲು ವೇಳಾಪಟ್ಟಿ ಬದಲು, ಇಲ್ಲಿದೆ ಲಿಸ್ಟ್!

ಹುಬ್ಬಳ್ಳಿ-ಪುಣೆ ರೈಲು ಸಮಯ
ರೈಲು ಸಂಖ್ಯೆ  20669 ರೈಲು ಹುಬ್ಬಳ್ಳಿ ಎಸ್‌ಎಸ್ಎಸ್ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡಲಿದೆ. ಪುಣೆ ನಿಲದಾಣಕ್ಕೆ 13.00 ಗಂಟೆಗೆ ತಲುಪಲಿದೆ. ಇನ್ನು ಪುಣೆಯಿಂದ ಹುಬ್ಬಳ್ಳಿಗೆ ಸಂಚರಿಸುವ 20670 ವಂದೇ ಭಾರತ್ ರೈಲು  ಪುಣೆ ನಿಲ್ದಾಣದಿಂದ 14.15 ಗಂಟೆಗೆ ಹೊರಡಲಿದ್ದು, ಹುಬ್ಬಳ್ಳಿ ನಿಲ್ದಾಣಕ್ಕೆ 22.45 ಗಂಟೆಗೆ ಆಗಮಿಸಲಿದೆ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಟಿಕೆಟ್ ದರ
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿನ ಎಸಿ ಚೇರ್ ಸೀಟು ಟಿಕೆಟ್ ದರ 1530 ರೂಪಾಯಿ. ಇನ್ನು ಎಕ್ಸಿಕ್ಯೂಟೀವ್ ಚೇರ್ ದರ 2780 ರೂಪಾಯಿ .

ಕೋಚ್ ವಿವರ
ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ 8 ಕೋಚ್ ಇರಲಿದೆ. ಎಸಿ ಚೇರ್ ಕಾರ್, ಎಕ್ಸಿಕ್ಯೂಟೀವ್ ಚೇರ್ ಸೀಟಿನ ಆಸನ ಹೊಂದಿದೆ. ವಾರದಲ್ಲಿ ಮೂರು ದಿನ ಅಂದರೆ ಬುಧವಾರ, ಶುಕ್ರವಾರ ಹಾಗೂ ಶನಿವಾರ ಸೇವೆ ಲಭ್ಯವಿದೆ.

ಭಾರತದಲ್ಲಿ ಒಟ್ಟು 132 ವಂದೇ ಭಾರತ್ ರೈಲು ಸೇವೆ ನೀಡುತ್ತಿದೆ. ಇದರಲ್ಲಿ ಹುಬ್ಬಳ್ಳಿ-ಪುಣೆ 62ನೇ ವಂದೇ ಭಾರತ್ ರೈಲು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸಲು ರೈಲು ಹುಬ್ಬಳ್ಳಿಯ ಎಸ್‌ಎಸ್ಎಸ್ ಹುಬ್ಬಳ್ಳಿಯ ರೈಲು ನಿಲ್ದಾಣದಿಂದ ಪುಣೆಗೆ ಸಂಚಾರ ಮಾಡಲಿದೆ. ಸೌತ್ ವೆಸ್ಟರ್ನ್ ರೈಲ್ವೇ ಈ ರೈಲು ನಿರ್ವಹಣೆ ಮಾಡುತ್ತಿದೆ. ರೈಲು ಸಂಖ್ಯೆ 20670/20669 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 558 ಕಿಲೋಮೀಟರ್ ದೂರವನ್ನು 8 ಗಂಟೆ 30 ನಿಮಿಷದಲ್ಲಿ ತಲುಪತ್ತದೆ. ಈ ಮಾರ್ಗದಲ್ಲಿ ಅತೀ ವೇಗದ ಹಾಗೂ ಅತೀ ಕಡಿಮೆ ಸಮಯದ ಸೇವೆ ಇದಾಗಿದೆ. ಯುಬಿಎಲ್ ಡಿಆರ್ ಎಕ್ಸ್‌ಪ್ರೆಸ್ ರೈಲು 11 ಗಂಟೆ 5 ನಿಮಿಷ ಹಾಗೂ ಎಸ್‌ಜಿಎನ್‌ಆರ್ ಹಮ್‌ಸಫರ್ ರೈಲು 11 ಗಂಟೆ 3 ನಿಮಿಷ ತೆಗೆದುಕೊಳ್ಳುತ್ತದೆ.

ಜನವರಿ 1 ರಿಂದ ಭಾರತೀಯ ರೈಲ್ವೇಗೆ ಹೊಸ ಟೈಮ್‌ ಟೇಬಲ್, ಮಹತ್ವದ ಬದಲಾವಣೆ!

ಹುಬ್ಬಳ್ಳಿ -ಪುಣೆ ವಂದೇ ಭಾರತ್ ಜೊತೆಗೆ ದಿಯೋಘರ್, ವಾರಣಾಸಿ ವಂದೇ ಭಾರತ್, ಪಾಟ್ನಾ ಗೋಮತಿ ರೈಲು, ಲಖನೌ ಡೆಹ್ರಡೂನ್ ವಂದೇ ಭಾರತ್ ಹಾಗೂ ಗೋಮತಿ ಪಾಟ್ನಾ ವಂದೇ ಭಾರತ್ ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಹೊಸವೇಳಾಪಟ್ಟಿಯಲ್ಲಿ ಕೆಲ ನಿಲ್ದಾಣ ಸೇರಿಸಲಾಗಿದೆ. ಇನ್ನು ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?