40 ಮೀಟರ್ ಮೊಬೈಲ್ ಟವರ್ ಮಾಯ! ಬಿಹಾರ ಪೊಲೀಸರಿಗೆ ತಲೆನೋವಾದ ವಿಚಿತ್ರ ಕೇಸ್

Published : Jun 14, 2026, 10:29 AM IST
Bihar mobile tower stolen image

ಸಾರಾಂಶ

How did thieves steal a whole mobile tower in Bihar: ಏನೇನೋ ಕಳ್ಳತನ ಆಗಿದ್ದನ್ನು ನೋಡಿರುತ್ತೀರಿ, ಎಷ್ಟೋ ಬಾರಿ ಎಟಿಎಂ ಮಶಿನ್‌ ಕದಿಯಲು ಹೋಗಿ, ಪಾಸ್‌ಬುಕ್‌ ಪ್ರಿಂಟರ್‌ ಕದ್ದ ಉದಾಹರಣೆ ಕೂಡ ಇದೆ. ಈ ಕಳ್ಳರು ಮಾತ್ರ ಈಗ ಮೊಬೈಲ್‌ ಟವರ್‌ ಕದ್ದಿದ್ದಾರೆ, ಹೌದ್ರೀ, ನೀವು ನಂಬಲೇಬೇಕು. 

Before and after mobile tower theft Bihar: ಎಂಥೆಂಥದೋ ಕಳ್ಳತನದ ವರದಿಗಳನ್ನು ಕೇಳಿರುತ್ತೀರಿ. ಇದಂತೂ ನೆಕ್ಟ್ಸ್‌ ಲೆವೆಲ್‌ ಬಿಡಿ. ಮೊಬೈಲ್‌ ಕದಿಯೋದು ನೋಡಿರಬಹುದು, ಈಗ 40 ಅಡಿ ಎತ್ತರದ ಮೊಬೈಲ್‌ ಟವರ್‌ ಕದ್ದಿದ್ದಾರೆ. ಈ ರೀತಿ ಕಳ್ಳತನ ಸಿನಿಮಾ, ವೆಬ್‌ ಸಿರೀಸ್‌ನಲ್ಲಿಯೂ ಆಗಿರೋದಿಲ್ಲ. ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾಂವ್ ನಗರದಲ್ಲಿ ಇಡೀ ಮೊಬೈಲ್ ಟವರ್ ಇಲ್ಲವಾಗಿದೆ. ಅಕ್ಷರಶಃ ಕಳ್ಳರು ಇದನ್ನು ಮಾಯ ಮಾಡಿದ್ದಾರೆ.

ಟವರ್‌ ಇಲ್ಲ ಅಂತ ಹೇಗೆ ಗೊತ್ತಾಯ್ತು?

ಈ ಟವರ್‌ 40 ಮೀಟರ್ (ಸುಮಾರು 130 ಅಡಿ) ಎತ್ತರವಿದೆ. ಇದರಲ್ಲಿ ಡೀಸೆಲ್ ಜನರೇಟರ್, ಇತರ ಬೆಲೆಬಾಳುವ ಉಪಕರಣಗಳೂ ಕಣ್ಮರೆಯಾಗಿವೆ. 'ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' ಕಂಪನಿಯ ಅಧಿಕಾರಿಗಳು ಈ ಜಾಗವನ್ನು ಪರಿಶೀಲನೆ ಮಾಡಲು ಬಂದಾಗಲೇ ಈ ಟವರ್‌ ಇಲ್ಲ ಎನ್ನೋದು ಗೊತ್ತಾಗಿದೆ. ಕೆಲವು ವರ್ಷಗಳಿಂದ ಈ ಟವರ್‌ ಬಳಕೆಯಾಗಿಲ್ಲ, ಈಗ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದಾರೆ. ಆಗ ಖಾಲಿ ಜಾಗ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆ ಕಂಪನಿಯ ಅಧಿಕಾರಿ ಬೈಜನಾಥ್ ಓಝಾ ತಕ್ಷಣವೇ ಡುಮ್ರಾಂವ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಜಾಗದ ಮಾಲೀಕ ಏನಂತಾರೆ?

ಹರಿನಾಥ್ ಯಾದವ್ ಎನ್ನುವವರ ಜಾಗದಲ್ಲಿ ಈ ಟವರ್ ನಿರ್ಮಾಣವಾಗಿದೆ. 2022ಕ್ಕೆ ಕಂಪೆನಿ ಜೊತೆಗಿನ ಲೀಸ್‌ ಒಪ್ಪಂದ ಮುಗಿದಿತ್ತು. 2017ರಿಂದ ಅವರಿಗೆ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ನನಗೂ ಈ ಕಳ್ಳತನಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಮೊಬೈಲ್ ಟವರ್‌ಗಳಿಂದ ಬ್ಯಾಟರಿ, ಕೇಬಲ್ ಕದಿಯುತ್ತಾರೆ. ಆದರೆ ಇಡೀ ಟವರ್ ಕಳ್ಳತನ ಆಗಿರೋದು ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಇದು ಸುಲಭ ಇರಲಿಲ್ಲ!

40 ಮೀಟರ್ ಎತ್ತರದ ಟವರ್‌ ಬಿಚ್ಚಲು ದೊಡ್ಡ ದೊಡ್ಡ ಯಂತ್ರೋಪಕರಣ ಬೇಕು, ಟೆಕ್ನಿಕಲೀ ಗೊತ್ತಿರಬೇಕು, ಒಂದಿಷ್ಟು ಕೆಲಸಗಾರರು ಕೂಡ ಬೇಕು. ಹೀಗಾಗಿ ಒಂದು ಗ್ಯಾಂಗ್‌ ಈ ರೀತಿ ಮಾಡಿರಬಹುದು ಎನ್ನಲಾಗಿದೆ. ತುಂಬ ದಿನಗಳಿಂದ ಕೆಲಸ ಮಾಡಿ ಈ ಕಳ್ಳತನ ಆಗಿದೆ ಎನ್ನಲಾಗಿದೆ. ಇಷ್ಟು ದೊಡ್ಡ ಕಳ್ಳತನ ಆಗುವಾಗ ಯಾರಿಗೂ ಹೇಗೆ ಗೊತ್ತಾಗಿಲ್ಲ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ.

ಸೇತುವೆ ಕದ್ದಿದ್ದರು

2022 ರಲ್ಲಿ ರೋಹ್ತಾಸ್ ಜಿಲ್ಲೆಯಲ್ಲಿ ಸಾರ್ವಜನಿಕರ ಮುಂದೆಯೇ ಸರ್ಕಾರಿ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು, 60 ಅಡಿ ಉದ್ದದ, 500 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಬಿಚ್ಚಿ ಕದ್ದುಕೊಂಡು ಹೋಗಿದ್ದರು. ಇದಕ್ಕೆ ಅವರು ಮೂರು ದಿನಗಳ ಕಾಲ ಗ್ಯಾಸ್ ಕಟರ್, ಜೆಸಿಬಿ ಯಂತ್ರಗಳನ್ನು ಬಳಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಾನು ಅವರನ್ನು ಅಪ್ಪಿಕೊಳ್ಳಲ್ಲ..' ರಾಹುಲ್ ಗಾಂಧಿ ಹೊಸ ವಿವಾದ ಸೃಷ್ಟಿ, ಕಾಂಗ್ರೆಸ್ ವಿರುದ್ಧ ಸಿಪಿಎಂ ನಾಯಕರು ವಾಗ್ದಾಳಿ!
ಪೊಲೀಸ್ ಪರೀಕ್ಷೆ ಬರೆಯಲು ಹೊರಟ ಅಭ್ಯರ್ಥಿಗಳಿಂದ ರೈಲಿನ ಮೇಲೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು