ವಿರಾಟ್ ನೌಕೆ ಒಡೆಯುವ ಕೆಲಸ ಶುರು: ಮ್ಯೂಸಿಯಂ ಮಾಡುವ ಕನಸು ಭಗ್ನ?

By Suvarna NewsFirst Published Dec 15, 2020, 8:59 AM IST
Highlights

ಗಿನ್ನೆಸ್ ದಾಖಲೆ ಖ್ಯಾತಿಯ ಐಎನ್‌ಎಸ್ ವಿರಾಟ್ ನೌಕೆ| ನೌಕೆ ಮ್ಯೂಸಿಯಂ ಆಗಿ ಪರಿವರ್ತಿಸುವ ಕಾರ್ಯಕ್ಕೆ ಹಿನ್ನಡೆ| ವಿರಾಟ್ ನೌಕೆ ಒಡೆಯುವ ಕೆಲಸ ಶುರು

ನವದೆಹಲಿ(ಡಿ.15): ಗಿನ್ನೆಸ್ ದಾಖಲೆ ಖ್ಯಾತಿಯ ಐಎನ್‌ಎಸ್‌ ವಿರಾಟ್ ನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಗುಜರಾತಿನ ಅಲಂಗ್ ಬಂದರಿನಲ್ಲಿ ಈಗಾಗಲೇ ನೌಕೆಯನ್ನು ಒಡೆಯುವ ಕಾರ್ಯ ಆರಂಭವಾಗಿದೆ. ನೌಕೆಯ ಒಂದು ಭಾಗವನ್ನು ಒಡೆದು ಹಾಕಿರುವ ಫೋಟೋ ತನಗೆ ಲಭ್ಯವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನೌಕೆಡಯನ್ನು ರಕ್ಷಿಸಿ ಇಲ್ಲವೇ ತಮಗೆ ಕೊಡಿ ಎಂದು ಬ್ರಿಟನ್ ಮೂಲದ ಹರ್ಮ್ಸ್‌ ವಿರಾಟ್ ಹೆರಿಟೇಜ್ ಟ್ರಸ್ಟ್ ಕೋರಿತ್ತು. ಅಲ್ಲದೇ ಅತ್ತ ಶ್ರೀರಾಮ್ ಗ್ರೂಪ್‌ನಿಂದ 110 ಕೋಟಿ ರೂಪಾಯಿಗೆ ನೌಕೆಯನ್ನು ಖರೀದಿಸಲು ಎನ್ವಿಟೆಕ್ ಮರೇನ್ ಕನ್ಸಲ್ಟಂಟ್ ಪ್ರೈ. ಲಿಪಪ್ರಸ್ತಾವನೆಯನ್ನೂ ಸಲ್ಲಿಸಿತ್ತು. 

ಆದರೀಗ ವಿರಾಟ್ ನೌಕೆಯನ್ನು ಒಡೆದಿರುವ ಕಾರಣ ಅದನ್ನು ಭವಿಷ್ಯದಲ್ಲಿ ಮ್ಯೂಸಿಯಂ ಆಗಿ ಪರಿವರ್ತಿಸುವ ಅಥವಾ ಪುನಃ ಬ್ರಿಟನ್‌ಗೆ ಕಳುಹಿಸುವ ಆಸೆಗೆ ತೆರೆ ಬಿದ್ದಿದೆ.

ವಿರಾಟ್‌ ನೌಕೆಗೆ ‘ಗುಜರಿ’ ತಪ್ಪಿಸಲು ಕೇಂದ್ರ ನಕಾರ

 ಕಳೆದ 3 ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ನೌಕಾಪಡೆಗೆ ಗಣನೀಯ ಸೇವೆ ಸಲ್ಲಿಸಿದ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಗುಜರಿಗೆ ಹಾಕದೆ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂಬ ಕೋರಿಕೆಯನ್ನು ರಕ್ಷಣಾ ಸಚಿವಾಲಯ ನಿರಾಕರಿಸಿತ್ತು ತನ್ಮೂಲಕ ಈ ಯುದ್ಧ ನೌಕೆಯನ್ನು ಉಳಿಸಿಕೊಳ್ಳಬೇಕೆಂಬ ಎನ್ವಿಟೆಕ್‌ ಮರೈನ್‌ ಕನ್ಸಲ್ಟಂಟ್ಸ್‌ ಪ್ರೈ. ಲಿ. ಸಂಸ್ಥೆಯ ಕೊನೇ ಹಂತದ ಪ್ರಯತ್ನವೂ ವಿಫಲವಾಗಿತ್ತು. 

click me!