
ನವದೆಹಲಿ(ಫೆ.08): ತಾಯಿ ಹಾಲು ಕುಡಿದವರು ಕಾಶ್ಮೀರದಲ್ಲಿ ತಿರಂಗ ಹಾರಿಸಿ ಎಂದು ಭಯೋತ್ಪಾದಕರು ಪೋಸ್ಟರ್ ಹಾಕಿದ್ದರು. ಈ ಸವಾಲು ಸ್ವೀಕರಿಸಿ ಯಾವುದೇ ಭದ್ರತೆ, ಬುಲೆಟ್ ಫ್ರೂಫ್ ಜಾಕೆಟ್ ಇಲ್ಲದೆ ತೆರಳಿ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದೇನೆ. ಇದು ದಶತಗಳ ಹಿಂದಿನ ಮಾತು. ಆದರೆ ಇತ್ತೀಚೆಗೆ ಇದೇ ಲಾಲ್‌ಚೌಕ್ ಕಾಶ್ಮೀರದಲ್ಲಿ ತಿರಂಗ ಹಿಡಿದು ಯಾತ್ರೆ ಮಾಡಿದ್ದಾರೆ. ಅವರಿಗೆ ಜಮ್ಮು ಮತ್ತು ಕಾಶ್ಮೀರ ಬದಲಾಗಿರುವುದು ಕಣ್ಣಾರೆ ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಭಾರತ್ ಜೋಡೋ ಯಾತ್ರೆ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣ ಮೇಲೆ ಅಭಿವಂದನಾ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಟೀಕೆಗೆ ತಿರೇಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕುರಿತು ಚರ್ಚೆಯಾಗಿತ್ತು. ಇತ್ತೀಚೆಗೆ ನಾಯಕರು ಜಮ್ಮು ಮತ್ತು ಕಾಶ್ಮೀರ ತೆರಳಿದ್ದರು. ಸಂಚಾರ ಮಾಡಿದ್ದರು. ಅದೆಷ್ಟು ಬದಲಾಗಿದೆ ಅನ್ನೋದು ಕಣ್ಣಾರೆ ನೋಡಿದ್ದಾರೆ. ದಶಕಗಳ ಹಿಂದೆ ನಾನು ಕಾಶ್ಮೀರ ಸಂಚಾರ ಮಾಡಿದೆ. ಈ ವೇಳೆ ಭಯೋತ್ಪಾದಕರು ಪೋಸ್ಟರ್ ಹಾಕಿದ್ದರು. ತಾಯಿ ಹಾಲು ಕುಡಿದವರು ಕಾಶ್ಮೀರದಲ್ಲಿ ತಿರಂಗ ಹಾರಿಸಿ ಎಂದು ಸವಾಲು ಹಾಕಿದ್ದರು. ಅಂದು ನಾನು ಹೇಳಿದ್ದೆ 26ರ ಜನವರಿ 11 ಗಂಟೆಗೆ ಲಾಲ್ ಚೌಕ್‌ಗೆ ಬರುತ್ತೇನೆ. ಯಾವುದೇ ಸೆಕ್ಯೂರಿಟಿ ಇಲ್ಲದೆ, ಯಾವುದೇ ಬುಲೆಟ್ ಫ್ರೂಫ್ ಜಾಕೆಟ್ ಇಲ್ಲದೆ ಬರುತ್ತೇನೆ. ಅಲ್ಲಿ ನಿರ್ಧಾರವಾಗಲಿ ಯಾರು ಯಾರು ತಾಯಿ ಹಾಲು ಕುಡಿದ್ದಾರೆ ಅನ್ನೋದು ಎಂದಿದ್ದೆ. ನಾನು ಹೋಗಿ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಿದ್ದೆ. ಇಂದು ಯಾವುದೇ ಅಳುಕಿಲ್ಲದೆ ಕಾಶ್ಮೀರಕ್ಕೆ ತೆರಳಬಹುದು. ತಿರಂಗ ಹಾರಿಸಬಹುದು. ಯಾರು ಸವಾಲು ಹಾಕಲ್ಲ. ಆತಂಕ ಇಲ್ಲ ಎಂದು ಮೋದಿ ಹೇಳಿದ್ದಾರೆ.
ಶಿಕಾರಿ ಕತೆಯೊಂದಿಗೆ ಕಾಂಗ್ರೆಸ್ ಆಡಳಿತ ವೈಖರಿ ವಿವರಿಸಿದ ಮೋದಿ, ನಗೆಗಡಲಲ್ಲಿ ತೇಲಿದ ಸಂಸತ್ತು!
ಇಂದು ಜಮ್ಮು ಕಾಶ್ಮೀರದಲ್ಲಿ ಮನೆ ಮನೆಯಲ್ಲಿ ತಿರಂಗ ಹಾರಾಡುತ್ತಿದೆ. ಈ ಹಿಂದೆ ತಿರಂಗದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಭಂಗವಾಗುತ್ತದೆ ಎಂದಿದ್ದರು. ಇದೀಗ ಕಾಲ ಬದಲಾಗಿದೆ. ಅಂದು ಈ ಮಾತು ಹೇಳಿದ್ದವರು ಇಂದು ತಿರಂಗ ಯಾತ್ರೆ ಜಮ್ಮು ಕಾಶ್ಮೀರದಲ್ಲಿ ಮಾಡುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೀಗ ಶ್ರೀನಗರಲ್ಲಿ ಚಿತ್ರಮಂದಿರ ಹೌಸ್‌ಫುಲ್ ಆಗುತ್ತಿದೆ. ಆತಂಕವಾದಿ, ಭಯೋತ್ಪಾದನೆಯನ್ನು ಹತ್ತಿಕ್ಕಲಾಗಿದೆ ಎಂದು ಮೋದಿ ಹೇಳಿದರು.
ಸದನದಲ್ಲಿ ಕೆಲವವು ಈಶಾನ್ಯ ರಾಜ್ಯಗಳ ಕುರಿತು ಮಾತನಾಡಿದ್ದಾರೆ. ನಾನು ಮನವಿ ಮಾಡುತ್ತೇನೆ. ಒಮ್ಮೆ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ. ನೀವು ನೋಡಿದ ಈಶಾನ್ಯ ರಾಜ್ಯ ಸಂಪೂರ್ಣ ಬದಲಾಗಿದೆ ಎಂದರು. ರೈಲು, ರಸ್ತೆ, ವಿಮಾನಯಾನ ಎಲ್ಲ ಸಂಪರ್ಕ ಎಲ್ಲಾ ಪ್ರದೇಶಕ್ಕೆ ಸಿಗುತ್ತಿದೆ. ತ್ರಿಪುರಾದಲ್ಲಿ ಅಭಿವೃದ್ಧಿ ವೇಗ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿಜೀ ನಿಮ್ಗೆ ನಂದೊಂದೇ ಕ್ಷೇತ್ರ ಸಿಕ್ಕಿರೋದಾ, ಸಂಸತ್ತಿನಲ್ಲಿ ಖರ್ಗೆ ಪ್ರಶ್ನೆ!
ಜನೌಷಧಿ ಕೇಂದ್ರ ಮಾದರಿಯಾಗಿದೆ. ಬಡವರಿಗೆ ಅತೀ ಕಡಿಮೆ ದರದಲ್ಲಿ ಔಷಧಿಗಳು ಸಿಗುವಂತಾಗಿದೆ. ಇದರಿಂದ ಸರಿಸುಮಾರು 20,000 ರೂಪಾಯಿ ಬಡವರಿಗೆ ಉಳಿತಾಯವಾಗುತ್ತಿದೆ. ಪ್ರತಿ ಮಧ್ಯಮ ವರ್ಗಕ್ಕೆ ಮನೆ ಬೇಕು ಅನ್ನೋದು ಕನಸಾಗಿದೆ. ಆದರೆ ಸಾಲ ಸೌಲಭ್ಯ ಸುಲಭವಾಗಿರಲಿಲ್ಲ. ಇದೀಗ ಮಧ್ಯಮ ವರ್ಗಕ್ಕೆ ಮನೆ ಸಾಕಾರಗೊಳಿಸುವ ಅವಕಾಶವನ್ನು ನಮ್ಮ ಸರ್ಕಾರ ನೀಡಿದೆ. ಮೆಡಿಕಲ್ ಕಾಲೇಜು, ಎಂಜಿನೀಯರ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಿದೆ. ಮೂಲಭೂತ ಸೌಕರ್ಯಅಭಿವೃದ್ಧಿ ಮಾಡಲು ನಾವು ಗಮನ ಕೇಂದ್ರೀಕರಿಸಿದ್ದಾರೆ. ಗುಲಾಮಗಿರಿಯಿಂದ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗಬೇಕಿತ್ತು. ಅದು ಆಗಿಲ್ಲ. ಆದರೆ ನಮ್ಮ ಸರ್ಕಾರ ಹೈವೇ, ಎಕ್ಸ್‌ಪ್ಸೆಸ್ ವೇ ಸೇರಿದಂತೆ ಎಲ್ಲಾ ಸಂಪರ್ಕ ಅಭಿವೃದ್ಧಿಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ