ಮೊದಲ ಬಾರಿ ಕೊರೋನಾಗೆ ಎಚ್‌ಐವಿ ಔಷಧ ಪ್ರಯೋಗ!

By Kannadaprabha NewsFirst Published Mar 11, 2020, 7:29 AM IST
Highlights

ಮೊದಲ ಬಾರಿ ಕೊರೋನಾಗೆ ಎಚ್‌ಐವಿ ಔಷಧ ಪ್ರಯೋಗ| ಇಟಲಿ ಮೂಲದ ಪ್ರವಾಸಿಗ ದಂಪತಿಗೆ ಔಷಧ

ನವದೆಹಲಿ[ಮಾ.11]: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಜೈಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಟಲಿ ದಂಪತಿಗೆ ಎಚ್‌ಐವಿ ಸೋಂಕು ನಿಯಂತ್ರಣಕ್ಕೆ ಬಳಸುವ ಎರಡು ಔಷಧಗಳನ್ನು ನೀಡಲಾಗಿದೆ. ಕೊರೋನಾ ಸೋಂಕಿತರಿಗೆ ಎಚ್‌ಐವಿ ಸೋಂಕು ನಿಯಂತ್ರಣ ಔಷಧಿಯನ್ನು ನೀಡುತ್ತಿರುವುದು ಭಾರತದಲ್ಲಿ ಇದೇ ಮೊದಲು.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಎರಡನೇ ಹಂತದ ಎಚ್‌ಐವಿ ಔಷಧವಾಗಿ ಬಳಸುವ ಲೋಪಿವಿರ್‌ ಮತ್ತು ರಿಟೊನಾವಿರ್‌ ಮಾತ್ರೆಗಳನ್ನು ಕೊರೋನಾ ವೈರಸ್‌ ವಿರುದ್ಧ ನಿಯಂತ್ರಿತವಾಗಿ ಬಳಸಲು ಅನುಮತಿ ನೀಡಿದೆ. ಕೊರೋನಾ ವೈರಸ್‌ಗೆ ತುತ್ತಾಗಿರುವ ಇಟಲಿ ವೃದ್ಧ ದಂಪತಿ ಗಂಭೀರ ಸ್ವರೂಪದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಒಪ್ಪಿಗೆಯ ಮೇರೆಗೆ ಔಷಧಿ ಪ್ರಯೋಗ ಮಾಡಲಾಗಿದೆ ಎಂದು ಎಸ್‌ಎಂಎಸ್‌ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಎಸ್‌ಎಂ ಮೀನಾ ತಿಳಿಸಿದ್ದಾರೆ. ಸದ್ಯ ದಂಪತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಮಹಿಳೆಯ ಆರೋಗ್ಯದಲ್ಲಿ ಕೊಂಚ ಸುಧಾರಿಸಿದ್ದು, ಪತಿಯ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾಳೆ ಎಂದು ಮೀನಾ ತಿಳಿಸಿದ್ದಾರೆ.

ಈ ಹಿಂದೆ ಚೀನಾ ಮತ್ತು ಥಾಯ್ಲೆಂಡ್‌ನಲ್ಲಿ ಐಎಚ್‌ವಿ ಸೋಂಕು ನಿಗ್ರಹದ ಮಾತ್ರೆಯನ್ನು ನೀಡಲಾಗಿತ್ತು.

click me!