ಶಿಕ್ಷಣ ಅಂದರೆ ಬರೀ ಒದುವ ಅಥವಾ ಬರೆಯುವ ಸಾಮರ್ಥ್ಯವಲ್ಲ; ಬದಲಾಗಿ ಸಮಗ್ರ ಬೌದ್ಧಿಕ ಬೆಳವಣಿಗೆಯೇ ಶಿಕ್ಷಣದ ಮೂಲ ಆಶಯವಾಗಿದೆ.
ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಸಂಪೂರ್ಣ ಬೆಳವಣಿಗೆಯೇ ಶಿಕ್ಷಣದ ಪ್ರಮುಖ ಉದ್ದೇಶ. ಕಲಿಸುವಿಕೆಯಲ್ಲಿ ಪ್ರಾಯೋಗಿಕ ವಿಧಾನ ಇದ್ದರೆ ಮಾತ್ರ ಶಿಕ್ಷಣದ ಗುರಿ ಮುಟ್ಟವುದು ಸಾಧ್ಯ. ಆ ಮೂಲಕ ವಿದ್ಯಾರ್ಥಿಗಳು ಕಲಿಯುವ ಜೊತೆಗೆ ವಿಷಯದ ಅನುಭವವನ್ನು ಕೂಡಾ ಪಡೆಯುತ್ತಾರೆ.
undefined
ಪಾದೂರಿನ ಹಿಂದೂಸ್ತಾನ್ ಇಂಟರ್ನ್ಯಾಷನಲ್ ಸ್ಕೂಲ್ (HIS) ವಿದ್ಯಾರ್ಥಿಗಳು ಕಳೆದ ಗುರುವಾರದಂದು (ನ.14) "Spectacular 2019" ವಿಜ್ಞಾನ, ಕಲೆ, ಕರಕುಶಲ, ರೋಬೋಟಿಕ್ಸ್ ಮತ್ತು ICT ಪ್ರದರ್ಶನವನ್ನು ಆಯೋಜಿಸಿದ್ದರು.
ಇದನ್ನೂ ಓದಿ | ಹಿಂದುಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ‘ಕೊರಿಯನ್ ದಿವಸ’ ಆಚರಣೆ... :
ಮಕ್ಕಳ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಬಾಲ ವಿಜ್ಞಾನಿಗಳು ತಮ್ಮ ಸೃಜನಶೀಲತೆ ಮತ್ತು ವೈಜ್ಞಾನಿಕ ಕೌಶಲ್ಯಗಳನ್ನು ಪ್ರದರ್ಶಿಸಿದರು. ಆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಮತ್ತು ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿತ್ತು.
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ಇಸ್ರೋದಲ್ಲಿ ಕೆಲಸ ಮಾಡಿದ ಅನುಭವವಿರುವ, ಮತ್ತು GSLV ಪ್ರಾಜೆಕ್ಟ್ ನ ಅಸೋಸಿಯೇಟ್ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿರುವ ಆರ್. ದೊರೈರಾಜ್ ಅವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳ ಕಲೆ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಮುಖ್ಯ ಅತಿಥಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೀವನಕ್ಕೆ ಅರ್ಥವಿರಬೇಕು, ಏನನ್ನು ಇಷ್ಟ ಪಡುತ್ತೀರೋ ಅದನ್ನೇ ಮಾಡಿ, ಏನು ಮಾಡ್ತೀರೋ ಅದನ್ನ ಇಷ್ಟ ಪಡಿ, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.