ಹೈದರಾಬಾದ್ ದೇಶದ ಎರಡನೇ ರಾಜಧಾನಿಯಾಗುತ್ತಾ? ಕೇಂದ್ರ ಸಚಿವರ ಸ್ಪಷ್ಟನೆ

By Web DeskFirst Published Nov 18, 2019, 4:00 PM IST
Highlights

ದೇಶದಲ್ಲಿ ಏಕರೂಪ ಸಂಹಿತೆ, ಎರಡನೇ ರಾಜಧಾನಿ?| ಚಳಿಗಾಲದ ಅಧಿವೇಶನ ಆರಂಭ| ಕೇಂದ್ರ ಸಚಿವರು ಕೊಟ್ರು ಸ್ಪಷ್ಟನೆ

ನವದೆಹಲಿ[ನ.18]: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಹಾಗೂ ಹೈದರಾಬಾದ್ ದೇಶದ ಎರಡನೇ ರಾಜಧಾನಿಯನ್ನಾಗಿಸುವ ವಿಚಾರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇಂತಹ ಮಸೂದೆ ಜಾರಿಗೊಳಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬ ಮಾತುಗಳು ಸದ್ದು ಮಾಡುತ್ತಿವೆ. ಇಂತಹ ಅಂತೆ ಕಂತೆಗಳ ನಡುವೆ ಕೇಂದ್ರ ಸಚಿವ ಕೆ. ಕೃಷ್ಣನ್ ರೆಡ್ಡಿ ಈ ಸಂಬಂಧ ಸ್ಪಷ್ಟನೆ ನೀಡುತ್ತಾ ಸರ್ಕಾರ ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಇಂದಿನಿಂದ ಚಳಿಗಾಲದ ‘ಬಿಸಿ’ ಅಧಿವೇಶನ ಶುರು

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕೆ. ಕೃಷ್ಣನ್ ರೆಡ್ಡಿ 'ಸರ್ಕಾರದೆದುರು ಹಲವಾರು ಪ್ರಸ್ತಾವನೆಗಳಿವೆ. ಆದರೆ ಹೈದರಾಬಾದ್‌ನ್ನು ರಾಷ್ಟ್ರದ ಎರಡನೇ ರಾಜಧಾನಿಯನ್ನಾಗಿಸುವ ಹಾಗೂ ಏಕರೂಪ ಸಂಹಿತೆ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆಗಳು ಬಂದಿಲ್ಲ. ತೆಲಂಗಾಣ ಸರ್ಕಾರದಿಂದಲೂ ಇಂತಹ ಯಾವುದೇ ಬೇಡಿಕೆ ಬಂದಿಲ್ಲ, ಕೇಂದ್ರ ಸರ್ಕಾರವೂ ಇಂತಹ ಮಾತುಕತೆ ನಡೆಸಿಲ್ಲ. ಇನ್ನು ಏಕರೂಪ ಸಂಹಿತೆ ಜಾರಿಗೊಳಿಸುವ ಯೋಜನೆಯೂ ಸರ್ಕಾರ ಮಾಡಿಲ್ಲ' ಎಂದಿದ್ದಾರೆ.

ಇದೇ ವೇಳೆ ಸಂಸತ್ ಚಳಿಗಾಲದ ಅಧಿವೇಶನ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಸಚಿವ 'ಪ್ರತಿಪಕ್ಷಗಳು ಮುಂದಿಡುವ ಎಲ್ಲಾ ಪ್ರಸ್ತಾವನೆಗಳ ಮೇಲೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ತಯಾರಿದೆ' ಎಂದಿದ್ದಾರೆ. ಅಲ್ಲದೇ 'ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಅಲ್ಲಿ ಹೆಚ್ಚು ಶಾಂತಿ ನೆಲೆಸಿದೆ' ಎಂದಿದ್ದಾರೆ.

ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!