
ಮುಂಬೈ: ‘ದ ಕಾಶ್ಮೀರ್ ಫೈಲ್ಸ್ ಚಿತ್ರವು ಅಸಭ್ಯವಾಗಿದೆ’ ಎಂದು ಗೋವಾ ಚಿತ್ರೋತ್ಸವದಲ್ಲಿ ಇಸ್ರೇಲಿ ಚಿತ್ರ ನಿರ್ಮಾಪಕ ಲಪಿಡ್ ಹೇಳಿಕೆ ನೀಡಿದ ಬೆನ್ನಲ್ಲೇ, ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ಉಗ್ರರಿಂದ ಹಿಂದೂಗಳಿಗೆ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಲಪಿಡ್ ಹಾಗೂ ಅವರ ಹೇಳಿಕೆ ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಅಗ್ನಿಹೋತ್ರಿ, ‘ಕಾಶ್ಮೀರದಲ್ಲಿ ಇನ್ನು ಯಾವೊಬ್ಬ ಹಿಂದುವಿನ ಮೇಲೆ ದಾಳಿ ನಡೆದರೂ ಅವರ ರಕ್ತ ಯಾರ ಕೈಗೆ ತಗುಲಿದೆ ಎಂಬುದು ನಿಮಗೆಲ್ಲ ತಿಳಿದಿದೆ’ ಎಂದು ತಿರುಗೇಟು ನೀಡಿದ್ದಾರೆ.
ಇಸ್ಲಾಮಿಕ್ ಉಗ್ರವಾದಿಗಳು (ISIS) ಭಾರತ ಸರ್ಕಾರದ (Indian Govt) ವೇದಿಕೆಯಾದ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Goa international Film festival) 2022ಕ್ಕೆ ಮುಕ್ತವಾಗಿ ಸೈದ್ಧಾಂತಿಕ ಬೆಂಬಲ ನೀಡಿದ್ದಾರೆ. ಇದಾದ ಒಂದು ವಾರಕ್ಕೂ ಮುನ್ನ ಪಾಕಿಸ್ತಾನದ ಉಗ್ರವಾದಿ ಸಂಘಟನೆ ಲಷ್ಕರ್-ಎ- ತೊಯ್ಬಾದ ಭಾಗವಾದ ರೆಸಿಸ್ಟನ್ಸ್ ಫ್ರಂಟ್ ಉಗ್ರವಾದಿಗಳು ಉದ್ದೇಶಿತ ದಾಳಿ ನಡೆಸಲು ಉದ್ದೇಶಿಸಿರುವ ಕಾಶ್ಮೀರಿ ಹಿಂದುಗಳ (Kashmiri Hindus) ಪಟ್ಟಿ ಬಿಡುಗಡೆ ಮಾಡಿದ್ದಾರೆ’ ಎಂದು ಅಗ್ನಿಹೋತ್ರಿ ಕಿಡಿಕಾರಿದ್ದಾರೆ.
Kashmir Killings: ಕಣಿವೆಯಲ್ಲಿ ಹರಿಯುತ್ತಿದೆ ಹಿಂದೂಗಳ ರಕ್ತದ ಕೋಡಿ: ಕಾಶ್ಮೀರ್ ಫೈಲ್ಸ್ ರಿ ಓಪನ್?
ಕಾಶ್ಮೀರ ಗವರ್ನರ್ ಮಹತ್ವದ ನಿರ್ಧಾರ, ಹಿಂದೂಗಳ ಭದ್ರತೆಗೆ ಕ್ರಮ!
ಬಿಜೆಪಿ ಚಾಣಕ್ಯನ ರಾಜತಾಂತ್ರಿಕ ನಿರ್ಧಾರಕ್ಕೆ ಬೆಚ್ಚಿ ಬಿದ್ದಿದೆ ಪಾಕ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ