ತ್ರಿಪುರಾದಲ್ಲೂ ಹಿಜಾಬ್‌ ಗಲಾಟೆ, ಪ್ರಿನ್ಸಿಪಾಲ್‌ ನಿರ್ಬಂಧಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗೆ ಥಳಿತ!

By Kannadaprabha News  |  First Published Aug 6, 2023, 9:21 AM IST

ತ್ರಿಪುರಾದಲ್ಲೂ ಹಿಜಾಬ್‌ ಗದ್ದಲ, ಶಾಲೆಯಲ್ಲಿ ಹಿಜಾಬ್‌ ಧರಿಸಬೇಡಿ ಎಂದು ಪ್ರಿನ್ಸಿಪಾಲ್‌ ಮೌಖಿಕ ಸೂಚನೆ ಇದನ್ನು ವಿರೋಧಿಸಿದ ಒಬ್ಬ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ಹಲ್ಲೆ


ಗುವಾಹಟಿ (ಆ.6): ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿನ ಹಿಜಾಬ್‌ ವಿವಾದದ ಬೆನ್ನಲ್ಲೇ ಸಮವಸ್ತ್ರ ಪಾಲನೆಗಾಗಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿ ಶಾಲೆಗೆ ಬರದಂತೆ ತ್ರಿಪುರಾದ ಶಾಲೆಯೊಂದರಲ್ಲೂ ನಿರ್ಬಂಧ ಹೇರಲಾಗಿದೆ. ಆದರೆ ನಿರ್ಬಂಧ ವಿರೋಧಿಸಿದ ವಿದ್ಯಾರ್ಥಿಯೋರ್ವನನ್ನು ಇತರರ ಗುಂಪು ಥಳಿಸಿಸಿದೆ.

ಸಿಬಿಎಸ್‌ಇ ಶಾಲೆಗಳಿಗೆ ಕನ್ನಡ ಕಡ್ಡಾಯ ವಿರೋಧಿಸಿ ಪೊಷಕರನ್ನು

Tap to resize

Latest Videos

undefined

ಇತ್ತೀಚೆಗೆ ಬಲಪಂಥೀಯ ವಿದ್ಯಾರ್ಥಿಗಳ ಗುಂಪೊಂದು ಸಿಪಾಹಿಝಾಲಾ ಜಿಲ್ಲೆಯ ವಿಶಾಲ್‌ಗಢದ ಶಾಲೆಯೊಂದಕ್ಕೆ ಬಂದು, ಶಾಲೆಗೆ ಹಿಜಾಬ್‌ ಧರಿಸಿ ಬರುವುದನ್ನು ನಿರ್ಬಂಧಿಸಬೇಕು ಎಂದು ಪ್ರಿನ್ಸಿಪಾಲರಿಗೆ ಆಗ್ರಹಿಸಿತು. ಇದಕ್ಕೆ ಓಗೊಟ್ಟಪ್ರಿನ್ಸಿಪಾಲರು, ಸರ್ಕಾರದ ಯಾವುದೇ ಸೂಚನೆ ಇರದಿದ್ದರೂ ‘ಶಾಲೆಗೆ ಹಿಜಾಬ್‌ ಧರಿಸಿ ಬರಬೇಡಿ. ವಸ್ತ್ರ ಸಂಹಿತೆಯನ್ನು ಪಾಲಿಸಿ’ ಎಂದು ವಿದ್ಯಾರ್ಥಿನಿಯರಿಗೆ ಮೌಖಿಕವಾಗಿ ತಿಳಿಸಿದ್ದರು. ಆದರೆ ಶನಿವಾರ ಇದನ್ನು 10ನೇ ತರಗತಿಯ ಬಾಲಕ ವಿರೋಧಿಸಿದ್ದಾಣೆ. ಆಗ ಬಲಪಂಥೀಯ ವಿದ್ಯಾರ್ಥಿಗಳು ಆತನನ್ನು ಥಳಿಸಿದ್ದಾರೆ.

ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್‌

ಈ ಘಟನೆಯಿಂದ ಆಖ್ರೋಶಗೊಂಡ ಸ್ಥಳೀಯರು ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಇನ್ನು ವಿದ್ಯಾರ್ಥಿ ಮೇಲೆ ದಾಳಿ ನಡೆಸಿದವರು ಹೊರಗಿನವರಾಗಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದು ಮತೀಯ ಕೃತ್ಯವಲ್ಲ ಎಂದು ಸ್ಪಷ್ಟನೆ ನೀಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಸದ್ಯ ತರಗತಿಗಳನ್ನು ಸ್ಥಗಿತಗೊಳಿಸಲಾಗಿದ್ದು ಸ್ಥಳದಲ್ಲಿ ಪೊಲೀಸರ ಭದ್ರತೆ ಒದಗಿಸಲಾಗಿದೆ.

click me!