
ಮುಂಬೈ(ಜೂ.27): ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ ಮುಂಬೈನ ಎನ್.ಜಿ. ಆಚಾರ್ಯ ಹಾಗೂ ಡಿ.ಕೆ. ಮರಾಠೆ ಕಾಲೇಜು ಆವರಣದಲ್ಲಿ ಹಿಜಾಬ್, ಬುರ್ಖಾ ಮತ್ತು ನಖಾಬ್ ಅನ್ನು ನಿಷೇಧಿಸುವ ಕಾಲೇಜು ಆಡಳಿತ ಮಂಡಳಿ ನಿರ್ಧಾರದಲ್ಲಿ ತಾನು ಮಧ್ಯಪ್ರವೇಶಿಸಲು ನಿರಾಕರಿಸಿದೆ. ಅಲ್ಲದೆ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.
‘ಕ್ಯಾಂಪಸ್‌ನಲ್ಲಿ ಹಿಜಾಬ್, ನಖಾಬ್, ಬುರ್ಕಾ, ಸ್ಟೋಲ್ಸ್, ಕ್ಯಾಪ್ ಮತ್ತು ಬ್ಯಾಡ್ಜ್ ಧಾರಣೆ ನಿಷೇಧಿಸುವ ವಸ್ತ್ರಸಂಹಿತೆಯನ್ನು ಕಾಲೇಜು ಜಾರಿಗೆ ತಂದಿದೆ. ಈ ನಿರ್ದೇಶನವು ಅವರವರ ಧರ್ಮ ಆಚರಣೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ, ಜತೆಗೆ ಖಾಸಗಿತನ ಮತ್ತು ವೈಯಕ್ತಿಕ ಆಯ್ಕೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ
ಆದರೆ ಈ ಅರ್ಜಿ ವಜಾ ಮಾಡಿದ ನ್ಯಾ। ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರ ಪೀಠ, ‘ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ. ವಾಸ್ತವವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಸ್ತು ಕಾಪಾಡಲು ಆಡಳಿತ ಮಂಡಳಿಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು ಅವರ ಮೂಲಭೂತ ಹಕ್ಕಾಗಿರುತ್ತದೆ. ಅದು ಎಲ್ಲಾ ಜಾತಿ, ಧರ್ಮಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಕಾಲೇಜು ತೆಗೆದುಕೊಂಡಿರುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡಾ ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದಿತ್ತು. ಬಳಿಕ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಅದು ಅಲ್ಲಿ ವಿಚಾರಣೆ ಹಂತದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ