
ನವದೆಹಲಿ(ಜ.20): ಕೊರೋನಾ ಲಸಿಕೆ ಪಡೆದ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಕೇವಲ ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತೀರಾ ಕಮ್ಮಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆರೋಗ್ಯ (ಆರೋಗ್ಯ) ಸದಸ್ಯ ವಿ.ಕೆ. ಪೌಲ್, ‘ಲಸಿಕೆ ಪಡೆದ ನಂತರ ಉಂಟಾದ ಅಡ್ಡಪರಿಣಾಮಗಳು, ಅದರ ಗಂಭೀರತೆ ನಗಣ್ಯ. ಎರಡೂ ಲಸಿಕೆಗಳು ಸುರಕ್ಷಿತ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ‘ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಬೇಸರದ ವಿಚಾರ. ಹೀಗಾಗಿ ಜನರು ಲಸಿಕೆ ಪಡೆಯಲು ಮುಂದಾಗಬೇಕು’ ಎಂದು ಕೋರಿದರು.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ‘ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತುಂಬಾ ಕಮ್ಮಿ ಪ್ರಮಾಣ’ ಎಂದರು.
ಭಾರತದಲ್ಲಿ ಮೊದಲ ದಿನ 2,07,229 ಜನ ಲಸಿಕೆ ಪಡೆದಿದ್ದಾರೆ. ಅಮೆರಿಕದಲ್ಲಿ 79,458 ಹಾಗೂ ಬ್ರಿಟನ್‌ನಲ್ಲಿ 19,700 ಮಂದಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಲಸಿಕೆ ಪಡೆದ ಏಕದಿನದ ಗರಿಷ್ಠ ದಾಖಲೆ ಭಾರತದ ಪಾಲಿಗೆ ಸಂದಿದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ