Soldier Martyred:  ಶ್ರೀನಗರದಲ್ಲಿ ಹಿಮಪಾತ, ಕೊಡಗು ಮೂಲದ ಯೋಧ ಹುತಾತ್ಮ

Published : Feb 23, 2022, 04:59 PM IST
Soldier Martyred:  ಶ್ರೀನಗರದಲ್ಲಿ ಹಿಮಪಾತ, ಕೊಡಗು ಮೂಲದ ಯೋಧ ಹುತಾತ್ಮ

ಸಾರಾಂಶ

* ಶ್ರೀನಗರದಲ್ಲಿ ಕೊಡಗು ಮೂಲದ  ಯೋಧ ಹುತಾತ್ಮ * ಎಒಸಿ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಅಲ್ತಾಫ್  * ಚೀನಾ ಗಡಿಯಲ್ಲಿ ಏಳು ಸೈನಿಕರು ಹಿಮಪಾತಕ್ಕೆ ಬಲಿಯಾಗಿದ್ದರು

ಶ್ರೀನಗರ( ಫೆ. 23)  ಶ್ರೀನಗರ(ಫೆ. 23)  ಶ್ರೀನಗರದಲ್ಲಿ (Srinagar)ಕೊಡಗು ಮೂಲದ ಯೋಧ (Indian Army) ಹಿಮಪಾತ ದಲ್ಲಿ ಸಿಲುಕಿ ಸಾವು ಕಂಡಿದ್ದಾರೆ.  ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಹುತಾತ್ಮರಾಗಿದ್ದಾರೆ.

ಎಒಸಿ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಅಲ್ತಾಫ್ ನ ಪೋಷಕರು ಕೇರಳದ (Kerala) ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿದ್ದಾರೆ.  10 ವರ್ಷಗಳಿಂದ ಕೇರಳದಲ್ಲಿ  ಕುಟುಂಬ ನೆಲೆಸಿದೆ. ವಿರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದಿದ್ದ ಅಲ್ತಾಫ್  ದ್ವಿತೀಯ ಪಿಯುಸಿವರೆಗೂ ಇಲ್ಲಿಯೇ ಶಿಕ್ಷಣ ಪಡೆದುಕೊಂಡರು.

ಪಿಯುಸಿ ಬಳಿಕ ಆರ್ಮಿ ಸೇರಿದ್ದ ಅಲ್ತಾಫ್ ದೇಶಸೇವೆಯಲ್ಲಿ  ನಿರತರಾಗಿದ್ದರು.  19 ವರ್ಷಗಳಿಂದ   ದೇಶ ಸೇವೆಯಲ್ಲಿದ್ದ ಯೋಧ ವಿರಾಜಪೇಟೆ ಬಳಿಯ  ಎಡಪಾಲ ನಿವಾಸಿಯನ್ನು ಮದುವೆಯಾಗಿದ್ದರು .

ಏಳು ಸೈನಿಕರು ಪ್ರಾಣ ತ್ಯಾಗ ಮಾಡಿದ್ದರು:  ಅರುಣಾಚಲ ಪ್ರದೇಶದ  ಕೆಮೆಂಗ್ ಸೆಕ್ಟರ್ ನಲ್ಲಿ ಕಳೆದ ವಾರ ಸಂಭವಿಸಿದ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಏಳು ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸೇನೆ ಖಚಿತಪಡಿಸಿದೆ. ಗಸ್ತು ತಂಡದ ಭಾಗವಾಗಿದ್ದ ಈ ಸೈನಿಕರ ಶವವನ್ನು ಹಿಮಪಾತದ ಪ್ರದೇಶದಿಂದ (avalanche site) ಹೊರತೆಗೆಯಲಾಗಿದೆ ಎಂದು ರಕ್ಷಣಾ ಸಚಿವಾಲಯದ (ತೇಜ್‌ಪುರ) ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ   ತಿಳಿಸಿದ್ದರು.

ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ... ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ

ಚೀನಾ ಗಡಿಯ ಅರುಣಾಚಲ ಪ್ರದೇಶದ (Arunachal Pradesh)  ಕಮೆಂಗ್‌ ವಲಯದಲ್ಲಿ ಪಹರೆ ನಡೆಸುತ್ತಿದ್ದ 7 ಸೇನಾ ಯೋಧರ  ಹಿಮಪಾತವಾಗಿತ್ತು. ಸೇನಾ ಸಿಬ್ಬಂದಿ ಗಸ್ತು ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಸಂಭವಿಸಿತ್ತು ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ವಿಶೇಷ ತಂಡಗಳನ್ನು ಹಿಮಪಾತದ ಪ್ರದೇಶಕ್ಕೆ ಏರ್ ಲಿಫ್ಟ್ (Air List) ಮಾಡಲಾಗಿತ್ತು.
 
ನಂದಿ ಹಿಲ್ಸ್ ನಲ್ಲಿ ರೋಚಕ  ಕಾರ್ಯಾಚರಣೆ: ಬ್ರಹ್ಮಗಿರಿಯಲ್ಲಿ (Brahmagiri) ಟ್ರೆಕ್ಕಿಂಗ್‌ (Trekking)  ವೇಳೆ ಅಕಸ್ಮಿಕವಾಗಿ ಕಾಲುಜಾರಿ ಬರೋಬ್ಬರಿ 250 ಅಡಿಯಷ್ಟುಅಳಕ್ಕೆ ಬಿದ್ದು ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ (Bengaluru) ವಿದ್ಯಾರ್ಥಿಯೊಬ್ಬನನ್ನು ವಾಯುಪಡೆ ಸಿಬ್ಬಂದಿ ಹೆಲಿಕಾಪ್ಟರ್‌ ಬಳಸಿ ರಕ್ಷಿಸಿದ್ದರು. ಬೆಂಗಳೂರಿನ ಪಿಇಎಸ್‌ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ದೆಹಲಿ ಮೂಲದ ನಿಶಾಂತ್‌ ಕೌಲ್‌(19)  ಬದುಕಿ ಬಂದಿದ್ದರು.

ವಾರಾಂತ್ಯದ ಹಿನ್ನೆಲೆಯಲ್ಲಿ ನಿಶಾಂತ್‌ ನಂದಿಗಿರಿಧಾಮದ ಸಮೀಪ ಇರುವ ಬ್ರಹ್ಮಗಿರಿಗೆ ಟ್ರಕ್ಕಿಂಗ್‌ ತೆರಳಿದ್ದಾನೆ. ಈ ವೇಳೆ ಅಕಸ್ಮಾತಾಗಿ ಕಾಲು ಜಾರಿ ಸುಮಾರು 250 ಅಡಿ ಆಳದ ದುರ್ಗಮ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್‌ ಆತನ ಜೇಬಿನಲ್ಲಿ ಮೊಬೈಲ್‌ ಫೋನ್‌ ಸುರಕ್ಷಿತವಾಗಿದ್ದರಿಂದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ತಕ್ಷಣವೇ ಅವರು ವಿಷಯವನ್ನು ನಂದಿ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಜಿಲ್ಲಾಡಳಿತ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳನ್ನು ಸಂಪರ್ಕಿಸಿ ಪರಿಸ್ಥಿತಿ ಬಗ್ಗೆ ಗಮನ ಸೆಳೆದಾಗ ವಾಯಪಡೆಯ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ರಕ್ಷಣೆ ಮಾಡಿದ್ದವು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!