
ನವದೆಹಲಿ (ಜ.29) ಭಾರತೀಯ ದಂಪತಿ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳುವ ಅವಕಾಶ ಒದಗಿಬಂದಿತ್ತು. ವೃತ್ತಿ, ಉತ್ತಮ ಜೀವನದ ಕಾರಣಗಳಿಂದ ದಂಪತಿಗಳು ಆಸ್ಟ್ರೇಲಿಯಾ ಸ್ಥಳಾಂತರಕ್ಕೆ ನಿರ್ಧರಿಸಿದ್ದರು. ಆದರೆ ನಾಯಿಯನ್ನು ಭಾರತದಿಂದ ನೇರವಾಗಿ ಆಸ್ಟ್ರೇಲಿಯಾಗೆ ಜೊತೆಯಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಆಸ್ಟ್ರೇಲಿಯಾ ನಿಯಮದ ಪ್ರಕಾರ ನಾಯಿ ರೇಬಿಸ್ ಮುಕ್ತ ದೇಶದಲ್ಲಿ ಕನಿಷ್ಠ 6 ತಿಂಗಳು ಇರಬೇಕಿತ್ತು. ಆದರೆ ತಮ್ ನಾಯಿಯನ್ನು ಭಾರತದಲ್ಲಿ ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ದುಬಾರಿಯಾದರೂ ಪರ್ವಾಗಿಲ್ಲ ಎಂದು ನಾಯಿಯನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಜೊತೆಗೆ 6 ತಿಂಗಳು ವಿರಹ ವೇದನೆಯನ್ನೂ ಅನುಭವಿಸಿದ್ದಾರೆ. ಕೊನೆಗೂ ನಾಯಿ ಇದೀಗ ಭಾರತೀಯ ದಂಪತಿಗಳ ಮಡಿಲು ಸೇರಿದೆ.
ಹೈದರಾಬಾದ್ ನಿವಾಸಿಗಳಾದ ದಿವ್ಯ ಹಾಗೂ ಜಾನ್ ಆಸ್ಟ್ರೇಲಿಯಾಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರು. ಆದರೆ ತಮ್ಮ ಮುದ್ದಿನ ನಾಯಿಗೆ ಆಸ್ಟೇಲಿಯಾ ನಿಯಮಗಳು ಅನುಮತಿ ನೀಡಿಲ್ಲ. ಆಸ್ಟ್ರೇಲಿಯಾದ ನಿಯಮಗಳ ಕುರಿತು ಪರಿಶೀಲಿಸಿದ ದಿವ್ಯ ಹಾಗೂ ಜಾನ್ ನಾಯಿನ್ನು ನಿಯಮದಂತೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಭಾರತದಿಂದ ಆಸ್ಟ್ರೇಲಿಯಾಗೆ ಸಾಕು ನಾಯಿಯನ್ನು ಡೈರೆಕ್ಟ್ ಆಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ನಿಯಮ ಪ್ರಕಾರ ನಾಯಿ ಕನಿಷ್ಠ 6 ತಿಂಗಳು ರೇಬಿಸ್ ಮುಕ್ತ ದೇಶದಲ್ಲಿರಬೇಕು. ಹೀಗಾಗಿ ದಿವ್ಯ ಹಾಗೂ ಜಾನ್ ದಂಪತಿ ದುಬೈ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ಬಳಿಕ ನಾಯಿ ಜೊತೆ ನೇರವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ದುಬೈಗೆ ತೆರಳಿದ ದಂಪತಿ ಡಾಗ್ ಕೇರ್ ಸೆಂಟರ್‌ನಲ್ಲಿ ತಮ್ಮ ಮುದ್ದಿನ ನಾಯಿ ಆರೈಕೆಗೆ ಮುಂದಾಗಿದ್ದಾರೆ. ಮುದ್ದಿನ ನಾಯಿಗೆ ಹೊಸ ಜಾಗ, ಹೊಸ ಸಿಬ್ಬಂದಿಗಳ ಸಮಸ್ಯೆಯಾಗಬಾರದು ಎಂದು ಒಂದು ತಿಂಗಳು ಈ ದಂಪತಿ ನಾಯಿ ಜೊತೆ ದುಬೈನಲ್ಲೇ ಉಳಿದುಕೊಂಡಿದ್ದಾರೆ. ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಕೆಲಸಕ್ಕೆ ಹಾಜರಾಗಬೇಕಿತ್ತು. ಹೀಗಾಗಿ ಅನಿವಾರ್ಯವಾಗಿ ಮುದ್ದಿನ ನಾಯಿಗೆ ವಿದಾಯ ಹೇಳಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಬಳಿಕ ನೋವಿನಲ್ಲೇ 5 ತಿಂಗಳು ಕಳೆದಿದ್ದಾರೆ.
ಪ್ರತಿ ದಿನ ಆರೈಕೆ ಕೇಂದ್ರಕ್ಕೆ ಕರೆ ಮಾಡಿ ನಾಯಿ ಬಗ್ಗೆ ವಿಚಾರಿಸುತ್ತಿದ್ದರು. ವಿಡಿಯೋ ಕಾಲ್ ಮಾಡಿ ನಾಯಿ ಜೊತೆ ಪ್ರೀತಿ ಹಂಚಿಕೊಳ್ಳುತ್ತಿದ್ದರು. ಆದರೆ ನೋವು ಮಾತ್ರ ಕಡಿಮೆಯಾಗಿರಲಿಲ್ಲ. 6 ತಿಂಗಳು ರೇಬಿಸ್ ಮುಕ್ತ ದೇಶದ ವಾಸ ಬಳಿಕ ನಾಯಿಯನ್ನು ದುಬೈನಿಂದ ಆಸ್ಟ್ರೇಲಿಯಾಗೆ ಸ್ಥಳಾಂತರ ಮಾಡಲಾಗಿಯಿತು. 5 ತಿಂಗಳ ಬಳಿ ನಾಯಿ ಮತ್ತೆ ತಮ್ಮ ಮಡಿಲು ಸೇರಿದ ಖುಷಿಯನ್ನು ದಂಪತಿಗಳು ಹಂಚಿಕೊಂಡಿದ್ದಾರೆ.
ನಾಯಿಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡುತ್ತೀದ್ದಿರಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದರು. ಬೇರೆ ನಾಯಿ ಖರೀದಿಸಿದರೆ ಮುಗೀತು, ಇಷ್ಟೊಂದು ಕಷ್ಟ ಯಾಕೆ, ಹಣ ಖರ್ಚು ಮಾಡುತ್ತಿರುವುದೇಕೆ ಎಂದು ಆಪ್ತರು, ಸಂಬಂಧಿಕರು ಪ್ರಶ್ನಿಸಿದ್ದರು. ಆದರೆ ನಮ್ಮ ಮುದ್ದಿನ ನಾಯಿ ನಮಗೆ ಮಗುವಿನಂತೆ. ಆ ಪ್ರೀತಿ ಮತ್ತೊಂದು ನಾಯಿಯಿಂದ ಪಡೆಯಲು ಅಸಾಧ್ಯ. ನಮಗೆ ಹಣಕ್ಕಿಂತ ನಮ್ಮ ನಾಯಿಯ ಪ್ರೀತಿ ಮುಖ್ಯವಾಗಿತ್ತು. ಹೀಗಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯನ್ನು ಸ್ಥಳಾಂತರ ಮಾಡಿದ್ದೇವೆ ಎಂದು ದಿವ್ಯ ಹಾಗೂ ಜಾನ್ ಸಂತಸ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ