ಬೀದಿಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

Published : Jul 06, 2025, 05:06 PM IST
Dog chase owner Faridabad

ಸಾರಾಂಶ

ಸಾಕಿದ ನಾಯಿಯನ್ನು ಆರೈಕೆ ಮಾಡದ ಮಾಲೀಕ ದೂರದ ಬೀದಿಯಲ್ಲಿ ಬಿಟ್ಟು ಕಾರಿನಲ್ಲಿ ವೇಗವಾಗಿ ತೆರಳಿದ್ದಾನೆ. ಆದರೆ ಮಾಲೀಕನ ಕಾರಿನ ಹಿಂದೆ ಓಡುತ್ತಿರುವ ದೃಶ್ಯ ಸೆರೆಯಾಗಿದೆ.  ಈ ಮನಕಲುವ ವಿಡಿಯೋ ಹಲವರನ್ನು ಭಾವುಕರನ್ನಾಗಿ ಮಾಡಿದೆ. 

ಫರೀದಾಬಾದ್ (ಜು.06) ನಾಯಿ ಮರಿಯನ್ನು ತಂದು ಮುದ್ದಾಗಿ ಸಾಕುತ್ತಾರೆ. ಆದರೆ ನಾಯಿಗೆ ವಯಸ್ಸಾದರೆ, ಆರೋಗ್ಯ ಹದಗೆಟ್ಟಿದ್ದರೆ, ನಾಯಿ ತನ್ನ ಮಾತು ಕೇಳುತ್ತಿಲ್ಲ ಎಂದಾದರೆ ಕೆಲವರು ಈ ಸಾಕು ನಾಯಿಯನ್ನು ಬೀದಿಗೆ ತಳ್ಳುತ್ತಾರೆ. ಹೀಗೆ ಮಾಲೀಕನೊಬ್ಬ ತನ್ನ ಕಾರಿನಲ್ಲಿ ಮನೆಯಿಂದ ಹಲವು ಕಿಲೋಮೀಟರ್ ದೂರಕ್ಕೆ ನಾಯಿಯನ್ನು ಕರೆದುಕೊಂಡು ತೆರಳಿದ್ದಾನೆ. ಬಳಿಕ ಈ ನಾಯಿಯನ್ನು ಮಾರುಕಟ್ಟೆ ಬಳಿ ಕಾರಿನಿಂದ ಕೆಳಗಿಳಿಸಿ, ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ. ಮಾಲೀಕನ ಕಾರಿನಲ್ಲಿ ತೆರಳುತ್ತಿರುವುು ಗಮನಿಸಿದ ನಾಯಿ ಕಾರನ್ನು ಹಿಂಬಾಲಿಸಿದೆ. ಹಲವು ಕಿಲೋಮೀಟರ್ ವರೆಗೆ ನಾಯಿ ಕಾರು ಹಿಂಬಾಲಿಸಿ ಬಸವಳಿದ ಘಟನೆ ನಡೆದಿದೆ. ಆದರೆ ಮಾಲೀಕ ಮಾತ್ರ ನಾಯಿ ಕಡೆ ತಿರುಗಿ ನೋಡದೆ ತೆರಳಿದ ಮನಕಲುಕುವ ಘಟನೆ ವಿಡಿಯೋ ಸೆರೆಯಾಗಿದೆ.

ವಿದಿತ್ ಶರ್ಮಾ ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರೆ. ಇಷ್ಟೊಂದು ಕ್ರೂರ ಮನಸ್ಸು ಯಾಕೆ? ಸಾಕಿದ ನಾಯಿಯನ್ನು ಬೀದಿಯಲ್ಲಿ ಬಿಟ್ಟುಹೋಗುತ್ತಿರುವ ಮನಸ್ಥಿತಿ ಅತ್ಯಂತ ಕ್ರೂರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

 

 

ಆಸ್ಪತ್ರೆ ಪಕ್ಕದಲ್ಲಿ ನಾಯಿ ಬಿಟ್ಟು ತೆರಳಿದ ಮಾಲೀಕ

ಫರೀದಾಬಾದ್‌ನ ಕ್ಯೂಆರ್‌ಜಿ ಆಸ್ಪತ್ರೆ ಬಳಿ ಟಾಚಾ ಪಂಚ್ ಕಾರಿನ ಮೂಲಕ ಆಗಮಿಸಿದ ಮಾಲೀಕನೊಬ್ಬ ತನ್ನ ನಾಯಿಯನ್ನು ಕಾರಿನಿಂದ ಇಳಿಸಿದ್ದಾನೆ. ಬಳಿಕ ತಾನು ಕಾರು ಹತ್ತಿ ಅತೀ ವೇಗವಾಗಿ ತೆರಳಿದ್ದಾನೆ. ಮಾಲೀಕ ತನ್ನನ್ನು ಈ ಬೀದಿಗೆ ತಳ್ಳಲು ಬಂದಿದ್ದಾನೆ ಅನ್ನೋ ಯಾವುದೇ ಅರಿವಿಲ್ಲದ ನಾಯಿ ಅತ್ತ ಇತ್ತ ನೋಡುತ್ತಿದ್ದಂತೆ ಮಾಲೀಕನ ಕಾರು ಹತ್ತಿ ವೇಗವಾಗಿ ತೆರಳಿದ್ದಾನೆ. ಈ ಕುರಿತ ಮಾಹಿತಿಯನ್ನು ವಿದಿತ್ ಶರ್ಮಾ ನೀಡಿದ್ದಾರೆ.

ಹಲವರು ಕೂಗಿಕೊಂಡರೂ ಮತ್ತಷ್ಟು ವೇಗವಾಗಿ ತೆರಳಿದ ಮಾಲೀಕ

ಮಾಲೀಕನ ಕಾರು ವೇಗವಾಗಿ ಸಾಗುತ್ತಿದ್ದಂತೆ ನಾಯಿ ಕಾರಿನ ಹಿಂಬಾಲಿಸಲು ಆಗಮಿಸಿದೆ. ಹೆದ್ದಾರಿ ರಸ್ತೆಯಲ್ಲಿ ಕಾರು ವೇಗವಾಗಿ ಸಾಗುತ್ತಿದೆ. ಇತ್ತ ನಾಯಿ ಈ ಕಾರಿನ ಹಿಂದೆ ಬೊಗಳುತ್ತಾ ಅಷ್ಟೇ ವೇಗವಾಗಿ ಓಡುತ್ತಿದೆ. ಹಲವರು ನಾಯಿ ಹಿಂಬಾಲಿಸುತ್ತಿರುವುದಾಗಿ ಕಾರಿನ ಮಾಲೀಕನಿಗೆ ಕೂಗಿ ಹೇಳಿದ್ದಾರೆ. ಆದರೆ ಮಾಲೀಕ ಮಾತ್ರ ಯಾವ ಮಾತು ಕೇಳಿಸಿಕೊಳ್ಳದೇ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿದ್ದಾನೆ. ಹಲವರು ವಿಡಿಯೋ ಮಾಡಿದ್ದಾರೆ. ಸರಿಸುಮಾರು 2 ಕಿಲೋಮೀಟರ್‌ಗೂ ಹೆಚ್ಚು ದೂರದವರಗೆ ನಾಯಿ ಓಡುತ್ತಿರುವ ವಿಡಿಯೋ ಸೆರೆಯಾಗಿದೆ. ಆದರೆ ಮಾಲೀಕ ಮಾತ್ರ ಕಾರು ನಿಲ್ಲಿಸಿಲ್ಲ. ಆತನ ಮನಸ್ಸು ಕರಗಿಲ್ಲ. ನಾಯಿಯನ್ನು ಬಿಟ್ಟು ತೆರಳಿದ್ದಾನೆ.

ಬಸವಳಿದ ನಾಯಿಗೆ ಕಾರು ಹಿಂಬಾಸಲು ಸಾಧ್ಯವಾಗಿಲ್ಲ

ಹಲವು ಕಿಲೋಮೀಟರ್‌ನಿಂದ ರಸ್ತೆಯಲ್ಲಿ ಕಾರನ್ನು ಹಿಂಬಾಲಿಸಿದ ನಾಯಿ ಬಸವಳಿದಿದೆ. ಆದರೆ ಕಾರಿನ ವೇಗ ಮತ್ತಷ್ಟು ಹೆಚ್ಚಾಗುತ್ತಾ ಹೋಗಿದೆ. ಹೀಗಾಗಿ ನಾಯಿ ತೀವ್ರ ಬಸವಳಿದಿದೆ. ಮಾಲೀಕ, ತಾನು ಸಾಕಿದ ನಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ. ನಾಯಿ ಮಾತ್ರ ಅನಾಥವಾಗಿದೆ.

ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಾಯಿಯನ್ನು ಸರಿಯಾಗಿ ಸಾಕಲು, ಆರೈಕೆ ಮಾಡಲು ಸಾಧ್ಯವಾಗದಿದ್ದರೆ ಈ ಪ್ರಯತ್ನಕ್ಕೈ ಕೈಹಾಕಬಾರದು. ನಾಯಿಗೆ ಆರೋಗ್ಯ ಕೆಟ್ಟಾಗ, ಅಥವಾ ವಯಸ್ಸಾಯಿತು, ಕೂದಲು ಸುಕ್ಕಾಗಿದೆ ಎಂದು ಬೀದಿಯಲ್ಲಿ ಬಿಡುವುದು ಸರಿಯಲ್ಲ. ಹೆದ್ದಾರಿಯಲ್ಲಿ ಕಾರಿನ ಹಿಂದೆ ಓಡಿದ ನಾಯಿ ವಾಹನಕ್ಕೆ ಡಿಕ್ಕಿಯಾಗುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ಬೆಳೆದ ನಾಯಿಗೆ ಬೀದಿಯಲ್ಲಿ ಬದಕಲು ಸಾಧ್ಯವಿಲ್ಲ. ಇತರ ನಾಯಿಗಳ ದಾಳಿ, ವಾಹನಗಳ ನಡುವೆ ಓಡಾಟ ಸಾಧ್ಯವಿಲ್ಲ. ಈ ರೀತಿ ಕ್ರೂರ ಮನಸ್ಸಿದ್ದವರೂ ನಾಯಿ ಸಾಕಲು ಹೋಗಬೇಡಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ನಕಾರಿನ ನಂಬರ್ ಮಾಹಿತಿ ಇದೆ. ಹೀಗಾಗಿ ಪೊಲೀಸರು ತಕ್ಷಣ ಈತನ ಗುರುತಿಸಬೇಕು. ಬಳಿಕ ಬೀದಿಯಲ್ಲಿ ಬಿಟ್ಟ ನಾಯಿಯನ್ನು ಆತನ ಮನೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು