ದೈಹಿಕ ಸಂಬಂಧ ಬೆಳೆಸಿದರೆ ಐಫೋನ್, ಬ್ಯಾಂಕ್ ಮ್ಯಾನೇಜರ್ ವಿಡಿಯೋ ಬಹಿರಂಗ ಬೆನ್ನಲ್ಲೇ ಕೇಸ್

Published : Jul 06, 2025, 03:12 PM IST
Bank Manager

ಸಾರಾಂಶ

ದೈಹಿಕ ಸಂಬಂಧ ಬೆಳೆಸಿದರೆ ಐಫೋನ್ ಗಿಫ್ಟ್, ಇದು ಬ್ಯಾಂಕ್ ಮ್ಯಾನೇಜರ್ ಜ್ಯೂನಿಯರ್ ಮಹಿಳಾ ಉದ್ಯೋಗಿಗಳಿಗೆ ಕಳುಹಿಸುತ್ತಿರುವ ಮೇಸೇಜ್. ಇಷ್ಟೇ ಅಲ್ಲ ತನ್ನ ಛೇಂಬರ್‌ಗೆ ಕರೆಸಿ ಕಿರುಕುಳ ನೀಡುತ್ತಿರುವ ವಿಡಿಯೋವನ್ನು ಮಹಿಳಾ ಉದ್ಯೋಗಿ ಸೆರೆ ಹಿಡಿದಿದ್ದಾರೆ. 

ಉನಾ (ಜು.06) ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದರೆ ಐಫೋನ್ ಗಿಫ್ಟ್ ಕೊಡುತ್ತೇನೆ. ಹೀಗೆ ರಾಷ್ಟ್ರೀಕೃತ ಬ್ಯಾಂಕ್‌ನ ಸರ್ವೀಸ್ ಮ್ಯಾನೇಜರ್ ತನ್ನ ಕಿರಿಯ ಮಹಿಳಾ ಸಹೋದ್ಯೋಗಿಗಳಿಗೆ ವ್ಯಾಟ್ಸಾಪ್ ಮೇಸೇಜ್ ಕಳುಹಿಸಿದ್ದಾನೆ. ಬಳಿಕ ಆಡಿಟ್, ಲೆಕ್ಕ ಎಂದು ಪದೇ ಪದೇ ಛೇಂಬರ್‌ಗೆ ಕರೆಸಿ ಮಹಿಳಾ ಉದ್ಯೋಗಿಗಳ ಜೊತೆ ಅಸಭ್ಯ ವರ್ತನೆ ತೋರಿದ ಬ್ಯಾಂಕ್ ಸರ್ವೀಸ್ ಮ್ಯಾನೇಜರ್ ವಿಡಿಯೋ ಒಂದು ಬಹಿರಂಗವಾಗಿದೆ. ಮಹಿಳಾ ಉದ್ಯೋಗಿ ತನ್ನ ಮೇಲೆ ಮ್ಯಾನೇಜರ್ ನಡೆಸಿದ ಕಿರುಕುಳದ ವಿಡಿಯೋವನ್ನು ರಹಸ್ಯವಾಗಿ ಸೆರೆ ಹಿಡಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲಾದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ.

ಮಹಿಳಾ ಉದ್ಯೋಗಿ ನೀಡಿದ ದೂರು, ವಿಡಿಯೋ ದಾಖಲೆ ಆಧಾರದಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಉನಾ ಜಿಲ್ಲೆಯಾ ರಾಷ್ಟ್ರೀಕೃತ ಬ್ಯಾಂಕ್‌ನ ಸರ್ವೀಸ್ ಮ್ಯಾನೇಜರ್ ಮನೀಂದ್ರ ಕನ್ವಾರ್ ಎಂದು ಗರುತಿಸಲಾಗಿದೆ. ಕಳೆದ ಕೆಲ ತಿಂಗಳಿನಿಂದ ಈ ಬ್ಯಾಂಕ್ ಮ್ಯಾನೇಜರ್ ಮನೀಂದ್ರ ಕನ್ವಾರ್ ಈ ರೀತಿ ಕಿರುಕುಳ ನೀಡುತ್ತಿರುವುದು ಬಹಿರಂಗವಾಗಿದೆ. ಮಹಿಳಾ ಸಹೋದ್ಯೋಗಿಳಿಗೆ ವ್ಯಾಟ್ಸಾಪ್ ಮೇಸೇಜ್, ವಿಡಿಯೋ ಕಳುಹಿಸಿ ಕಿರುಕುಳ ನೀಡಿದ್ದಾನೆ ಎಂದು ದೂರು ದಾಖಲಾಗಿದೆ.

 

 

ರಹಸ್ಯವಾಗಿ ವಿಡಿಯೋ ಸೆರೆ ಹಿಡಿದ ಮಹಿಳಾ ಉದ್ಯೋಗಿ

ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಕಿರಿಯ ಮಹಿಳಾ ಉದ್ಯೋಗಿಗಳೇ ಈತನ ಟಾರ್ಗೆಟ್. ಆಡಿಟ್, ಹಣದ ಲೆಕ್ಕ ಎಂದು ಛೇಂಬರ್‌ಗೆ ಕರೆಯಿಸಿಕೊಳ್ಳುವ ಈ ಮ್ಯಾನೇಜರ್, ಬಳಿಕ ಐಪೋನ್ ಆಫರ್ ಮಾಡುತ್ತಾನೆ. ಉದ್ಯೋದ ಪ್ರಮೋಶನ್, ಇತರ ಸೌಲಭ್ಯಗಳ ಆಫರ್ ಮಾಡುತ್ತಾ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ನೀಡುತ್ತಿರುವುದು ಕಳೆದ ಹಲವು ದಿನಗಳಿಂದ ನಡೆಯುತ್ತಿತ್ತು ಅನ್ನೋದು ಮಹಿಳಾ ಉದ್ಯೋಗಿ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ಛೇಂಬರ್‌ಗೆ ಕಿರಿಯ ಮಹಿಳಾ ಉದ್ಯೋಗಿಯನ್ನು ಕರೆಯಿಸಿಕೊಂಡು ಕಿರುಕುಳ ನೀಡುತ್ತಿರುವ ಘಟನೆ ಹೆಚ್ಚಾಗುತ್ತಿದ್ದಂತೆ ಒರ್ವ ಮಹಿಳಾ ಉದ್ಯೋಗಿ ರಹಸ್ಯ ಕ್ಯಾಮೆರಾದೊಂದಿದೆ ತೆರಳಿ ಮ್ಯಾನೇಜರ್ ಕಿರುಕುಳ ಸೆರೆ ಹಿಡಿದಿದ್ದಾಳೆ.

ಆಡಿಟ್ ವಿಚಾರದಲ್ಲಿ ಮಹಿಳಾ ಉದ್ಯೋಗಿಯನ್ನು ಛೇಂಬರ್‌ಗೆ ಕರೆದ ಮ್ಯಾನೇಜರ್ ಬಳಿಕ ತನ್ನ ಎಂದಿನಂತೆ ಕಾರ್ಯ ಮುಂದುವರಿಸಲು ಮುಂದಾಗಿದ್ದಾನೆ. ಪಕ್ಕದಲ್ಲೇ ಮಹಿಳಾ ಉದ್ಯೋಗಿಯನ್ನು ಕೂರಿಸಿಕೊಂಡು ಆಡಿಟ್ ಕೆಲಸ ಶುರುಮಾಡಿದ ಮ್ಯಾನೇಜರ್, ಬಳಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಮಹಿಳಾ ಉದ್ಯೋಗಿ ಮರು ಮಾತನಾಡದೇ ರಹಸ್ಯ ಕ್ಯಾಮೆರಾದಲ್ಲಿ ಎಲ್ಲವನ್ನೂ ಸೆರೆ ಮಾಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಹಿಳಾ ಉದ್ಯೋಗಿ

ರಹಸ್ಯ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದ ಮಹಿಳಾ ಉದ್ಯೋಗಿ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.ವಿಡಿಯೋ ದಾಖಲೆಯನ್ನು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ನಾಲ್ಕು ವರ್ಷದಲ್ಲೇ ಎರಡನೇ ಪ್ರಕರಣ

ಇದೇ ಬ್ಯಾಂಕ್ ಶಾಖೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದಾಗಿದೆ. ನಾಲ್ಕು ವರ್ಷ ಮೊದಲು ಇಂತದ್ದೆ ಪ್ರಕರಣ ದಾಖಲಾಗಿತ್ತು. ಈ ವೇಳೆ ದೂರಿನ ಆಧಾರದಲ್ಲಿ ಮೇಲೆ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಬಂಧಿಸಿದ್ದರು. ಬಳಿಕ ಬ್ಯಾಂಕ್ ಕೂಡ ಮ್ಯಾನೇಜರ್ ಅಮಾನತು ಮಾಡಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!