ಭಾರತರತ್ನಕ್ಕಿಂತ ಮೇಲೆ ಗಾಂಧಿ ಅವರನ್ನು ಜನ ಇಟ್ಟಿದ್ದಾರೆ: ಸುಪ್ರೀಂ

By Suvarna NewsFirst Published Jan 18, 2020, 8:58 AM IST
Highlights

ಭಾರತರತ್ನಕ್ಕಿಂತ ಮೇಲೆ ಗಾಂಧಿ ಅವರನ್ನು ಜನ ಇಟ್ಟಿದ್ದಾರೆ| ಗಾಂಧೀಜಿ ದೇಶಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಅವರಿಗೆ ಅಧಿಕೃತ ಗೌರವ ನೀಡಬೇಕು

ನವದೆಹಲಿ[ಜ.18]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

'ಮಹಾತ್ಮ ಗಾಂಧೀಜಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು'

ಇದೇ ವೇಳೆ, ಯಾವುದೇ ಅಧಿಕೃತ ಮನ್ನಣೆಗಿಂತ ಅತ್ಯಂತ ಗೌರವದ ಸ್ಥಾನದಲ್ಲಿ ಜನರೇ ರಾಷ್ಟ್ರಪಿತನನ್ನು ಇಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತಾದ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಅರ್ಜಿದಾರ ಅನಿಲ್‌ ದತ್ತ ಶರ್ಮಾ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿದ್ದ ಪೀಠ ಸೂಚಿಸಿದೆ.

ಗಾಂಧೀಜಿ ದೇಶಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಅವರಿಗೆ ಅಧಿಕೃತ ಗೌರವ ನೀಡಬೇಕು ಎಂದು ಕೇಂದ್ರಕ್ಕೆ ಸೂಚಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಮಹಾತ್ಮ ಗಾಂಧಿ ಸಾವು ಆಕಸ್ಮಿಕ: ಶಾಲಾ ಕಿರುಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ!

click me!