
ನವದೆಹಲಿ (ಡಿ. 04): ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದೆ ಎನ್ನಲಾದ ಹೈದರಾಬಾದ್ ಮೂಲದ ಕಂಪನಿಯೊಂದರಿಂದ 170 ಕೋಟಿ ರು. ದೇಣಿಗೆ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ.
ಹೈದರಾಬಾದ್‌ನಲ್ಲಿ ಮೇಘಾ ಇನ್‌ಫ್ರಾಸ್ಟ್ರಕ್ಚರ್ ಆ್ಯಂಡ್ ಎಂಜಿನಿಯರಿಂಗ್ ಎಂಬ ನಿರ್ಮಾಣ ಸಂಸ್ಥೆಯಿದೆ. ಇದರ ವಿರುದ್ಧ ನಕಲಿ ಬಿಲ್ ಸೃಷ್ಟಿಹಾಗೂ ಹವಾಲಾ ವ್ಯವಹಾರ ಮಾಡಿದ ಆರೋಪವಿದೆ. ಸುಮಾರು 3 ಸಾವಿರ ಕೋಟಿ ರು. ಮೌಲ್ಯದ ಹವಾಲಾ ಜಾಲದ ಕೇಸು ಇದಾಗಿದೆ.
ಮಂಡ್ಯ: ಮಾಜಿ ಸಚಿವ ರೇವಣ್ಣ ಪುತ್ರನ ವಿರುದ್ಧ FIR
ಈ ಕಂಪನಿಯಿಂದ ಕಾಂಗ್ರೆಸ್ ಪಕ್ಷಕ್ಕೆ 170 ಕೋಟಿ ರು. ಸಂದಾಯವಾದ ಮಾಹಿತಿ ಈಗ ಆದಾಯ ತೆರಿಗೆ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಸ್ಪಷ್ಟೀಕರಣ ಬಯಸಿ ನೋಟಿಸ್ ಜಾರಿ ಮಾಡಲಾಗಿದೆ.
ಇದಲ್ಲದೆ, ಕಾಂಗ್ರೆಸ್ ಪಕ್ಷ ಹಾಗೂ ಹೈದರಾಬಾದ್ ಮೂಲದ ಒಂದು ರಾಜಕೀಯ ಪಕ್ಷವೊಂದರ ಕೆಲವು ಮುಖಂಡರ ಮೇಲೂ ಇದೇ ಪ್ರಕರಣದಲ್ಲಿ ಐಟಿ ಇಲಾಖೆ ಕಣ್ಣಿಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ನವೆಂಬರ್‌ನಲ್ಲಿ ದಿಲ್ಲಿ, ಮುಂಬೈ, ಹೈದರಾಬಾದ್, ಈರೋಡ್, ಆಗ್ರಾ ಹಾಗೂ ಗೋವಾದ ಕೆಲವು ವ್ಯಕ್ತಿಗಳ ಮೇಲೆ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಈ ವೇಳೆ ದೊಡ್ಡ ಕಾರ್ಪೋರೆಟ್ ಕಂಪನಿಗಳಿಂದ ಸುಮಾರು 3 ಸಾವಿರ ಕೋಟಿ ರು. ಮೌಲ್ಯದ ನಕಲಿ ಬಿಲ್ ಸೃಷ್ಟಿ, ತೆರಿಗೆ ವಂಚನೆ ಹಾಗೂ ಹವಾಲಾ ವ್ಯವಹಾರ ನಡೆದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಒಂದು ದೇಶ, ಒಂದು ಪಡಿತರ ಚೀಟಿ ಜೂ.1 ರಿಂದ
ಸಾರ್ವಜನಿಕ ಮೂಲಸೌಕರ್ಯ ಯೋಜನೆಗೆ ಮೀಸಲಾಗಿದ್ದ ಹಣವನ್ನು ಲಾಬಿಗಾರರು ಹಾಗೂ ಹವಾಲಾ ಡೀಲರ್‌ಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಆಂಧ್ರಪ್ರದೇಶದ ಪ್ರಮುಖ ವ್ಯಕ್ತಿಯೊಬ್ಬರಿಗೆ 150 ಕೋಟಿ ರು. ನಗದು ಪಾವತಿ ನಡೆದ ಬಗ್ಗೆ ಕೂಡ ಸಾಕ್ಷ್ಯ ಲಭಿಸಿತ್ತು. ದಾಳಿ ವೇಳೆ 4.19 ಕೋಟಿ ರು. ನಗದು, 3.2 ಕೋಟಿ ರು. ಮೌಲ್ಯದ ಚಿನ್ನಾಭರಣ ಲಭಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ