ಹರ್ಯಾಣ ಡ್ರಗ್ಸ್‌ ಮಯ :ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಆರೋಪ

Kannadaprabha News   | Kannada Prabha
Published : Jan 07, 2026, 05:14 AM IST
Congress Leader Randeep Surjewala

ಸಾರಾಂಶ

ಹರ್ಯಾಣ ರಾಜ್ಯಾದ್ಯಂತ ಡ್ರಗ್ಸ್‌ ದಂಧೆ ವ್ಯಾಪಕವಾಗಿ ಹರಡಿದ್ದು, ಯುವಜನತೆಯನ್ನು ಬಲಿಪಡೆದುಕೊಳ್ಳುತ್ತಿದೆ. ಹಳ್ಳಿ, ಪಟ್ಟಣ ಮತ್ತು ಪ್ರತಿ ಜನವಸತಿ ಪ್ರದೇಶವನ್ನು ತಲುಪಿ, ಅತಿ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಚಂಡೀಗಢ: ಹರ್ಯಾಣ ರಾಜ್ಯಾದ್ಯಂತ ಡ್ರಗ್ಸ್‌ ದಂಧೆ ವ್ಯಾಪಕವಾಗಿ ಹರಡಿದ್ದು, ಯುವಜನತೆಯನ್ನು ಬಲಿಪಡೆದುಕೊಳ್ಳುತ್ತಿದೆ. ಹಳ್ಳಿ, ಪಟ್ಟಣ ಮತ್ತು ಪ್ರತಿ ಜನವಸತಿ ಪ್ರದೇಶವನ್ನು ತಲುಪಿ, ಅತಿ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೇ ಜವಾಬ್ದಾರ

 ಇದಕ್ಕೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೇ ಜವಾಬ್ದಾರ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಹರ್ಯಾಣ ಮೂಲದ ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಸಮಸ್ಯೆ

ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ‘ಮಾದಕ ವಸ್ತುಗಳು ಹಳ್ಳಿಗಳು, ಪಟ್ಟಣಗಳು ​​ಮತ್ತು ವಸತಿ ಪ್ರದೇಶಗಳನ್ನು ತಲುಪಿದ್ದು, ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಹಳ್ಳಿಗಳಲ್ಲಿ ವೃದ್ಧರು ಡ್ರಗ್ಸ್‌ನಿಂದ ಸಾವನ್ನಪ್ಪಿದ ಯುವಕರ ಹೆಸರುಗಳನ್ನು ಬರೆದಿಟ್ಟುಕೊಳ್ಳುವಂತೆ ಮಾಡಿದೆ. ಈ ಸಾವಿನ ಸಂಖ್ಯೆಗಳು ಬರೀ ಸಂಖ್ಯೆಗಳಲ್ಲ, ಮುರಿದ ಕುಟುಂಬಗಳು ಮತ್ತು ಛದ್ರವಾದ ಭವಿಷ್ಯದ ಸಂಕೇತ. ಸರ್ಕಾರದ ಡ್ರಗ್ಸ್‌ ವಿರೋಧಿ ಅಭಿಯಾನಗಳು ಕಾಗದಪತ್ರಗಳು ಮತ್ತು ಪ್ರಚಾರಕ್ಕೆ ಸೀಮಿತವಾಗಿವೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೆಎನ್‌ಯು ಮಣ್ಣಲ್ಲಿ ಮೋದಿ, ಶಾ ಸಮಾಧಿ : ವಿದ್ಯಾರ್ಥಿ ಘೋಷಣೆ
ಕರೂರು ಕಾಲ್ತುಳಿತ ಕೇಸಲ್ಲಿ ವಿಜಯ್‌ಗೆ ಸಿಬಿಐ ಸಮನ್ಸ್ : ಜ.12ಕ್ಕೆ ಹಾಜರಿಗೆ ಸೂಚನೆ