* ಗ್ರಾಮೀಣ ಪ್ರದೇಶಗಳನ್ನು ಕೋವಿಡ್ ಮಾರಿಯಿಂದ ರಕ್ಷಿಸಲು ಮಹತ್ವದ ಕ್ರಮ
* ಮನೆ ಬಾಗಿಲಲ್ಲೇ ಆಕ್ಸಿಜನ್ ಸಿಲಿಂಡರ್ ರೀಫಿಲ್!
* ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಸರ್ಕಾರದಿಂದ ವಿನೂತನ ಯೋಜನೆ
ನವದೆಹಲಿ(ಮೇ.10): ಗ್ರಾಮೀಣ ಪ್ರದೇಶಗಳನ್ನು ಕೋವಿಡ್ ಮಾರಿಯಿಂದ ರಕ್ಷಿಸಲು, ಮನೆಮನೆಗೆ ತೆರಳಿ ಪರೀಕ್ಷೆ ನಡೆಸುವ ಅಭಿಯಾನಕ್ಕೆ ನಿರ್ಧರಿಸಿರುವ ಹರ್ಯಾಣ ಸರ್ಕಾರ, ಇದೀಗ ನಗರ ಪ್ರದೇಶಗಳಲ್ಲಿ ಸೋಂಕಿತರ ನೆರವಿಗೆ ಧಾವಿಸಿದೆ. ಸೋಂಕಿತರನ್ನು ಬಹುವಾಗಿ ಕಾಡುತ್ತಿರುವ ಆಕ್ಸಿಜನ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ಆಕ್ಸಿಜನ್ ರೀಫಿಲ್ಲಿಂಗ್ (ಮರುಭರ್ತಿ) ಮಾಡುವ ಯೋಜನೆ ಆರಂಭಕ್ಕೆ ನಿರ್ಧರಿಸಿದೆ. ಇದರಿಂದ ಜನರು ಆಕ್ಸಿಜನ್ ಸಿಲಿಂಡರ್‌ಗಾಗಿ ಅಲೆಯುವುದು ತಪ್ಪಲಿದೆ.
ಆಮ್ಲಜನಕ ಸಿಲಿಂಡರ್‌ಗೆ ರಾಜ್ಯದಲ್ಲಿ ಭಾರೀ ಬೇಡಿಕೆ ಸೃಷ್ಟಿಆಗಿರುವುದು ಹಾಗೂ ಕಾಳಸಂತೆಯಲ್ಲಿ ಸಿಲಿಂಡರ್ ಅನ್ನು ಮಾರಾಟ ಮಾಡುತ್ತಿರುವ ಘಟನೆಗಳು ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
undefined
ಈ ಯೋಜನೆಯಡಿ ಆಮ್ಲಜನಕದ ಅವಶ್ಯಕತೆ ಇರುವ ಕೊರೋನಾ ರೋಗಿಗಳು ಟ್ಡyಜಛ್ಞಿh್ಟy.ಜ್ಞಿ ವೆಬ್‌ಸೈಟ್‌ನಲ್ಲಿ ಕೋರಿಕೆ ಸಲ್ಲಿಸಿದರೆ ಸರ್ಕಾರ ಮನೆ ಬಾಗಿಲಿಗೇ ಆಗಮಿಸಿ ಆಮ್ಲಜನಕ ಸಿಲಿಂಡರ್ ಅನ್ನು ಭರ್ತಿ ಮಾಡಿಕೊಡಲಾಗುವುದು. ಈ ಕಾರ್ಯಕ್ಕೆ ರೆಡ್ ಕ್ರಾಸ್ ಸೊಸೈಟಿ ಹಾಗೂ ಮತ್ತಿತರ ಸ್ವಯಂ ಸೇವಾ ಸಂಘಟನೆಗಳ ನೆರವನ್ನು ಪಡೆಯಲು ಪಡೆಯಲು ಮುಂದಾಗಿದೆ. ವೆಬ್‌ಸೈಟ್‌ನಲ್ಲಿ ನೋಂದಣಿ ಆಗಿರುವ ಸಂಘಟನೆಯ ಸ್ವಯಂಸೇವಕರು ಆಮ್ಲಜನಕ ಸಿಲಿಂಡರ್‌ಗಳನ್ನು ರೋಗಿಗಳ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona