ಇಸ್ರೇಲ್‌ನಲ್ಲಿ 10 ಸಾವಿರ ಜನರಿಗೆ ಕೆಲಸ: ಹರ್ಯಾಣ ಸರ್ಕಾರದ ಆಫರ್‌; ಉದ್ಯೋಗ ಸೃಷ್ಟಿಗೆ ಕಸರತ್ತು

By Kannadaprabha News  |  First Published Dec 17, 2023, 1:49 PM IST

ಹಮಾಸ್‌ ಜೊತೆಗಿನ ಯುದ್ಧ ಆರಂಭವಾದ ಬಳಿಕ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಸೇರಿ ವಿವಿಧ ವಲಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನುರಿತ ಕಾರ್ಮಿಕರ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಅದು ಭಾರತ ಸೇರಿದಂತೆ ವಿವಿಧ ದೇಶಗಳತ್ತ ಮುಖ ಮಾಡಿದೆ.


ಚಂಡೀಗಢ (ಡಿಸೆಂಬರ್ 17, 2023): ಉದ್ಯೋಗ ಸೃಷ್ಟಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳ ನಡುವೆಯೇ 10000 ಜನರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಹರ್ಯಾಣ ಸರ್ಕಾರ ನಿರ್ಧರಿಸಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಕೆಲಸ ಮಾಡಬೇಕಾಗಿರೋದು, ದೂರದ ಇಸ್ರೇಲ್‌ನಲ್ಲಿ!

ಹೌದು. ಹಮಾಸ್‌ ಜೊತೆಗಿನ ಯುದ್ಧ ಆರಂಭವಾದ ಬಳಿಕ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಸೇರಿ ವಿವಿಧ ವಲಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನುರಿತ ಕಾರ್ಮಿಕರ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಅದು ಭಾರತ ಸೇರಿದಂತೆ ವಿವಿಧ ದೇಶಗಳತ್ತ ಮುಖ ಮಾಡಿದೆ.

Tap to resize

Latest Videos

ಇದನ್ನು ಓದಿ: ಇಂಜಿನಿಯರಿಂಗ್ ಕೆಲಸ ಬಿಟ್ಟು ತ್ಯಾಜ್ಯ ಖರೀದಿಸಿ ಮಾಡಿ ಸಕ್ಸಸ್ ಆದ ಯುವಕರು!

ಈ ಹಿನ್ನೆಲೆಯಲ್ಲಿ 10000 ಲಕ್ಷ ಕುಶಲಕರ್ಮಿಗಳ ನೇಮಕ ಮಾಡಿ ಅವರನ್ನು ಇಸ್ರೇಲ್‌ಗೆ ಕಳುಹಿಸಿಕೊಡುವ ಕುರಿತ ಜಾಹೀರಾತೊಂದನ್ನು ಹರ್ಯಾಣ ಸರ್ಕಾರ ನೀಡಿದೆ. ಮೂರು ವರ್ಷ ಕನಿಷ್ಠ ಅನುಭವ ಹೊಂದಿದ, 25-54 ವರ್ಷದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಆಯ್ಕೆಯಾದವರಿಗೆ 6100 ನಿಸ್‌ (1.34 ಲಕ್ಷ ರೂ.) ವೇತನ ಇರುವುದಾಗಿಯೂ ತಿಳಿಸಿದೆ.

ಸುಲಭವಾಗಿ ವರ್ಕ್‌ ಫ್ರಂ ಹೋಂ ಮಾಡಿ ಹಣ ಗಳಿಸ್ಬೋದೆಂದು ನಂಬ್ಕೊಂಡು 14 ಲಕ್ಷ ಕಳ್ಕೊಂಡ ಭೂಪ!

click me!