20 ದಿನಗಳಿಂದ ಹಾರ್ದಿಕ್ ಪಟೇಲ್ ಮನೆಗೆ ಬಂದಿಲ್ಲ: ಪತ್ನಿಯಿಂದ ದೂರು!

Suvarna News   | Asianet News
Published : Feb 14, 2020, 01:41 PM IST
20 ದಿನಗಳಿಂದ ಹಾರ್ದಿಕ್ ಪಟೇಲ್ ಮನೆಗೆ ಬಂದಿಲ್ಲ: ಪತ್ನಿಯಿಂದ ದೂರು!

ಸಾರಾಂಶ

20 ದಿನಗಳಿಂದ ಮನೆಗೆ ಬಂದಿಲ್ವಂತೆ ಹಾರ್ದಿಕ್ ಪಟೇಲ್| ಹಾರ್ದಿಕ್ ನಾಪತ್ತೆಯಾಗಿದ್ದಾರೆಂದು ಪತ್ನಿ ಕಿಂಜಾಲ್ ಪಟೇಲ್ ದೂರು|  ಹಾರ್ದಿಕ್ ಪಟೇಲ್ ನಾಪತ್ತೆಗೆ ಗುಜರಾತ್ ಸರ್ಕಾರವೇ ಕಾರಣ ಎಂದು ದೂರಿದ ಕಿಂಜಾಲ್| ತಮ್ಮ ಪತಿಯನ್ನು ಗುಜರಾತ್ ಸರ್ಕಾರ ಟಾರ್ಗೆಟ್ ಮಾಡಿದೆ ಎಂದ ಕಿಂಜಾಲ್| ಫೆ.11ರಂದು ಅರವಿಂದ್ ಕೇಜ್ರಿವಾಲ್ ಅಭಿನಂದಿಸಿ ಟ್ವೀಟ್ ಮಾಡಿದ್ದ ಹಾರ್ದಿಕ್| 

ಅಹಮದಾಬಾದ್(ಫೆ.14): ಪಟೇಲ್ ಮೀಸಲಾತಿ ಹೋರಾಟಗಾರ ಹಾಗೂ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಹಾರ್ದಿಕ್ ಪಟೇಲ್ ಪತ್ನಿ ಕಿಂಜಾಲ್ ಪಟೇಲ್ ಪೊಲೀಸರಿಗೆ ದೂರು ನೀಡಿದ್ದು, ಕಳೆದ 20 ದಿನಗಳಿಂದ ಹಾರ್ದಿಕ್  ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. 

 ಹಾರ್ದಿಕ್ ಪಟೇಲ್ ನಾಪತ್ತೆಗೆ ಗುಜರಾತ್ ಸರ್ಕಾರವೇ ಕಾರಣ ಎಂದು ದೂರಿರುವ ಕಿಂಜಾಲ್, ತಮ್ಮ ಪತಿಯನ್ನು ಗುಜರಾತ್ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾರ್ದಿಕ್ ಪಟೇಲ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ

ಇದೇ ಫೆಬ್ರವರಿ 11 ರಂದು ದೆಹಲಿ ಚುನಾವಣೆಯಲ್ಲಿ ಜಯಗಳಿಸಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ, ಹಾರ್ದಿಕ್ ಪಟೇಲ್ ಅಧಿಕೃತ ಟ್ವಿಟರ್ ಖಾತೆಯಿಂದ ಅಭಿನಂದನಾ ಟ್ವೀಟ್ ಮಾಡಲಾಗಿತ್ತು.

ಅಲ್ಲದೇ ಫೇ.10ರಂದು ಗುಜರಾತ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದರು. ತಮ್ಮನ್ನು ಜೈಲಿಗೆ ಕಳುಹಿಸಲು ಗುಜರಾತ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಾರ್ದಿಕ್ ಟ್ವೀಟ್’ನಲ್ಲಿ ಆರೋಪಿಸಿದ್ದರು.

ಸದ್ಯ ಹಾರ್ದಿಕ್ ಪಟೇಲ್ ನಾಪತ್ತೆ ಪರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಕಿಂಜಾಲ್ ಪಟೇಲ್ ನೀಡಿರುವ ದೂರನ್ನು ಸ್ವೀಕರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!