ಏನ್‌ ಸ್ಟೆಪ್‌ ಗುರು: ಬಸ್‌ ಸ್ಟ್ಯಾಂಡ್‌ನಲ್ಲಿ ತಾತನ ಡಾನ್ಸ್‌ಗೆ ಯುವಕರೇ ಪೆಚ್ಚು

Published : May 15, 2022, 05:41 PM IST
ಏನ್‌ ಸ್ಟೆಪ್‌ ಗುರು: ಬಸ್‌ ಸ್ಟ್ಯಾಂಡ್‌ನಲ್ಲಿ ತಾತನ ಡಾನ್ಸ್‌ಗೆ ಯುವಕರೇ ಪೆಚ್ಚು

ಸಾರಾಂಶ

ತಾತನ ಡಾನ್ಸ್ ಕಂಡು ಬೆರಗಾದ ಜನ ಹರಿಯಾಣದ ಸಿರ್ಸಾದ ಬಸ್ ನಿಲ್ದಾಣದಲ್ಲಿ ಸಖತ್ ಸ್ಟೆಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ವಯಸ್ಸಿಗೆ ಮೀರಿದ ಸಾಧನೆ ಮಾಡಿ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಸಾಧಿಸಿದ ಅನೇಕ ಹಿರಿಯ ತಲೆಗಳನ್ನು ನಾವಿಗಾಗಲೇ ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬರು ಅಜ್ಜ ಯುವ ತರುಣರಂತೆ ಸಖತ್ ಆಗಿ ಸ್ಟೆಪ್ ಹಾಕಿದ್ದು ಇವರ ಡಾನ್ಸ್ ನೋಡಿ ಯುವಕರು ಕೂಡ ಬೆಚ್ಚಿ ಬೀಳುತ್ತಿದ್ದಾರೆ. ಹರಿಯಾಣದ ಸಿರ್ಸಾದ ಬಸ್ ನಿಲ್ದಾಣದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಎಲ್ಲಾ ಜನರು ಹತಾಶೆಯ ಮುಖಗಳೊಂದಿಗೆ ಈ ಸುಡುವ ಬಿಸಿಲಿನ ಮಧ್ಯೆ ತಮ್ಮ ತಮ್ಮ ಬಸ್‌ಗಳಿಗಾಗಿ ಕಾಯುತ್ತಿರುವಾಗ, ಈ ವಿನೋದ ಪ್ರಿಯ ವಯೋವೃದ್ಧ ಸಖತ್ ಆಗಿ ಡಾನ್ಸ್‌ ಮಾಡುವ ಮೂಲಕ ಬಸ್ ನಿಲ್ದಾಣದಲ್ಲಿದ್ದವರಿಗೆ ಉಚಿತ ಮನೋರಂಜನೆ ನೀಡಿದ್ದಾರೆ. 

ಅಜ್ಜನ ಡಾನ್ಸ್ ನೋಡಿ ಬಸ್‌ ನಿಲ್ದಾಣದಲ್ಲಿದ್ದ ಜನ ಬೆರಗಾಗಿದ್ದಾರೆ. ಬಸ್‌ನಿಂದ ಕೇಳಿ ಬರುತ್ತಿದ್ದ ಗುರ್‌ ನಲೊ ಇಷ್ಕ್‌ ಮಿಥ ಎಂಬ ಹಾಡಿಗೆ ಸಖತ್ ಆಗಿ ಕುಣಿಯುತ್ತಿದ್ದಾರೆ. ಬಿಳಿ ಬಣ್ಣದ ಕುರ್ತಾ ಹಾಗೂ ಧೋತಿಯನ್ನು ಧರಿಸಿದ ಈ ಅಜ್ಜ ಬಸ್‌ ನಿಲ್ದಾಣದಲ್ಲಿದ್ದ ಜನರನ್ನು ಕ್ಯಾರೇ ಮಾಡದೇ ಕುಣಿಯುತ್ತಿದ್ದಾರೆ.  

ಬಲೋಚಿ ಬೆಂಜೋ ವಾದ್ಯದಲ್ಲಿ 'ಆಯೇ ಹೋ ಮೇರಿ ಜಿಂದಗಿ' ಹಾಡು ನುಡಿಸಿದ ಪಾಕ್ ವೃದ್ಧ

ಬಸ್‌ ಮುಂದೆ ಚಲಿಸುತ್ತಿದ್ದಂತೆ ಅಲ್ಲಿದ್ದ ಕೆಲವು ಗಂಡಸರ ಎದುರು ಕುಣಿಯುತ್ತ ಅವರಿಗೂ ಬಿಟ್ಟಿ ಮನೋರಂಜನೆ ನೀಡಿದ್ದಾರೆ. ಅಲ್ಲದೇ ಯಾವುದೇ ಕಾರಣವಿಲ್ಲದೆಯೋ ಖುಷಿಯಾಗಿರಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹಾರ್ಡಿ ಸಂಧು ಅವರ ನಾಹ್ ಗೋರಿಯಾ ಹಾಡಿಗೂ ಅಜ್ಜ ಡಾನ್ಸ್‌ ಮಾಡಿದ್ದು, ಬಸ್‌ ನಿಲ್ದಾಣದಲ್ಲಿ ಬೋರು ಹೊಡೆಯುತ್ತ ಕೂತವರು ಇವರ ಡಾನ್ಸ್ ನೋಡಿ ನಿರಾಳರಾಗಿದ್ದಾರೆ. ಈ ಅಜ್ಜನ ಡಾನ್ಸ್ ಮಾತ್ರ ಯಾವುದೇ ತರುಣರಿಗೆ ಕಡಿಮೆ ಇದ್ದಂತೆ ಇರಲಿಲ್ಲ. 

 

ಇತ್ತೀಚೆಗೆ  95 ವರ್ಷ ವಯಸ್ಸಿನ ಐವರ್ ಬಟನ್ (Ivor Button) ಎಂಬ ವೃದ್ಧರೊಬ್ಬರು ವಿಮಾನದ ಒಳಗೆ ಪಯಣಿಸುವ ಬದಲು ಬೈಪ್ಲೇನ್‌ನ (biplane) ಮೇಲಿರುವ ಕಂಬಕ್ಕೆ ತಮ್ಮನ್ನು ಕಟ್ಟಿಕೊಂಡು ಆಕಾಶದಲ್ಲಿ ಪಯಣಿಸಿದರು. ಬಹುತೇಕ ಜನ 50 ವರ್ಷ ದಾಟಿದವರು ಈ ಸಾಹಸ ಕ್ರೀಡೆ ಎಲ್ಲ ನಮಗಲ್ಲಪ್ಪ ಅಂತ, ಸಾಹಸ ಕ್ರೀಡೆಗಳಿಂದ ಹಿಂದೆ ಸರಿಯುವುದೇ ಹೆಚ್ಚು. ಆದರೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ(ಬ್ರಿಟನ್‌)  95 ವರ್ಷ ವಯಸ್ಸಿನ ವೃದ್ಧರೊಬ್ಬರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದರು. 

ಬೈಕ್ ಏರಿ ಸ್ಟಂಟ್ ಮಾಡಿದ ಅಜ್ಜ: ವಿಡಿಯೋ ವೈರಲ್, ಕೇಸ್ ಜಡಿದ ಖಾಕಿ

ಮುತ್ತಜ್ಜನ ಈ ಧೈರ್ಯಶಾಲಿ ಸಾಹಸವು ಆನ್‌ಲೈನ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಹೀಗೆ ಹಾರುವ ಮೂಲಕ ಅವರು ವಿಶ್ವದ ಅತ್ಯಂತ ಹಳೆಯ ವಿಂಗ್ ವಾಕರ್  ಎಂದು ದಾಖಲೆ ನಿರ್ಮಿಸಿದರು. ಈ ಹಿಂದೆ 2013ರಲ್ಲಿ 93ನೇ ವಯಸ್ಸಿನಲ್ಲಿ ಈ ಸಾಧನೆಯನ್ನು ಮಾಡಿದ ದಿವಂಗತ ಥಾಮಸ್ ಲ್ಯಾಕಿ ಅವರ ಸಾಧನೆಯನ್ನು 95ನೇ ವಯಸ್ಸಿನಲ್ಲಿ ಇವರು ಮಾಡುವ ಮೂಲಕ ಆ ದಾಖಲೆಯನ್ನು ಐವರ್ ಬಟನ್ ಮುರಿದಿದ್ದಾರೆ.

ಗ್ಲೌಸೆಸ್ಟರ್‌ ಶೈರ್‌ನ ಸ್ಟಾವರ್ಟನ್ (Gloucestershire) ವಿಮಾನ ನಿಲ್ದಾಣದಿಂದ ಟೇಕ್‌ ಅಪ್ ಆಗುವ ಮೂಲಕ ಬಟನ್ ಅವರು ಐರಿಶ್ ಸಮುದ್ರದಾದ್ಯಂತ ಒಂದು ಗಂಟೆ 21 ನಿಮಿಷಗಳ ಕಾಲ ಹೀಗೆ ಹಾರಾಟ ನಡೆಸಿದರು. ಈ ಹಾರಾಟದ ಬಳಿಕ ಅವರು ನಾನು ಉತ್ತಮ ಮನಸ್ಸಿನಿಂದ ಹಾರಿದೆ. ನನಗೆ ಭಯವಾಗಲಿಲ್ಲ. ನಾನು ಶೀತವಾಗುವುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೆ ಎಂದು ತಮ್ಮ ಈ ಹಾರಾಟದ ಬಗ್ಗೆ  ದಿ ಇಂಡಿಪೆಂಡೆಂಟ್‌ ಜೊತೆ ಹಂಚಿಕೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !