ಮೋದಿ ನಾಡಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿ ಬಿಲ್‌ಗೆ ರಾಷ್ಟ್ರಪತಿ ಮುರ್ಮು ಅನುಮೋದನೆ

Published : Oct 02, 2026, 06:46 PM IST
Gujarat UCC Bil

ಸಾರಾಂಶ

ಪ್ರತಿಪಕ್ಷಗಳ ವಿರೋಧ, ಕೆಲ ಸಮುದಾಯ ಹಾಗೂ ಮುಖಂಡರ ವಿರೋಧದದ ನಡುವೆ ಮೋದಿ ತವರಲ್ಲಿ ನಾಗರೀಕ ನೀತಿ ಸಂಹಿತೆ(ಯುಸಿಸಿ) ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.

ನವದೆಹಲಿ (ಅ.02) ಪ್ರತಿಪಕ್ಷ ಸೇರಿದಂತೆ ಕೆಲ ನಾಯಕರು, ಪಕ್ಷಗಳ ಭಾರಿ ವಿರೋಧಕ್ಕೆ ಕಾರಣವಾಗಿರುವ ಯುನಿಫಾರ್ಮ್ ಸಿವಿಲ್ ಕೋಡ್ (ಯುಸಿಸಿ) ಮತ್ತೆ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ತವರಾದ ಗುಜರಾತ್‌ನಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿ ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಏಕರೂಪ ನಾಗರೀಕ ನೀತಿ ಸಂಹಿತ ಜಾರಿಗೊಳಿಸಿದ ಎರಡನೇ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಉತ್ತರಖಂಡ ರಾಜ್ಯ ಯುಸಿಸಿ ಜಾರಿಗೊಳಿಸಿದೆ

ರಾಷ್ಟ್ರಪತಿ ಅನುಮೋದನೆಯಿಂದ ಗುಜರಾತ್‌ನಲ್ಲಿ ಶೀಘ್ರದಲ್ಲೇ ಏಕರೂಪ ನಾಗರೀಕ ನೀತಿ ಸಂಹಿತೆ ಕಾನೂನುಗಳು ಜಾರಿಯಾಗಲಿದೆ. ಪ್ರಮುಖವಾಗಿ ಮದುವೆ, ವಿಚ್ಚೇದನೆ, ಪಾಲನೆ, ಆಸ್ತಿ ಹಕ್ತು, ದತ್ತು, ಲೀವ್ ಇನ್ ರಿಲೇಶನ್‌ಶಿಪ್ ಸೇರಿದಂತೆ ಹಲವು ಪ್ರಮುಖ ನಿಯಮಗಳಲ್ಲಿ ಏಕರೂಪತೆ ಬರಲಿದೆ. ಸಾಮಾನ್ಯ ಕಾನೂನು ಚೌಕಟ್ಟನ್ನು ಅನ್ವಯವಾಗಲಿದೆ. ಆದರೆ ಈ ಏಕರೂಪ ಕಾನೂನಿಂದ ಪರಿಸಿಷ್ಠ ಪಂಗಡ ಸಮುದಾಯವನ್ನು ಹೊರಗಿಡಲಾಗಿದೆ.

ಹಲವು ನೀತಿಗಳಲ್ಲಿ ಮಹತ್ವದ ಬದಲು

ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿ ಬಳಿಕ ಮದುವೆ ನೋಂದಣಿಗೆ ದಿನ ನಿಗದಿ ಮಾಡಲಾಗಿದೆ. ಎಲ್ಲಾ ಮದುವೆಗಳನ್ನು 60 ದಿನಗಳ ಒಳಗೆ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ನೋಂದಣಿ ಆಗದಿದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಬಹುಪತ್ನಿತ್ವ ಈ ಕಾನೂನಿನ ಅಡಿ ಅವಕಾಶವಿಲ್ಲ, ಯಾವುದೇ ಧರ್ಮವಾಗಿದ್ದರೂ ಸರಿ, ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ. ಇನ್ನು ಗಂಡು ಅಥವಾ ಹೆಣ್ಣು ಮಕ್ಕಳು ಸಮಾನ ಹಕ್ಕು ಪಡೆಯುತ್ತಾರೆ. ಆಸ್ತಿ ಸೇರಿದಂತೆ ಯಾವುದೇ ವಿಚಾರದಲ್ಲೂ ಮಕ್ಕಳಿಗೆ ಸಮಾನ ಹಕ್ಕು ನೀಡಲಾಗುತ್ತದೆ.

ಲೀವ್ ಇನ್ ರಿಲೇಶನ್‌ಶಿಪ್‌ಗೂ ನೋಂದಣಿ ಕಡ್ಡಾಯವಾಗಿದೆ. ಇನ್ನು ಲೀವ್ ಇನ್ ರಿಲೇಶನ್ ಸಂಬಂಧ ಮುರಿದು ಬಿದ್ದರೂ ಅಧಿಕಾರಿಗಳಿಗೆ ಸೂಚಿಸಬೇಕು. ಇದೇ ವೇಳೆ ಜನಸಿದ ಮಗುವಿಗೆ ತಂದೆಯ ಆಸ್ತಿ ಮೇಲೆ ಕಾನೂನು ಬದ್ಧ ಹಕ್ಕು ಹೊಂದಿರುತ್ತದೆ. ಇನ್ನು ವಿಚ್ಚೇದನಕ್ಕೆ ಒಂದೊಂದು ಧರ್ಮಕ್ಕೆ ಪ್ರತ್ಯೇಕ ನಿಯಮವಿರುವುದಿಲ್ಲ, ಕಾನೂನುಬದ್ಧ ವಿಚ್ಚೇದನ ಮಾತ್ರ ಪರಿಗಣಿಸಲಾಗುತ್ತದೆ.

ಗುಜರಾತ್ ವಿಧಾನಸಭೆಯಲ್ಲಿ ಭಾರಿ ಚರ್ಚೆಗಳ ಬಳಿ ಈ ಬಿಲ್ ಅಂಗೀಕರಿಸಲಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಗದ್ದಲ ನಿರ್ಮಿಸಿತ್ತು. ಕಾಂಗ್ರೆಸ್ ಈ ಚರ್ಚೆಯಿಂದ ಹೊರನಡೆದಿತ್ತು. ಪ್ರತಿಪಕ್ಷಗಳ ಭಾರಿ ವಿರೋಧ, ಗದ್ದಲದ ನಡುವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಶ್ಮೀರ ರೈಲ್ವೆ ಯೋಜನೆಯಲ್ಲಿ ಐತಿಹಾಸಿಕ ಮೈಲಿಗಲ್ಲು: 100 ಕಿ.ಮೀ ವೇಗ ಪಡೆದ ವಂದೇ ಭಾರತ್ ಎಕ್ಸ್‌ಪ್ರೆಸ್!
'ನನ್ನನ್ನು ಆಂಧ್ರದ ಮಗ ಅಂದುಕೊಳ್ಳಿ' ಎಂದ ಅನಂತ್ ಅಂಬಾನಿ ಮಾತಿಗೆ ಭಾವುಕರಾಗಿ ಪುತ್ರನೆಂದು ಘೋಷಿಸಿದ ಸಿಎಂ ನಾಯ್ಡು!