ಗುಜರಾತಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಿದ್ದು, ಗಾಯಾಳುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಅನೇಕ ಸ್ಥಳೀಯ ನಿವಾಸಿಗಳು ಸಹ ಸೇರಿಕೊಂಡಿದ್ದಾರೆ. ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಣೆಯಾಗಿದ್ದರೆ, ಗಾಯಾಳುಗಳಿಗೆ ಸರ್ಕಾರ 50 ಸಾವಿರ ರೂ. ಪರಿಹಾರ ಘೋಷಿಸಿದೆ.
ಗುಜರಾತ್‌ನ (Gujarat) ಮೊರ್ಬಿಯಲ್ಲಿ (Morbi) ಭಾನುವಾರ ಸಂಜೆಯ ಕೇಬಲ್ ಸೇತುವೆ ಕುಸಿತ (Cable Bridge Collapse) ಪ್ರಕರಣದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈವರೆಗೆ ಘಟನೆಯಲ್ಲಿ 132 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಇನ್ನೂ ಹಲವರು ಸಿಲುಕಿರುವ ಸಾದ್ಯತೆ ಇದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ (Rescue Operations) ನಡೆದಿದ್ದು, ಇನ್ನೂ ಮುಂದುವರಿದಿದೆ. ಅವಘಡ ಸಂಭವಿಸಿದಾಗ ತೂಗು ಸೇತುವೆ ಮೇಲೆ ಸುಮಾರು 500 ಮಂದಿಗೂ ಹೆಚ್ಚು ಜನರು ಇದ್ದರು ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇನ್ನು, ಗುಜರಾತಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಿದ್ದು, ಗಾಯಾಳುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಅನೇಕ ಸ್ಥಳೀಯ ನಿವಾಸಿಗಳು ಸಹ ಸೇರಿಕೊಂಡಿದ್ದಾರೆ. ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಮೃತಪಟ್ಟ (Deceased) ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಣೆಯಾಗಿದ್ದರೆ, ಗಾಯಾಳುಗಳಿಗೆ (Injured) ಸರ್ಕಾರ 50 ಸಾವಿರ ರೂ. ಪರಿಹಾರ ಘೋಷಿಸಿದೆ.
ಮೊರ್ಬಿ ಸೇತುವೆ ಕುಸಿತ ಪ್ರಕರಣದಲ್ಲಿ ಈವರೆಗೆ 132 ಜನರು ಮೃತಪಟ್ಟಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮಾಹಿತಿ ನೀಡಿದ್ದಾರೆ. ಇನ್ನು, ಗಾಯಗೊಂಡವರ ಪೈಕಿ ಬಹುತೇಕರು ಮೊರ್ಬಿ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಇಂದು ಪ್ರಧಾನಿ ಮೋದಿ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಭಾನುವಾರ ಸಂಜೆ ಸೇತುವೆ ಕುಸಿದು ಬಿದ್ದ ನಂತರ ಮಚ್ಚು ನದಿಗೆ ಬಿದ್ದವರನ್ನು ರಕ್ಷಿಸಲು ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹಲವು ತಂಡಗಳು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಇದುವರೆಗೆ 177 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Gujaratನಲ್ಲಿ ಕುಸಿದ ತೂಗು ಸೇತುವೆ: 60ಕ್ಕೂ ಹೆಚ್ಚು ಮೃತದೇಹಗಳು ಹೊರಕ್ಕೆ; ಇನ್ನೂ ಹಲವರು ಅಪಾಯದಲ್ಲಿ ಸಿಲುಕಿರುವ ಶಂಕೆ..!
Gujarat | Early morning visuals from the accident site in where more than 100 people have lost their lives after a cable bridge collapsed.
Gujarat Home Minister Harsh Sanghavi is also present at the spot. pic.twitter.com/TxtzWySFGT
ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ 40 ವೈದ್ಯರು ತುರ್ತು ಚಿಕಿತ್ಸೆ ನಡೆಸುತ್ತಿದ್ದು, ರಾಜ್‌ಕೋಟ್ ಮತ್ತು ಸುರೇಂದ್ರನಗರದ ಆಸ್ಪತ್ರೆಗಳು ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳ ಸುಮಾರು 40 ವೈದ್ಯರು ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಸೇವೆಯ ಚಿಕಿತ್ಸೆಯನ್ನು ನಡೆಸುತ್ತಿದ್ದಾರೆ. ಹಾಗೂ, 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 3 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜ್‌ಕೋಟ್‌ಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ರಕ್ಷಣಾ ತಂಡದಲ್ಲಿ 110 ಅಧಿಕಾರಿಗಳು, 149 ಎಸ್‌ಡಿಆರ್‌ಎಫ್ ಅಧಿಕಾರಿಗಳು, ಜಾಮ್‌ನಗರ ಗರುಡ ಕಮಾಂಡೋ ತಂಡ, ಭಾರತೀಯ ಸೇನೆಯ 50 ಡೈವರ್‌ಗಳು ಮತ್ತು 20 ರಕ್ಷಣಾ ದೋಣಿಗಳನ್ನು ಒಳಗೊಂಡ ಐದು ಎನ್‌ಡಿಆರ್‌ಎಫ್ ತಂಡಗಳನ್ನು ಒಳಗೊಂಡಿದೆ.
ಹೆಚ್ಚುವರಿಯಾಗಿ, ವಿವಿಧೆಡೆಯಿಂದ 25 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ಬೀಡುಬಿಟ್ಟಿವೆ.
Gujarat | Early morning visuals from Morbi Civil Hospital where the patients injured in the Morbi cable bridge collapse are admitted.
More than 100 people died after the cable bridge collapsed yesterday evening. pic.twitter.com/S9zv3s8HIP
ಇನ್ನು, ನಮ್ಮ ಅನುಮತಿಯಿಲ್ಲದೆ ಸೇತುವೆ ತೆರೆಯಲಾಗಿದೆ ಎಂದು ಮೊರ್ಬಿ ಪುರಸಭೆ ಅಧಿಕಾರಿ ಹೇಳಿದ್ದಾರೆ.ಹೊಸದಾಗಿ ನವೀಕರಿಸಿದ ಕೇಬಲ್ ಸೇತುವೆಯನ್ನು ಅಧಿಕೃತ ಅನುಮತಿಯಿಲ್ಲದೆ ತೆರೆಯಲಾಗಿದೆ ಎಂದು ಮೊರ್ಬಿ ಪುರಸಭೆ ಮುಖ್ಯ ಅಧಿಕಾರಿ ಸಂದೀಪ್ ಸಿಂಗ್ ಝಾಲಾ ಹೇಳಿಕೊಂಡಿದ್ದು, ಈ ಕೇಬಲ್ ಸೇತುವೆಯನ್ನು ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.
ಈ ಘಟನೆ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಭಾನುವಾರ ರಾತ್ರಿ ಮಾಹಿತಿ ನೀಡಿದ್ದ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರು, ನೀರನ್ನು ಪಂಪ್ ಮಾಡಲು ಸ್ಥಳದಲ್ಲಿ ಇರುವ ಯಂತ್ರೋಪಕರಣಗಳು ಬಹಳಷ್ಟು ಹೂಳು ಇರುವುದರಿಂದ ನಾವು ಮೃತ ದೇಹಗಳನ್ನು ಕೆಳಗೆ ಪತ್ತೆಹಚ್ಚಬಹುದು. ಸೇತುವೆಯು ಓವರ್‌ಲೋಡ್ ಆಗಿದೆ ಮತ್ತು ಅದು ಘಟನೆಗೆ ಕಾರಣವಾಯಿತು ಎಂದು ನಾನು ನಂಬುತ್ತೇನೆ. ರಕ್ಷಣಾ ಕಾರ್ಯದಲ್ಲಿ ಹಲವು ತಂಡಗಳು ನಿರತವಾಗಿವೆ ಎಂದು ಹೇಳಿದ್ದರು.
ಮೋರ್ಬಿ ಕೇಬಲ್ ಸೇತುವೆಯು ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಐತಿಹಾಸಿಕ ರಚನೆಯಾಗಿದೆ. ದುರಸ್ತಿ ಮತ್ತು ನವೀಕರಣದ ನಂತರ, ಕೇವಲ 5 ದಿನಗಳ ಹಿಂದೆ ಅಂದರೆ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಪುನಃ ತೆರೆಯಲಾಯಿತು. ಈ ತೂಗು ಸೇತುವೆಯ ನವೀಕರಣ ಕಾರ್ಯದ ಸರ್ಕಾರಿ ಟೆಂಡರ್ ಅನ್ನು ಓಧವ್‌ಜಿ ಪಟೇಲ್ ಒಡೆತನದ ಒರೆವಾ ಗ್ರೂಪ್‌ಗೆ ನೀಡಲಾಗಿದೆ ಎಂದೂ ವರದಿಯಾಗಿದೆ.