ಸಂಬಂಧಿಯ ಕಂಪನಿಯಲ್ಲಿ ಕೆಲಸ ಮಾಡಲಾಗದೇ ನಾಲ್ಕು ಬೆರಳು ಕತ್ತರಿಸಿಕೊಂಡ ಕಂಪ್ಯೂಟರ್  ಆಪರೇಟರ್ 

By Mahmad Rafik  |  First Published Dec 15, 2024, 1:05 PM IST

ಒಬ್ಬ ಕಂಪ್ಯೂಟರ್ ಆಪರೇಟರ್ ತನ್ನ ಸಂಬಂಧಿಕರ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ ತನ್ನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ. 


ಸೂರತ್: ಸಂಬಂಧಿಕ ವಜ್ರದ  ಕಂಪನಿಯಲ್ಲಿ ಕೆಲಸ ಮಾಡಲು ಆಗದೇ ಕಂಪ್ಯೂಟರ್ ಆಪರೇಟರ್ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡು ಆಸ್ಪತ್ರೆ ಸೇರಿದ್ದಾನೆ. 32 ವರ್ಷದ  ಮಯೂರ್ ತಾರ್ಪರ್ (32) ಬೆರಳುಗಳನ್ನು ಕತ್ತರಿಸಿಕೊಂಡ ವ್ಯಕ್ತಿ. ಬೆರಳುಗಳನ್ನು ಕತ್ತರಿಸಿಕೊಂಡರೆ ಕೆಲಸ  ಮಾಡಲು  ಅನರ್ಹನಾಗುತ್ತೇನೆ ಎಂದುಕೊಂಡು ಈ  ರೀತಿ ಮಾಡಿಕೊಂಡಿದ್ದಾನೆ ಅಂತ ಸೂರ್ ನಗರದ ಪೊಲೀಸರು ತಿಳಿಸಿದ್ದಾರೆ.

ವರಚಾ ಮಿನಿ ಬಜಾರ್ ಮೂಲದ ಅನಭ್ ಜೆಮ್ಸ್ ಕಂಪನಿ ಅಕೌಂಟ್ ವಿಭಾಗದಲ್ಲಿ ಮಯೂರ್  ಕಂಪ್ಯೂಟರ್  ಆಪರೇಟರ್ ಆಗಿ ಕೆಲಸ  ಮಾಡಿಕೊಂಡಿದ್ದರು. ಆದ್ರೆ  ಇಲ್ಲಿ ಕೆಲಸ ಮಾಡಲು ಮಯೂರ್  ಅವರಿಗೆ ಇಷ್ಟವಿರಲಿಲ್ಲ.  ಆದ್ರೆ ಇದನ್ನು ಸಂಬಂಧಿಕರು ಹಾಗೂ ಕುಟುಂಬಸ್ಥರ ಬಳಿ  ಹೇಳಿಕೊಳ್ಳಲು ಆಗಿರಲಿಲ್ಲ. ಹೀಗಾಗಿ ಬೆರಳು ಕತ್ತರಿಸಿಕೊಳ್ಳುವ ನಿರ್ಧಾರಕ್ಕೆ  ಮಯೂರ್ ಬಂದಿದ್ದರು.

Tap to resize

Latest Videos

ಸುಳ್ಳು ಕಥೆ ಕಟ್ಟಿದ್ದ ಮಯೂರ್ 
ಇದಕ್ಕೂ ಮೊದಲು ಮಯೂರ್ ಪೊಲೀಸರ  ಮುಂದೆ ಸುಳ್ಳು ಕಥೆಯೊಂದನ್ನು ಹೇಳಿದ್ದನು. ಡಿಸೆಂಬರ್  8ರಂದು ಸ್ನೇಹಿತರೊಬ್ಬರ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದೆ. ಆದ್ರೆ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್ ಬಳಿ ತಲೆಸುತ್ತು ಬಂದಿದ್ದರಿಂದ ಪ್ರಜ್ಞೆ ಕಳೆದುಕೊಂಡೆ. ಪ್ರಜ್ಞೆ ಬಂದಾಗ ನಾಲ್ಕು ಬೆರಳುಗಳನ್ನು ಕತ್ತರಿಸಲಾಗಿತ್ತು  ಎಂದು ಹೇಳಿಕೆ ನೀಡಿದ್ದನು. ಈ ಪ್ರಕರಣ ಸಂಬಂಧ ಅಮ್ರೋಲಿ ಠಾಣೆಯ ಪೊಲೀಸರು ತನಿಖೆ ನಡೆಸಿದ್ದರು. 

ಇದನ್ನೂ ಓದಿ: ಸರ್ಕಾರಿ ನೌಕರಿ ಸಿಕ್ಕಿದ್ದೇ ದೊಡ್ಡ ತಪ್ಪಾಯ್ತು; ,ಮದುವೆಯಾಗಿ ಗಳಗಳನೇ ಕಣ್ಣೀರಿಟ್ಟ ವರ 

undefined

ನಂತರ ಸೂರತ್‌ ಠಾಣೆಯ ಕ್ರೈಂ ವಿಭಾಗಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು. ಆರಂಭದಲ್ಲಿ  ಪೊಲೀಸರು  ಮಾಟಮಂತ್ರಕ್ಕಾಗಿ ಬೆರಳುಗಳನ್ನು ಕತ್ತರಿಸಿಕೊಂಡು ಹೋಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಯೂರ್ ಸುಳ್ಳು ಹೇಳುತ್ತಿರೋದು ಕಂಡು ಬಂದಿತ್ತು . ಮತ್ತೊಮ್ಮೆ ಸೂರತ್ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ ಮಯೂರ್ ತಪ್ಪೊಪ್ಪಿಕೊಂಡಿದ್ದಾನೆ.

ಸಿಂಗನ್‌ಪೋರ್‌ನ ಚಾರ್ ರಸ್ತಾ ಬಳಿಯ ಅಂಗಡಿಯಲ್ಲಿ ಹರಿತವಾದ ಚಾಕು ಖರೀದಿಸಿದ  ಮಯೂರ್, ರಾತ್ರಿ ಸುಮಾರು 10 ಗಂಟೆಗೆ ಅಮ್ರೋಲಿ ರಿಂಗ್ ರೋಡ್‌ಗೆ ಹೋಗಿದ್ದಾನೆ. ಅಲ್ಲಿ ಬೈಕ್ ನಿಲ್ಲಿಸಿ ಬೆರಳುಗಳನ್ನು ಕತ್ತರಿಸಿಕೊಂಡು ಚೀಲಕ್ಕೆ ಹಾಕಿ ಎಸೆದಿದ್ದಾನೆ.  ರಕ್ತದ ಹರಿವು ನಿಲ್ಲಿಸಲು ಬಟ್ಟೆಯಿಂದ ಕಟ್ಟಿಕೊಂಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಮಯೂರ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೂರು ಬೆರಳುಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ED ದಾಳಿ ಬಳಿಕ ಆತ್ಮಹತ್ಯೆಗೆ ಶರಣಾದ ಉದ್ಯಮಿ ಮನೋಜ್ ಪಾರ್ಮರ್ & ಪತ್ನಿ 

click me!