ಸಂಭಲ್ ಮಸೀದಿ ಸುತ್ತ ಒತ್ತುವರಿ ತೆರವು ವೇಳೆ ಹಳೇ ದೇಗುಲ ಪತ್ತೆ - 46 ವರ್ಷ ಹಿಂದೆ ಬಂದ್‌ ಆಗಿದ್ದ ದೇವಸ್ಥಾನ

By Kannadaprabha News  |  First Published Dec 15, 2024, 8:10 AM IST

ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಸುತ್ತ ಒತ್ತುವರಿ ತೆರವು ವೇಳೆ 46 ವರ್ಷಗಳ ಹಿಂದೆ ಬಂದ್ ಆಗಿದ್ದ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ. 1978ರಲ್ಲಿ ಕೋಮುಗಲಭೆ ಉಂಟಾಗಿ ಹಿಂದೂಗಳು ಗುಳೇ ಹೋಗಿದ್ದರಿಂದ ದೇವಾಲಯ ಮುಚ್ಚಿದ ಸ್ಥಿತಿಯಲ್ಲಿತ್ತು.


ಸಂಭಲ್ (ಉತ್ತರಪ್ರದೇಶ) :ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಶಾಹಿ ಜಾಮಾ ಮಸೀದಿಯ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ಈ ವೇಳೆ 46 ವರ್ಷಗಳ ಹಿಂದೆ ಬಂದ್ ಆಗಿದ್ದ ಹಳೆಯ ಶಿವನ ದೇಗುಲವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

ಸ್ಥಳೀಯಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್‌ ಕಳ್ಳತನ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಪತ್ತೆಯಾಗಿದೆ. ಸಂಭಾಲ್‌ನ ಖಗ್ಗು ಸರೆ ಪ್ರದೇಶ ಶಿವ ದೇವಾಲಯ ಪತ್ತೆಯಾಗಿದ್ದು, ಮತ್ತೆ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ಈ ದೇವಾಲಯ ಸದ್ಯ ಶಿಥಿಲಾವಸ್ಥೆಯಲ್ಲಿದೆ. 1978ರಲ್ಲಿ ಕೋಮುಗಲಭೆ ಉಂಟಾಗಿ ಹಿಂದೂಗಳು ಗುಳೇ ಹೋಗಿದ್ದರು. ಅಂದಿನಿಂದ ದೇವಾಲಯ ಮುಚ್ಚಿದ ಸ್ಥಿತಿಯಲ್ಲಿಯೇ ಇತ್ತು ಎನ್ನುವ ಮಾಹಿತಿ ದೊರಕಿದೆ.

Tap to resize

Latest Videos

ದಾದರ್‌ನಲ್ಲಿ ಧ್ವಂಸ ಆಗಬೇಕಿದ್ದ ಹನುಮಾನ್ ಮಂದಿರ ರಕ್ಷಣೆ
ಮುಂಬೈ: ಮುಂಬೈನ ದಾದರ್ ರೈಲು ನಿಲ್ದಾಣದ ಹೊರಗಿನ ಹನುಮಂತನ ದೇವಸ್ಥಾನವನ್ನು ಧ್ವಂಸ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದಕ್ಕೆ ಉದ್ಧವ್ ಠಾಕ್ರೆ, ಅವರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರ ಬೆನ್ನಲ್ಲೇ ದೇವಸ್ಥಾನ ಧ್ವಂಸ ಆದೇಶವನ್ನು ತಡೆ ಹಿಡಿದಿದ್ದೇವೆ ಎಂದು ಬಿಜೆಪಿ ಹೇಳಿದೆ. 

ಈ ಬಗ್ಗೆ ಬಿಜೆಪಿ ಶಾಸಕ ಮಂಗಳ ಪ್ರಭಾತ್ ಲೋಧಾ ಪ್ರತಿಕ್ರಿಯಿಸಿದ್ದು, 'ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಲ್ಲಿ ಮಾತನಾಡಿ ದೇವಾಲಯದ ಧ್ವಂಸವನ್ನು ತಡೆಯಲಾಗಿದೆ. ದಾದರ್‌ನಲ್ಲಿರುವ ಹನುಮಾನ್ ಮಂದಿರವನ್ನು ರಕ್ಷಿಸಲಾಗುವುದು' ಎಂದಿದ್ದಾರೆ.

undefined

ಇದನ್ನೂ ಓದಿ: ಸಂಭಲ್‌ ಮಸೀದಿ ನಿಯಂತ್ರಣಕ್ಕೆ ಮನವಿ ಸಲ್ಲಿಸಿದ ASI; ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾ ಹಿಂದೂಗಳ ರೀತಿ ಎಂದ ಮುಫ್ತಿ

ಬಾಂಗ್ಲಾ ದೇಗುಲ ಧ್ವಂಸ: 4 ಮಂದಿ ಬಂಧನ 
ಢಾಕಾ: ಉತ್ತರ ಬಾಂಗ್ಲಾದೇಶದ ಸುನಮ್ಮಂಜ್ ಜಿಲ್ಲೆಯ ಲೋಕನಾಥ ದೇವಸ್ಥಾನ ಸೇರಿದಂತೆ ಹಿಂದೂ ಸಮುದಾಯಕ್ಕೆ ಸೇರಿದ ಮನೆ ಸೇರಿ ಆಸ್ತಿ ಧ್ವಂಸ ಪ್ರಕರಣದಲ್ಲಿ 4 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಅಲಿಂ ಹುಸೇನ್, ಸುಲ್ತಾನ್ ಅಹ್ಮದ್ ರಾಜು, ಇಮ್ರಾನ್ ಹುಸೇನ್, ಶಾಜಹಾನ್ ಹುಸೇನ್ ಎಂದು ಗುರುತಿಸಲಾಗಿದೆ. ಈವರೆಗೆ 150 ರಿಂದ 170 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿ.3ರಂದು ಆಕಾಶ್ ದಾಸ್ ಎಂಬಾತ ಫೇಸ್ ಬುಕ್‌ನಲ್ಲಿ ಮಾಡಿದ ಪೋಸ್ಟ್ ಒಂದರಿಂದಾಗಿ ಹಿಂಸೆ ಭುಗಿಲೆದ್ದಿತ್ತು. ಕೂಡಲೇ ಆತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. 

ಬಾಂಗ್ಲಾ ವಿರುದ್ಧ ಕ್ರಮಕ್ಕೆ ಅಮೆರಿಕದ ಕನ್ನಡಿಗನ ಆಗ್ರಹ 
ವಾಷಿಂಗ್ಟನ್: 'ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರವು ಬಾಂಗ್ಲಾದ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಿದೆ ಎಂದು ಅಮೆರಿಕದ ಸಂಸದ, ಕನ್ನಡಿಗ ಥಾಣೆದಾರ್‌ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಂಭಲ್ ಮಸೀದಿ ಸಮೀಕ್ಷೆ ವೇಳೆ ಹಿಂಸೆಗೆ ಪಾಕ್ ನಂಟು: ರಾಹುಲ್ ಭೇಟಿಗೆ ಪೊಲೀಸರ ತಡೆ

click me!