ಮದುಮಕ್ಕಳ ಮೆರವಣಿಗೆ ವೇಳೆ ರಸ್ತೆ ಮೇಲೆ ಹಣದ ಹೊಳೆ ಹರಿಸಿದ ಬಂಧುಗಳು! ಶಾಕಿಂಗ್ ವಿಡಿಯೋ ವೈರಲ್

Published : Nov 21, 2024, 08:59 AM IST
ಮದುಮಕ್ಕಳ ಮೆರವಣಿಗೆ ವೇಳೆ ರಸ್ತೆ ಮೇಲೆ ಹಣದ ಹೊಳೆ ಹರಿಸಿದ ಬಂಧುಗಳು! ಶಾಕಿಂಗ್ ವಿಡಿಯೋ ವೈರಲ್

ಸಾರಾಂಶ

ಮದುವೆ ಸಂದರ್ಭದಲ್ಲಿ ಮದುಮಕ್ಕಳ ಮೇಲೆ ಎಲ್ಲರೂ ಹೂವಿನ ಮಳೆ ಸುರಿಸಿದರೆ ಇಲ್ಲೊಂದು ಕಡೆ ಹಣದ ಹೊಳೆ ಹರಿಸಿದ್ದಾರೆ. ಶಾಕಿಂಗ್ ವಿಡಿಯೋ ವೈರಲ್ ಆಗಿದೆ. 

ಕೆಲವರಿಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ. ಆದರೆ ಇನ್ನುಕೆಲವರಿಗೆ ಇರುವ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದು ತಿಳಿಯದೇ ಬೇಕಾಬಿಟ್ಟೆಯಾಗಿ ಖರ್ಚು ಮಾಡುತ್ತಾರೆ. ಅದರಲ್ಲಿಯೂ ಕೆಲವು ಮದುವೆ ಸಮಾರಂಭಗಳನ್ನು ನೋಡಿದರೆ ಅಲ್ಲಿ ಉಪಯೋಗಿಸಿರುವ ವಷ್ತುಗಳಿಗಿಂತಲೂ ಅನಗತ್ಯ ಖರ್ಚುಗಳೇ ಕಾಣಿಸುವುದು ಉಂಟು. ಆದರೂ ಕೆಲವು ಶ್ರೀಮಂತರು ತಮ್ಮ ಶ್ರೀಮಂತಿಕೆಯನ್ನು ತೋರಿಸುವ ಸಲುವಾಗಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ನಡೆದೇ ಇದೆ. ಇದೀಗ ಅಂಥದ್ದೇ ಒಂದು ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದು ಯಾವ ಪರಿಯ ವಿಡಿಯೋ ಎಂದರೆ, ಇಲ್ಲಿ ಆಗರ್ಭ ಶ್ರೀಮಂತರ ಮದುವೆಯೊಂದರಲ್ಲಿ ಹಣವನ್ನು ಖರ್ಚು ಮಾಡಿದ್ದಲ್ಲದೇ ರಸ್ತೆಯ ಮೇಲೆ ಕಂತೆ ಕಂತೆ ನೋಟನ್ನು ಚೆಲ್ಲಿದ್ದಾರೆ. ನೋಟುಗಳ ಸುರಿಮಳೆಗೈದಿದ್ದಾರೆ!

 ಈ ರೀತಿಯ ಮದುವೆ ಕಂಡು ಬಂದದ್ದು ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ. ಇಲ್ಲಿ ಮದುಮಕ್ಕಳಿಗೆ ಹೂವಿನ ಬದಲು ಹಣದ ಕಂತೆಯನ್ನು ಎಸೆದಿದ್ದಾರೆ. ನೂರು, ಇನ್ನೂರು ಮತ್ತು ಐದು ನೂರು ರೂಪಾಯಿಗಳ ನೋಟನ್ನು ಜೆಸಿಬಿ ಮೇಲೆ ಮತ್ತು ಕಟ್ಟಡಗಳ ಮೇಲೆ ನಿಂತು ಎಸೆದಿದ್ದಾರೆ. ಈ ವಿಡಿಯೋದಲ್ಲಿ ಹಣದ ಹೊಳೆ ಹರಿಸಿರುವುದನ್ನು ಕಾಣಬಹುದಾಗಿದೆ. ಇಪ್ಪತ್ತೂ ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಬೀದಿಗೆ ಎಸೆದಿರುವುದಾಗಿ ಹೇಳಲಾಗುತ್ತಿದೆ. ವಧು ವರರು ಮೆರವಣಿಗೆಯಲ್ಲಿ ಬರುವ ಸಂದರ್ಭದಲ್ಲಿ ಈ ಪರಿಯ ಕೃತ್ಯ ಎಸಗಲಾಗಿದೆ. ಕಟ್ಟಡಗಳ ಮೇಲೆ ನಿಂತಿರುವ ಬಂಧುಗಳು ಹಣವನ್ನು ಎಸೆದಿದ್ದಾರೆ.

ದೂರು ಕೊಟ್ರೆ ನಮ್​ ವ್ಯಾಪ್ತಿಗೆ ಬರಲ್ಲ ಎಂದ ಲೇಡಿ ಪೊಲೀಸ್​ಗೆ ಕಪಾಳಮೋಕ್ಷ ಮಾಡಿದ ಯುವಕ! ವಿಡಿಯೋ ವೈರಲ್​

ಇದರ ವಿಡಿಯೋ ವೈರಲ್ ಆಗುತ್ತಲೇ ಥಹರೇವಾರಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಎಷ್ಟೋ ಮಂದಿ ಹೊತ್ತಿನ ಊಟಕ್ಕೆ ಪರದಾಡುತ್ತಿರುವ ಸಂದರ್ಭದಲ್ಲಿ ಶ್ರೀಮಂತರ ಈ ಪರಿಯ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗೆ ಮಾಡಿ ಕೆಟ್ಟ ಹೆಸರು ಮಾಡುವ ಬದಲು, ಅದನ್ನೇ ಬಡವರಿಗೆ ಹಂಚಿಒಳ್ಳೆಯ ರೀತಿಯಲ್ಲಿ ಹೆಸರು ಮಾಡಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಹಣದ ಹೊಳೆ ಹರಿಸಿರುವ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ವೈರಲ್ ಆಗಿ ಅವರು ಫೇಮಸ್ ಆಗಿದ್ದಾರೆ. ಅವರಿಗೆ ಬೇಕಿದ್ದುದು ಕೂಡ ಇದೇ ಎನ್ನುವ ಮಾತು ಕೇಳಿಬರುತ್ತಿದೆ.

ಹೀಗೆ ಹಣವನ್ನು ಎಸೆದಾಗ ಅದನ್ನು ಆಯ್ದುಕೊಳ್ಳಲು ಹಲವರು ಮುಗಿ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಆಡಂಬರದ ಮದುವೆಗೆ ಈಗ ಇನ್ನೊಂದು ರೀತಿಯ ವಿಚಿತ್ರ ವ್ಯವಸ್ಥೆಯೂ ಸೇರಿಕೊಂಡಿದೆ. ಹಣವನ್ನು ಈ ರೀತಿ ಕೂಡ ಪೋಲು ಮಾಡಬಹುದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅದ್ಧೂರಿ ಮದುವೆ ಇಲ್ಲಿಯವರೆಗೆ ಶ್ರೀಮಂತರ ಟ್ರೆಂಡ್ ಆಗಿದ್ದರೆ, ಈಗ ರಸ್ತೆಯ ಮೇಲೆ ಹಣ ಎಸೆಯುವುದು ಹೊಸ ಟ್ರೆಂಡ್ ಆಗದಿದ್ದರೆ ಸಾಕು ಎನ್ನುತ್ತಿದ್ದಾರೆ ನೆಟ್ಟಿಗರು. ವೈರಲ್ ಆಗಿರುವ ವಿಡಿಯೋ ಅಫ್ಜಲ್ ಮತ್ತು ಅರ್ಮಾನ್ ಎಂಬುವವರ ಮದುವೆಯದ್ದು ಎಂದು ಹೇಳಲಾಗಿದೆ.

ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..