ಮಹಾರಾಷ್ಟ್ರ ಮತಲಂಚ: ಪ್ರಮುಖ ಆರೋಪಿ ಶಫಿ ಬಂಧನ, ಅಮಾಯಕರ ಖಾತೆ ಮೂಲಕ ಅಕ್ರಮ ಹಣ ವರ್ಗಾವಣೆ

By Kannadaprabha News  |  First Published Nov 21, 2024, 7:56 AM IST

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತಕ್ಕಾಗಿ ಲಂಚ ನೀಡಲು ಅಮಾಯಕರ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ನಗನಿ ಅಕ್ರಮ ಮೊಹಮ್ಮದ್‌ ಶಫಿ ಬಂಧನವಾಗಿದೆ. ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.


ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ನಡೆದಿದೆ ಎನ್ನಲಾದ ಮತಕ್ಕಾಗಿ ಲಂಚ ಹಗರಣದ ಹಣವನ್ನು ಅಮಾಯಕರ ಬ್ಯಾಂಕ್‌ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ನಗನಿ ಅಕ್ರಮ ಮೊಹಮ್ಮದ್‌ ಶಫಿ ಎಂಬಾತನನ್ನು ಗುಜರಾತ್‌ನ ಅಹಮದಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಶಫಿ ವಿರುದ್ಧ ಜಾರಿ ನಿರ್ದೇಶನಾಲಯ ಲುಕೌಟ್‌ ನೋಟಿಸ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಆತ, ಅಹಮದಾಬಾದ್‌ನಿಂದ ದುಬೈಗೆ ವಿಮಾನದ ಮೂಲಕ ಪರಾರಿಯಾಗಲು ಯತ್ನಿಸಿದ ವೇಳೆ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ.

Tap to resize

Latest Videos

ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್‌ ಖಾತೆಯಲ್ಲಿ ಅಕ್ರಮವಾಗಿ ಹಣ ಚಲಾವಣೆ ನಡೆದಿದೆ ಎಂದು ಆರೋಪಿಸಿ ನೀಡಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದ್ದ ಇ.ಡಿ. ಅಧಿಕಾರಿಗಳು, ಕಳೆದ ವಾರ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ದಾಳಿ ನಡೆಸಿದ್ದರು. ಬಳಿಕ ಮಾಲೆಗಾಂವ್‌ ಮೂಲದ ಸಿರಾಜ್‌ ಅಹಮದ್‌ ಹರೂನ್‌ ಮೆಮನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ: ಕರ್ಹಾಲ್‌ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ದಲಿತ ಮಹಿಳೆ ಕೊಲೆ? ಎಸ್‌ಪಿ ವಿರುದ್ಡ ಬಿಜೆಪಿ ಕಿಡಿ

ಈ ಮೆಮನ್‌, ಶಫಿ ಸೂಚನೆ ಅನ್ವಯ ಹಲವು ಅಮಾಯಕರ ಬ್ಯಾಂಕ್‌ ಖಾತೆಗಳ ಮೂಲಕ 100 ಕೋಟಿ ರು.ಗೂ ಹೆಚ್ಚಿನ ಹಣದ ವಹಿವಾಟು ನಡೆಸಿದ್ದ. ಜೊತೆಗೆ ಹವಾಲಾ ಜಾಲದ ಮೂಲಕವೂ 14 ಕೋಟಿ ರು. ಪಾವತಿಸಿದ್ದ. ತನಿಖೆ ವೇಳೆ ಇದರಲ್ಲಿ ಶಫಿ ಪಾತ್ರ ಕಂಡುಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಇ.ಡಿ. ಲುಕೌಟ್‌ ನೋಟಿಸ್‌ ಜಾರಿ ಮಾಡಿತ್ತು.

ಹೀಗೆ ವರ್ಗಾವಣೆ ಮಾಡಿದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಜನರಿಂದ ಮತ ಪಡೆಯಲು ಲಂಚಕ್ಕಾಗಿ ಬಳಸಲಾಗಿತ್ತು ಎನ್ನಲಾಗಿದೆ. ಆದರೆ ಹಣವನ್ನು ಯಾವ ಪಕ್ಷದ ಪಕ್ಷದ, ಯಾವ ಅಭ್ಯರ್ಥಿಗಳಿಗಾಗಿ ಬಳಸಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ ಮಾಲೇಗಾಂವ್‌ ಪ್ರಕರಣ ‘ವೋಟ್‌ ಜಿಹಾದ್‌ ಹಗರಣ’ ಎಂದು ಬಿಜೆಪಿ ನಾಯಕ ಕಿರೀಟ್‌ ಸೋಮಯ್ಯ ಆರೋಪಿಸಿದ್ದರು.

ಇದನ್ನೂ ಓದಿ: 

click me!