
ಶ್ರೀನಗರ (ಡಿ. 25): ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದತಿ ಸಂದರ್ಭದಲ್ಲಿ ಭದ್ರತೆಗೆಂದು ಹೆಚ್ಚುವರಿಯಾಗಿ ನಿಯೋಜಿಸಲ್ಪಟ್ಟಿದ್ದ 7 ಸಾವಿರ ಅರೆಸೇನಾ ಯೋಧರನ್ನು ವಾಪಸು ಕರೆಸಿಕೊಳ್ಳುವ ಮಹತ್ವದ ನಿರ್ಧಾರವನ್ನು ಮಂಗಳವಾರ ಕೇಂದ್ರ ಸರ್ಕಾರ ಕೈಗೊಂಡಿದೆ.
ಮಿಲಿಟರಿಗಾಗಿ ಹೊಸ ಇಲಾಖೆ, ಹೊಸ ಬಾಸ್!
ಸಿಆರ್‌ಪಿಎಫ್‌ನ 24, ಬಿಎಸ್‌ಎಫ್‌ನ 12, ಸಿಐಎಸ್‌ಎಫ್‌ನ 12 ಹಾಗೂ ಸಶಸ್ತ್ರ ಸೀಮಾ ಬಲದ 12 ತುಕಡಿಗಳು ಸೇರಿದಂತೆ ಒಟ್ಟು 72 ಅರೆಸೇನಾ ತುಕಡಿಗಳು ಇಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜಿತವಾಗಿದ್ದವು. ಈಗ ಕಾಶ್ಮೀರ ಸಹಜ ಸ್ಥಿತಿಗೆ ಮರಳಿರುವ ಕಾರಣ ಅಲ್ಲಿಂದ ಪಡೆಗಳನ್ನು ತಕ್ಷಣದಿಂದಲೇ ವಾಪಸು ಕರೆಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ