
ಬೆಂಗಳೂರು(ಮಾ.01) ಭಾರತದಲ್ಲಿ ರೈಲ್ವೇ ಸೇವೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್, ಅಮೃತ ಭಾರತ ಸೇರಿದಂತ ಹೊಸ ಹೊಸ ರೈಲುಗಳನ್ನು ನೀಡಲಾಗಿದೆ. ರೈಲು ಪ್ರಯಾಣ ಹೆಚ್ಚು ಆರಾಮದಾಯಕ ಹಾಗೂ ಕೈಗೆಟುಕವ ಬೆಲೆಯಾಗಿ ಪರಿವರ್ತಿಸಲಾಗಿದೆ. ಇದೀಗ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮಾರ್ಚ್ 1 ರಿಂದ ಮಂಗಳೂರು-ಮಡಗಾಂವ್ ಸ್ಪೆಷಲ್ ರೈಲು ಟಿಕೆಟ್ ದರ ಇಳಿಕೆಯಾಗಿದೆ. ಇದೀಗ ಮಂಗಳೂರಿನಿಂದ ಗೋವಾದ ಮಡಗಾಂವ್ ಸೆಂಟ್ರಲ್ ರೈಲು ಟಿಕೆಟ್ ದರ ಕೇವಲ 85 ರೂಪಾಯಿ. ಕಾರಣ ಈ ಸ್ಪೆಷಲ್ ರೈಲು ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ಸೇವೆ ನೀಡಲಿದೆ. ರೈಲ್ವೇ ಇಲಾಖೆ ಪ್ರಮುಖ ನಿರ್ಧಾರದಿಂದ ಇದೀಗ ಕರಾವಳಿ ಭಾಗದ ಜನರಿಗೆ ಭಾರಿ ಅನುಕೂಲವಾಗಲಿದೆ. ಇಷ್ಟೇ ಅಲ್ಲ ಕರ್ನಾಟಕದ ಜನರಿಗೆ ಗೋವಾ ಪ್ರವಾಸ ಮತ್ತಷ್ಟು ಸುಲಭವಾಗಿದೆ.
ಮಂಗಳೂರು-ಮಡಗಾಂವ್ ಸ್ಪೆಷಲ್ ರೈಲು 56616/615 ಸೇವೆ ನೀಡುತ್ತಿದೆ. ಇಂದಿನಿಂದ (ಮಾರ್ಚ್ 1) ಈ ರೈಲಿನ ಟಿಕೆಟ್ ದರ ಶೇಕಡಾ 40 ರಷ್ಟು ಇಳಿಕೆಯಾಗಿದೆ. ಪ್ರಮುಖವಾಗಿ ಈ ಸ್ಪೆಷಲ್ ರೈಲು ಇದೀಗ ಮುಂಗಡ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೇರೆ ರೈಲು ಸೇವೆ ನೀಡಲಿದೆ. ಆದರೆ ಮಂಗಳೂರು-ಮಡಗಾಂವ್ ವಿಶೇಷ ರೈಲು ಮುಂಗಡ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಇದರ ದರ ಬರೋಬ್ಬರಿ ಶೇಕಡಾ 40 ರಷ್ಟು ಇಳಿಕೆ ಮಾಡಲಾಗಿದೆ.
ಬೇಸಿಗೆಯಲ್ಲಿ ಕೂಲ್ ಆಗಿರಲು ಕಡಿಮೆ ದರದಲ್ಲಿ ರೈಲ್ವೇ ಲಡಾಖ್ ಪ್ರವಾಸ ಪ್ಯಾಕೇಜ್
18 ಬೋಗಿ ಹೊಂದಿರುವ ಈ ವಿಶೇಷ ರೈಲು ಮಂಗಳೂರಿನಿಂದ ಗೋವಾದ ಮಡಗಾಂವ್ ನಡುವೆ ಸಂಚಾರ ನಡೆಸುತ್ತಿದೆ. ಇದೀಗ ದಿಢೀರ್ ಆಗಿ ಗೋವಾ ಪ್ರಯಾಣ ಮಾಡಬೇಕು ಎಂದು ನಿರ್ಧರಿಸುವ ಪ್ರಯಾಣಿಕರಿಗೆ, ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ಸಾಧ್ಯವಾಗದ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಅತೀ ಹೆಚ್ಚಿನ ಪ್ರಯಾಣಿಕರು ಮಂಗಳೂರು-ಮಡಗಾಂವ್ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ಗಮಮಿಸಿದ ರೈಲ್ವೇ ಇಲಾಖೆ, ವಿಶೇಷ ರೈಲನ್ನು ಕಾಯ್ದಿರಸದ ರೈಲು ಸೇವೆಯನ್ನಾಗಿ ಪರಿವರ್ತಿಸಿದೆ. ಇದಕ್ಕೆ ಕೊಂಕಣ ರೈಲ್ವೇ ಹಾಗೂ ದಕ್ಷಿಣ ರೈಲ್ವೇ ವಿಭಾಗ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದಲೇ ಈ ವಿಶೇಷ ರೈಲು ಶೇಕಡಾ 40 ರಷ್ಟು ಕಡಿಮೆ ಟಿಕೆಟ್ ದರ ಹಾಗೂ ಟಿಕೆಟ್ ಕಾಯ್ದಿರಿಸದ ರೈಲಾಗಿ ಸೇವೆ ನೀಡುತ್ತಿದೆ.
ಗೋವಾ ಪ್ರಯಾಣ ಮಾಡಲು ಇದೀಗ ಸುಲಭ ಹಾಗೂ ಕಡಿಮೆ ದರದಲ್ಲಿ ಸಾಧ್ಯವಿದೆ. ಇದು ಕರಾವಳಿ ಭಾಗದ ಜನರ ಪ್ರತಿನಿತ್ಯದ ಸಂಚಾರ ರೈಲಾಗಿ ಸೇವೆ ನೀಡಲಿದೆ. ಹಲವು ಕಾರಣಗಳಿಂದ ನಿಂತು ಹೋಗಿದ್ದ ಈ ಸೇವೆಯನ್ನು ಭಾರತೀಯ ರೈಲ್ವೇ ಮತ್ತೆ ಆರಂಭಿಸಿದೆ. ಇದರಿಂದ ಪ್ರಯಾಣಿಕರು ಖುಷಿಯಾಗಿದ್ದಾರೆ. ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗಿದೆ.
ಹಲವು ವರ್ಷಗಳ ಬಳಿಕ ಭಾರತೀಯ ರೈಲ್ವೇ ಇದೀಗ ಕಾಯ್ದಿರಿಸದ ರೈಲು ಸೇವೆ ಮತ್ತೆ ಆರಂಭಿಸುತ್ತಿದೆ. ಪ್ರಮುಖವಾಗಿ ಕೊರೋನಾ ಸಮಯದಲ್ಲಿ ಅನ್‌ರಿಸರ್ವ್ ರೈಲು ಸೇವೆ ರದ್ದು ಮಾಡಲಾಗಿದೆ. ಕೊರೋನಾ ಹರಡುವಿಕೆ, ಸೀಮಿತ ರೈಲು ಸೇವೆಗಳ ಕಾರಣ ಕಾಯ್ದಿರಿಸದ ರೈಲು ಸೇವೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು. ಆದರೆ ಕೊರೋನಾ ನಿಯಂತ್ರಣಕ್ಕೆ ಬಂದು ಕೆಲ ವರ್ಷಗಳೇ ಉರುಳಿದರೂ ಮುಂಗಡ ಟಿಕೆಟ್ ಕಾಯ್ದಿರಿಸದ ರೈಲು ಸೇವೆ ಪುನರ್ ಆರಂಭಗೊಂಡಿರಲಿಲ್ಲ. ಹಲವು ಪ್ರಯಾಣಿಕರು ಅನ್‌ರಿಸರ್ವ್ಡ್ ರೈಲು ಸೇವೆ ಮತ್ತೆ ಆರಂಭಿಸಲು ಮನವಿ ಮಾಡಿದ್ದರು. ಇದೀಗ ಮನವಿಗೆ ಸ್ಪಂದಿಸಿರುವ ರೈಲ್ವೇ ಇಲಾಖೆ ಮೊದಲ ಹಂತದಲ್ಲಿ ಮಂಗಳೂರು-ಮಡಗಾಂವ್ ವಿಶೇಷ ರೈಲನ್ನು ಕಾಯ್ದಿರಿಸದ ರೈಲಾಗಿ ಪರಿವರ್ತಿಸಿದೆ.
ಮಂಗಳೂರಿನಿಂದ- ಗೋವಾದ ಮಡಗಾಂವ್ ಪ್ರಯಾಣಕ್ಕೆ 150 ರೂಪಾಯಿ ಆಗಿತ್ತು. ಇದೀಗ 85 ರೂಪಾಯಿಗೆ ಇಳಿಕೆಯಾಗಿದೆ.
ರೈಲ್ವೆ ಇಲಾಖೆ ಒಂದು ದಿನಕ್ಕೆ ಗಳಿಸೋ ಆದಾಯ ಕೇಳಿದ್ರೆ ದಂಗಾಗ್ತೀರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ