
ನವದೆಹಲಿ(ಮಾ.22): ಪಂಚಾ ರಾಜ್ಯ ಚುನಾವಣೆ ಕ್ಲೀನ್ ಸ್ವೀಪ್ ಮಾಡಲು ತಯಾರಿ ನಡೆಸುತ್ತಿರುವ ಬಿಜೆಪಿಗೆ ಇದೀಗ ಗೋವಾ ಪುರಸಭೆ ಚುನಾವಣೆ ಫಲಿತಾಂಶ ಮತ್ತಷ್ಟು ಉತ್ಸಾಹ ನೀಡಿದೆ. 6 ಪುರಸಭೆಗೆ ನಡೆದ ಚುನಾವಣೆಯಲ್ಲಿ 5 ನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಅಭೂತಪೂರ್ವ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.
ಬಿಜೆಪಿಗೆ ಸತತ ಬೆಂಬಲ ನೀಡುತ್ತಿರುವ ಗೋವಾ ಜನತೆಗೆ ಧನ್ಯವಾದ. ಬಿಜೆಪಿ ಅಭಿವೃದ್ಧಿ ಜೊತೆಗೆ ಜನರಿದ್ದಾರೆ ಅನ್ನೋದನ್ನು ಗೋವಾ ಪುರಸಭೆ ಚುನಾವಣೆ ಫಲಿತಾಂಶ ಸಾಬೀತು ಮಾಡಿದೆ. ಈ ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮವನ್ನು ಶ್ಲಾಘಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ದೀದಿ ನನ್ನ ತಲೆಗೆ ಕಾಲಿಟ್ಟರೂ ಬಂಗಾಳಿಗರ ಕನಸಿಗೆ ಒದಿಯಲು ಅವಕಾಶ ನೀಡುವುದಿಲ್ಲ; ಮೋದಿ!
ಮಾರ್ಚ್ 20 ರಂದು ಗೋವಾ ಪುರಸಭೆ ಚುನಾವಣೆ ನಡೆದಿತ್ತು. ಐದು ಅಭ್ಯರ್ಥಿಗಳು, ಅಲ್ಪೋಯ್ ಪಂಚಾಯಿತಿಯ ಒಬ್ಬರು ಮತ್ತು ಇತರ ಪಂಚಾಯಿತಿಯ ನಾಲ್ವರು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಣಜಿ ಮನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. 30 ರಲ್ಲಿ 25 ಸ್ಥಾನ ಗೆದ್ದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ