'ಎರಡು ಮಕ್ಕಳಿರುವುದಕ್ಕೆ ಹತ್ತೇ ಕೆಜಿ.. ಇಪ್ಪತ್ತು ಮಕ್ಕಳ ಮಾಡಿಕೊಳ್ಳಬೇಕಿತ್ತು'

Published : Mar 22, 2021, 09:29 PM IST
'ಎರಡು ಮಕ್ಕಳಿರುವುದಕ್ಕೆ ಹತ್ತೇ ಕೆಜಿ.. ಇಪ್ಪತ್ತು ಮಕ್ಕಳ ಮಾಡಿಕೊಳ್ಳಬೇಕಿತ್ತು'

ಸಾರಾಂಶ

ಉತ್ತರಾಖಂಡ ಸಿಎಂ ತಿರಾತ್ ಸಿಂಗ್  ಮತ್ತೊಂದು ವಿವಾದಾತ್ಮಕ ಹೇಳಿಕೆ/ ಮಹಿಳೆಯರು ರಿಪ್ಪ್ಡ್ ಜೀನ್ಸ್ ಧರಿಸಿದ್ದಕ್ಕೆ ಕಮೆಂಟ್ ಮಾಡಿದ್ದರು/ ಕೊರೋನಾ ಸಮಯದಲ್ಲಿ ನೀಡಿದ ರೇಷನ್ ನ್ನು ಜನ ಸಂಗ್ರಹಿಸಿ ಮಾರಾಟ  ಮಾಡಿದ್ದಾರೆ/ ಪಕ್ಕದ ಮನೆಯವನಿಗೆ ಜಾಸ್ತಿ ಸಿಕ್ಕಿದೆ ಎಂದು ಹೊಟ್ಟೆ ಉರಿ ಪಟ್ಟುಕೊಂಡರು

ಉತ್ತರಾಖಂಡ(ಮಾ. 22)  ಉತ್ತರಾಖಂಡ ಸಿಎಂ ತಿರಾತ್ ಸಿಂಗ್ ನೀಡಿರುವ ಹೇಳಿಕೆಯೊಂದು ದೊಡ್ಡ ಸುದ್ದಿಯಾಗಿದೆ. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಎರಡು ಜನರಿದ್ದ ಕುಟುಂಬದವರು ಇಪ್ಪತ್ತು ಜನರಿದ್ದ ಕುಟುಂಬದವರು ಪಡೆದ ರೇಷನ್ ನೋಡಿ ಅಸೂಹೆ ಪಟ್ಟುಕೊಂಡಿದ್ದಾರೆ ಎಂದಿದ್ದಾರೆ.

ಅರಣ್ಯ ಸಂರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ  ಪ್ರತಿಯೊಬ್ಬ ಮನುಷ್ಯನಿಗೆ ಸರ್ಕಾರ ತಲಾ  5 ಕೆಜಿ ರೇಷನ್ ನೀಡಿಕೊಂಡು ಬಂದಿದೆ.  ಇದರ ಅರ್ಥ ಎರಡು ಜನ ಇದ್ದ  ಕುಟುಂಬಕ್ಕೆ ಹತ್ತು ಕೆಜಿ. .. ಅದೆ ಇಪ್ಪತ್ತು ಜನರಿದ್ದ ಕುಟುಂಬಕ್ಕೆ ಕ್ವಿಂಟಾಲ್.. ಆದರೆ ಇದು ಅವರಲ್ಲಿಯೇ ಅಸೂಹೆ ಮೂಡಲು ಕಾರಣವಾಗಿದೆ. ನನಗೆ ಹತ್ತು ಕೆಜಿ..ಪಕ್ಕದ ಮನೆಯವನಿಗೆ ಕ್ವಿಂಟಾಲ್ ಎಂದು ಹೊಟ್ಟೆ ಉರಿ ಪಟ್ಟುಕೊಂಡಿದ್ದಾರೆ ಎಂದಿದ್ದಾರೆ .

ಹರಿದ ಜೀನ್ಸ್ ಧರಿಸಿ ಬೀದಿಗೆ ಇಳಿದ ಮಹಿಳಾ ಕಾಂಗ್ರೆಸ್

ಅಲ್ಲಾ ಅಣ್ಣ... ನೀನು ಇಬ್ಬರು ಮಕ್ಕಳು ಮಾಡಿಕೊಂಡಿದ್ದಕ್ಕೆ ನಿನಗೆ ಹತ್ತು ಕೆಜೆ ಸಿಕ್ಕಿದೆ.. ಪಕ್ಕದ ಮನೆಯಲ್ಲಿ ಇಪ್ಪತ್ತು ಮಕ್ಕಳಿರುವುದದಕ್ಕೆ ಅವರಿಗೆ ಕ್ವಿಂಟಾಲ್ ಸಿಕ್ಕಿದೆ.  ಆ ಸಮಯದಲ್ಲಿ ನೀನು ಎರಡೇ ಮಕ್ಕಳನ್ನು ಯಾಕೆ ಮಾಡಿಕೊಂಡು ಈಗ ಹೊಟ್ಟೆ ಉರಿ ಪಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ನೀಡುರುವ ಅಕ್ಕಿ ಅತ್ಯುಚ್ಛ ಗುಣಮಟ್ಟದ್ದಾಗಿದ್ದರಿಂದ ಜನ ಅದನ್ನು ಸಂಗ್ರಹಣೆ ಮಾಡಿ ಮಾರಾಟ ಮಾಡಿದ್ದಾರೆ.  ಸಾಮಾನ್ಯ ದಿನಕ್ಕಿಂತಲೂ ಉತ್ತಮ ಕ್ವಾಲಿಟಿ ಅಕ್ಕಿ ಸಿಕ್ಕಿದ್ದು ಹೊಸ ವ್ಯಾಪಾರಿ ವರ್ಗವೇ ಹುಟ್ಟಿಕೊಂಡಿತು ಎಂದಿದ್ದಾರೆ.

ಆದರೆ ಕಾಂಗ್ರೆಸ್ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.  ದೇಶ ಜನಸಂಖ್ಯಾಸ್ಫೋಟದ ಸಮಸ್ಯೆ ಎದುರಿಸುತ್ತಿದ್ದರೆ ಸಿಎಂ ನೀಡಿರುವ ಹೇಳೀಕೆ ಅದಕ್ಕೆ ವಿರುದ್ಧವಾಗಿದೆ.  ಜನರು ಉತ್ತಮ ಕ್ವಾಲಿಟಿ ಅಕ್ಕಿ ಊಟ ಮಾಡಬಾರದೆ? ಎಂದು ಮರುಪ್ರಶ್ನೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣಕ್ಕೆ ತೆಡಗೆದುಕೊಂಡ ಕ್ರಮಗಳನ್ನು ರಾವತ್ ಕೊಂಡಾಡಿದರು.  ಮಹಿಳೆಯೊಬ್ಬಳು ಹರಿದ ಜೀನ್ಸ್ ತೊಟ್ಟು ನನ್ನ ಬಳಿ ಬಂದು ನಾನು ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯ ಮಾಡಿಕೊಂಡಿದ್ದಳು ಎಂದು ರಾವತ್ ನೀಡಿದ್ದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮಾಡಿತ್ತು. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌