ಪಿಎಂ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌: ಪೈಲಟ್‌ ವಜಾ!

Published : Jan 10, 2021, 12:52 PM IST
ಪಿಎಂ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌: ಪೈಲಟ್‌ ವಜಾ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಾಕಾರಿ ಟ್ವೀಟ್‌| ಗೋ ಏರ್‌ ವಿಮಾನಯಾನ ಸಂಸ್ಥೆಯು ಹಿರಿಯ ಪೈಲಟ್ ವಜಾ| ಉದ್ಯೋಗಿಗಳು ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗೋ ಏರ್‌ ಇಂಥದ್ದನ್ನು ಸಹಿಸುವುದಿಲ್ಲ

ನವದೆಹಲಿ(ಜ.10): ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಾಕಾರಿ ಟ್ವೀಟ್‌ ಮಾಡಿದ್ದ ಆರೋಪ ಸಂಬಂಧ ಗೋ ಏರ್‌ ವಿಮಾನಯಾನ ಸಂಸ್ಥೆಯು ಹಿರಿಯ ಪೈಲಟ್‌ವೊಬ್ಬರನ್ನು ಕೆಲಸದಿಂದ ವಜಾಮಾಡಿದೆ.

‘ಪೈಲಟ್‌ ಮಿಕಿ ಮಲಿಕ್‌ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಹಿನ್ನೆಲೆಯಲ್ಲಿ ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ಪೈಟಲ್‌ ಅನ್ನು ಕೆಲಸದಿಂದ ವಜಾ ಮಾಡಲಾಗಿದೆ. ಉದ್ಯೋಗಿಗಳು ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗೋ ಏರ್‌ ಇಂಥದ್ದನ್ನು ಸಹಿಸುವುದಿಲ್ಲ’ ಎಂದು ಗೋ ಏರ್‌ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಮಿಲಿ ಮಲಿಕ್‌ ಗುರುವಾರ ಪ್ರಧಾನಿ ಬಗ್ಗೆ ಅವಹೇಳನಾಕಾರಿ ಟ್ವೀಟ್‌ ಮಾಡಿ ಬಳಿಕ ಡಿಲೀಟ್‌ ಮಾಡಿದ್ದರು. ಅನಂತರ ಪೈಲಟ್‌ ಟ್ವೀಟರ್‌ ಖಾತೆಯನ್ನು ಅಮಾನತು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: ಮಕ್ಕಳ ಬಗ್ಗೆ ರಶ್ಮಿಕಾ ಮಂದಣ್ಣ ಮಾತು, ಆಗಲೇ ತಾಯಿಯಾದ ಫೀಲಿಂಗ್! ಶೀಘ್ರದಲ್ಲೇ ನಟನೆಗೆ ಗುಡ್‌ಬೈ?